AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: 110 ಜಂಕ್ಷನ್​ಗಳಲ್ಲಿ ಹೊಸ ಟ್ರಾಫಿಕ್​ ಸಿಗ್ನಲ್​

ವಿಧಾನ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಾಗಿದೆ. ಬೆಂಗಳೂರಿನ 110 ಜಂಕ್ಷನ್​ಗಳಲ್ಲಿ ಅಡಾಪ್ಟಿವ್​ ಟ್ರಾಫಿಕ್​ ಸಿಗ್ನಲ್​ಗಳ ಅಳವಡಿಕೆಗೆ ಸಂಪುಟ ತೀರ್ಮಾನಿಸಿದೆ. ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ಸಂಗ್ರಹಣೆಗಾಗಿ ಪಿಪಿಪಿ ಮಾದರಿಯ ಯೋಜನೆಗೂ ಕ್ಯಾಬಿನೆಟ್​ನ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ.

Bengaluru: 110 ಜಂಕ್ಷನ್​ಗಳಲ್ಲಿ ಹೊಸ ಟ್ರಾಫಿಕ್​ ಸಿಗ್ನಲ್​
110 ಜಂಕ್ಷನ್​ ಗಳಲ್ಲಿ ಹೊಸ ಟ್ರಾಫಿಕ್​ ಸಿಗ್ನಲ್​
ಪ್ರಸನ್ನ ಹೆಗಡೆ
|

Updated on:Sep 26, 2025 | 10:43 AM

Share

ಬೆಂಗಳೂರು, ಸೆಪ್ಟೆಂಬರ್​ 26: ಅಂದಾಜು 56.45 ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ 110 ಜಂಕ್ಷನ್​ಗಳಲ್ಲಿಅಡಾಪ್ಟಿವ್​ ಟ್ರಾಫಿಕ್​ ಸಿಗ್ನಲ್​ಗಳನ್ನು(Traffic Signals) ಅಳವಡಿಸಿಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನ ಸೌಧದಲ್ಲಿ ನಡೆದ ಕ್ಯಾಬಿನೆಟ್​ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇವು ಸ್ವಯಂ ಚಾಲಿತ ಟ್ರಾಫಿಕ್​ ಸಿಗ್ನಲ್​ಗಳಾಗಿ ಇರಲಿವೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿಯ ಜಿಪಿಆರ್​ ರೈಸಿಂಗ್​ ಮೇನ್​ ಮತ್ತು ರಾಜಕಾಲುವೆ ಸಮೀಪದ ನೀರಿನ ಶುದ್ಧೀಕರಣ ಘಟಕದ ಆವರಣದಲ್ಲಿರುವ ಟ್ರೀಟೆಡ್ ವಾಟರ್ ಪಂಪಿಂಗ್ ಸ್ಟೇಷನ್ ಸೇರಿ ದೇವನಹಳ್ಳಿ ಸಮೀಪ ಇರುವ ಐಟಿ ಪಾರ್ಕ್ ಕೈಗಾರಿಕಾ ಪ್ರದೇಶದಲ್ಲಿನ 40 ಎಂಎಲ್‌ಡಿ ಸಾಮರ್ಥ್ಯದ ತೃತೀಯ ಶುದ್ಧೀಕರಣ ಘಟಕದ ಐದು ವರ್ಷದ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ 45 ಕೋಟಿ ರೂಪಾಯಿ ವೆಚ್ಚಕ್ಕೆ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆಯೂ ಸಿಕ್ಕಿದೆ. ಎಲೆಮಲ್ಲಪ್ಪಚೆಟ್ಟಿ ಪ್ರದೇಶದಲ್ಲಿರುವ 15 ಲಕ್ಷ ಲೀಟರ್ ಸಾಮರ್ಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಸಾದರಮಂಗಲದಲ್ಲಿರುವ 5 ಲಕ್ಷ ಲೀಟರ್ ಸಾಮರ್ಥ್ಯದ ಐಎಸ್​ಪಿಎಸ್​ ಮತ್ತು ಪೈಪ್​ಲೈನ್​ ನಿರ್ವಹಣೆ ಮತ್ತು ಕಾರ್ಯಾಚರಣೆಗೆ 19.07 ಕೋಟಿ ಮೀಸಲಿಡಲು ಕ್ಯಾಬಿನೆಟ್​ ತೀರ್ಮಾನಿಸಿದೆ.

ಇದನ್ನೂ ಓದಿ: ಕರ್ನಾಟಕಕ್ಕೂ ಕಾಲಿಟ್ಟ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್​ ವಿವಾದ: ಏನಿದು? ಶುರುವಾಗಿದ್ದು ಎಲ್ಲಿಂದ?

90 ಲಕ್ಷ ಲೀಟರ್ ಸಾಮರ್ಥ್ಯದ ಬೆಳ್ಳಂದೂರು ಸಿವೇಜ್ ಟ್ರೀಟ್‌ಮೆಂಟ್ ಪ್ಲಾಂಟ್‌ನ 5 ವರ್ಷಗಳ ನಿರ್ವಹಣೆಗೆ 23.36 ಕೋಟಿ ರೂಪಾಯಿಗಳ ಅಂದಾಜಿತ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಜೊತೆಗೆ ಬೆಂಗಳೂರಿನ Institute of Gastroenterology Sciences and Organ Transplant ಸಂಸ್ಥೆಗೆ 20 ಕೋಟಿ ರೂಪಾಯಿ ವೆಚ್ಚದಲ್ಲಿ ರೋಬೋಟಿಕ್ ವೈದ್ಯಕೀಯ ಉಪಕರಣ ಖರೀದಿಗೂ ಸಂಪುಟದ ಒಪ್ಪಿಗೆ ಸಿಕ್ಕಿದೆ.

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ ಮತ್ತು ವಿಲೇವಾರಿಗಾಗಿ ಪಿಪಿಪಿ ಮಾದರಿಯ ಯೋಜನೆಗೂ ಕ್ಯಾಬಿನೆಟ್​ನಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಪ್ರತಿನಿತ್ಯ 1750 ಮೆಟ್ರಿಕ್​ ಟನ್​ ಗಳಷ್ಟು ಕಟ್ಟಡಗಳ ಹಾಗೂ ನಿರ್ಮಾಣ ಸಾಮಗ್ರಿಗಳ ಭಗ್ನಾವಶೇಷ ಸಂಗ್ರಹಣೆ ಅಂದಾಜಿಸಲಾಗಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 10:35 am, Fri, 26 September 25