ರೋಷನ್​ ಕುಟುಂಬಕ್ಕೆ ಮತ್ತಷ್ಟು ಆಪ್ತರಾದ ಸಬಾ ಆಜಾದ್; ಹೃತಿಕ್ ಮಕ್ಕಳೊಂದಿಗೆ ಫೋಟೋಗೆ ಭರ್ಜರಿ ಪೋಸ್

ರೋಷನ್​ ಕುಟುಂಬಕ್ಕೆ ಮತ್ತಷ್ಟು ಆಪ್ತರಾದ ಸಬಾ ಆಜಾದ್; ಹೃತಿಕ್ ಮಕ್ಕಳೊಂದಿಗೆ ಫೋಟೋಗೆ ಭರ್ಜರಿ ಪೋಸ್
ರೋಷನ್ ಕುಟುಂಬದೊಂದಿಗೆ ಸಬಾ ಆಜಾದ್​
Image Credit source: Rakesh Roshan/ Twitter

Hrithik Roshan | Hrehaan | Hridhaan: ಇತ್ತೀಚೆಗೆ ಹೃತಿಕ್ ತಂದೆ ಖ್ಯಾತ ನಿರ್ಮಾಪಕ ರಾಕೇಶ್ ರೋಷನ್ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಹಳ ಆಪ್ತವಾದ ಕೌಟುಂಬಿಕ ಫೋಟೋದಲ್ಲಿ ಸಬಾ ಕೂಡ ಕಾಣಿಸಿಕೊಂಡಿದ್ದು, ನಗುತ್ತಾ ಸಂತಸದಿಂದ ಪೋಸ್ ನೀಡಿದ್ದಾರೆ. ಚಿತ್ರದಲ್ಲಿ ಹೃತಿಕ್ ಮಕ್ಕಳೂ ಕೂಡ ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

May 18, 2022 | 4:53 PM

ಬಾಲಿವುಡ್​ನಲ್ಲಿ ಸದ್ಯಕ್ಕೆ ಸಖತ್ ಸುದ್ದಿಯಲ್ಲಿರುವ ಜೋಡಿಗಳಾದ ಹೃತಿಕ್ ರೋಷನ್ (Hrithik Roshan) ಹಾಗೂ ಸಬಾ ಆಜಾದ್ (Saba Azad) ಇದುವರೆಗೆ ತಮ್ಮ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಈರ್ವರ ಪ್ರವಾಸ, ಸುತ್ತಾಟಗಳು, ಫೋಟೋಗಳು ಇಬ್ಬರ ನಡುವಿನ ಆಪ್ತತೆಯನ್ನು ಬಹಿರಂಗಪಡಿಸಿದೆ. ಇದರೊಂದಿಗೆ ಸಬಾ ಹೆಚ್ಚಾಗಿ ಹೃತಿಕ್ ಕುಟುಂಬದ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೃತಿಕ್ ತಂದೆ ಖ್ಯಾತ ನಿರ್ಮಾಪಕ ರಾಕೇಶ್ ರೋಷನ್ (Rakesh Roshan) ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬಹಳ ಆಪ್ತವಾದ ಕೌಟುಂಬಿಕ ಫೋಟೋದಲ್ಲಿ ಸಬಾ ಕೂಡ ಕಾಣಿಸಿಕೊಂಡಿದ್ದು, ನಗುತ್ತಾ ಸಂತಸದಿಂದ ಪೋಸ್ ನೀಡಿದ್ದಾರೆ. ರಾಕೇಶ್ ರೋಷನ್ ಸೋದರ ರಾಜೇಶ್ ರೋಷನ್ ಅವರ ಪುತ್ರ ಈಶಾನ್ ರೋಷನ್ ಹುಟ್ಟುಹಬ್ಬದ ಕಾರಣ ಕುಟುಂಬ ಔತಣಕೂಟದಲ್ಲಿ ಏರ್ಪಡಿಸಿತ್ತು. ಇದರಲ್ಲಿ ಹೃತಿಕ್ ತಮ್ಮ ಮೊದಲ ಪತ್ನಿಯ ಮಕ್ಕಳಾದ ರೆಹಾನ್ ಹಾಗೂ ಹೃದಾನ್ ಜತೆ ಭಾಗಿಯಾಗಿದ್ದರು. ಇವರೊಂದಿಗೆ ತಮ್ಮ ಗೆಳತಿ ಸಬಾರನ್ನೂ ಹೃತಿಕ್ ಕರೆದೊಯ್ದಿದ್ದರು. ನಂತರ ಎಲ್ಲರೂ ಸಂತಸದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಈ ಚಿತ್ರ ಸದ್ಯ ವೈರಲ್ ಆಗಿದೆ.

ಹೃತಿಕ್ ತಂದೆಯೇ ಫೋಟೋ ಹಂಚಿಕೊಂಡಿರುವುದರಿಂದ ಸಬಾ ಹಾಗೂ ಹೃತಿಕ್ ಆಪ್ತತೆಯ ಬಗ್ಗೆ ಅಭಿಮಾನಿಗಳು ಮತ್ತಷ್ಟು ಕುತೂಹಲಗೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಈ ತಾರಾ ಜೋಡಿ ತಮ್ಮ ಸಂಬಂಧವನ್ನು ಯಾವಾಗ ಅಧಿಕೃತವಾಗಿ ಘೋಷಿಸಬಹುದು ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ರಾಕೇಶ್ ರೋಶನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಇದನ್ನೂ ಓದಿ: Hrithik Roshan: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್

ಇತ್ತೀಚೆಗೆ ಸಬಾ ಆಜಾದ್ ನಟನೆಯ ಹೊಸ ಚಿತ್ರ ‘ಮಿನಿಮಮ್’ ಇತ್ತೀಚೆಗೆ ಅನೌನ್ಸ್ ಆಗಿತ್ತು. ಅದಕ್ಕೆ ಶುಭಕೋರಿದ್ದ ಹೃತಿಕ್ ಪರೋಕ್ಷವಾಗಿ ತಮ್ಮ ಸಂಬಂಧವನ್ನು ಪರೋಕ್ಷವಾಗಿ ದೃಢಪಡಿಸಿದ್ದರು. ಕಳೆದ ಕೆಲವು ಸಮಯದಿಂದ ಹೃತಿಕ್ ಹಾಗೂ ಸಬಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​​ ಲೈಫ್​ ಮಾಧ್ಯಮವು ಕೆಲವು ಮೂಲಗಳನ್ನು ಉಲ್ಲೇಖಿಸಿ ಹೃತಿಕ್ ಹಾಗೂ ಸಬಾ ನಡುವಿನ ಆಪ್ತತೆಯ ಬಗ್ಗೆ ವರದಿ ಮಾಡಿತ್ತು. ಅದರಲ್ಲಿ ಹೃತಿಕ್ ಮದುವೆಯ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ನಂತರದಲ್ಲಿ ಸಬಾ ಹೃತಿಕ್ ಕುಟುಂಬದೊಂದಿಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಹೃತಿಕ್ ಮಾಜಿ ಪತ್ನಿ ಸೂಸ್ಸಾನೆ ಖಾನ್ ಅವರ ಹೊಸ ರೆಸ್ಟೋರೆಂಟ್​ ತಿಂಗಳ ಹಿಂದೆ ಗೋವಾದಲ್ಲಿ ಪ್ರಾರಂಭವಾಗಿತ್ತು. ಆಗ ನೀಡಿದ ಪಾರ್ಟಿಯಲ್ಲಿ ಸೂಸ್ಸಾನೆ ತಮ್ಮ ಹಾಲಿ ಗೆಳೆಯ ಅರ್ಸ್ಲಾನ್ ಗೋನಿ ಜತೆ ಕಾಣಿಸಿಕೊಂಡಿದ್ದರೆ ಹೃತಿಕ್ ಸಬಾ ಜತೆ ಕಾಣಿಸಿಕೊಂಡಿದ್ದರು. ಆ ಸಮಾರಂಭದ ಪೋಟೋಗಳು ವೈರಲ್ ಆಗಿದ್ದವು.

ಇದನ್ನೂ ಓದಿ: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on

Most Read Stories

Click on your DTH Provider to Add TV9 Kannada