AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cabinet Meeting: ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳು, ವಿವರಗಳು ಇಲ್ಲಿವೆ

Basavaraj Bommai: ಮೂವರು ಕೆಎಎಸ್ ಅಧಿಕಾರಿಗಳಾದ ನಾಗರಾಜ್, ಅರುಣ ಪ್ರಭ, ಅಪರ್ಣ ಮೇಲಿನ ಲೋಕಾಯುಕ್ತ ಕೇಸ್ ಕೈ ಬಿಡಲು ಸಂಪುಟ ತೀರ್ಮಾನ ಮಾಡಿದೆ. 62 ಹೊಸ 108 ಌಂಬುಲೆನ್ಸ್​ ಖರೀದಿಗೆ 98.9 ಕೋಟಿ ರೂ. ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ಅಸ್ತು ಎಂದಿದೆ.

Cabinet Meeting: ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳು, ವಿವರಗಳು ಇಲ್ಲಿವೆ
ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳು
TV9 Web
| Updated By: ಸಾಧು ಶ್ರೀನಾಥ್​|

Updated on: Nov 03, 2022 | 5:56 PM

Share

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ (Karnataka CM Basavaraj Bommai) ನೇತೃತ್ವದ ಸಂಪುಟ ಸಭೆ (cabinet meeting) ಇಂದು ಮಧ್ಯಾಹ್ನ ನಡೆದಿದೆ. ಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿವರಗಳು ಇಲ್ಲಿವೆ. ಮೂವರು ಕೆಎಎಸ್ ಅಧಿಕಾರಿಗಳಾದ ನಾಗರಾಜ್, ಅರುಣ ಪ್ರಭ, ಅಪರ್ಣ ಮೇಲಿನ ಲೋಕಾಯುಕ್ತ ಕೇಸ್ ಕೈ ಬಿಡಲು ಸಂಪುಟ ತೀರ್ಮಾನ ಮಾಡಿದೆ. ಬೆಂಗಳೂರಿನ ಬ್ಯಾಟರಾಯನ ಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣಕ್ಕೆ ಕರೆಯಲಾಗಿದ್ದ ಟೆಂಡರ್ ರದ್ದು ಪಡಿಸಲಾಗಿದೆ. ಹೊಸ ಟೆಂಡರ್ ಕರೆಯಲು ಸಚಿವ ಸಂಪುಟ ಅನುಮತಿ ನೀಡಿದೆ. ಬೆಂಗಳೂರು ರಸ್ತೆ ಅಭಿವೃದ್ಧಿಗೆ ಸಂಪುಟ ಸಭೆ ಅನುಮತಿ ನೀಡಿದ್ದು, ವರ್ತೂರು ಬಳಿ ಎಲಿವೇಟೆಡ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ ಅಂಕಿತ ಹಾಕಲಾಗಿದೆ. 1.3 ರಿಂದ 1.9 ಕಿ.ಮೀ. ವರೆಗೆ ವಿಸ್ತರಣೆಗಾಗಿ ಅನುಮತಿ ದೊರೆತಿದೆ. ತತ್ಸಂಬಂಧ ಭೂಸ್ವಾಧೀನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2095 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. 262 ಹೊಸ 108 ಌಂಬುಲೆನ್ಸ್​ ಖರೀದಿಗೆ 98.9 ಕೋಟಿ ರೂ. ನೀಡಲು ಸಂಪುಟ ಅಸ್ತು ಎಂದಿದೆ.

ಇನ್ನು ರಾಜ್ಯದಲ್ಲಿ ಹೊಸದಾಗಿ ಎರಡು ಕ್ರಿಕೆಟ್ ಕ್ರೀಡಾಂಗಣಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನೀಡಿದೆ. ಬಳ್ಳಾರಿಯಲ್ಲಿ KSCAಗೆ 19.26 ಎಕರೆ ಭೂಮಿ ನೀಡಲು ತೀರ್ಮಾನ, ಹಾಗೆಯೇ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಕಬಕದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 23.25 ಎಕರೆ ಜಮೀನು ನೀಡಲು ಸಂಪುಟ ಅನುಮೋದಿಸಿದೆ.

ಬಳ್ಳಾರಿಯಲ್ಲಿ ಹೊಸದಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಏರ್​ಪೋರ್ಟ್​ ನಿರ್ಮಾಣಕ್ಕೆ ಗಣಿ ಪ್ರದೇಶದಿಂದ ಸಂಗ್ರಹವಾಗುವ ಕೆಎಂಆರ್​​ಸಿ ಫಂಡ್​​ ಬಳಕೆ ಮಾಡಲಾಗುವುದು. 2008ರಲ್ಲಿ ತಮಿಳುನಾಡಿನ ಚೆನ್ನೈ ಮೂಲದ ಮಾರ್ಗ್ ಸಂಸ್ಥೆಗೆ ನೀಡಲಾಗಿದ್ದ ಗುತ್ತಿಗೆ ರದ್ದು ಪಡಿಸಲಾಗಿದೆ. 2010ರವರೆಗೆ ನಿರ್ಮಾಣ ಮಾಡದ ಕಾರಣ ಗುತ್ತಿಗೆ ರದ್ದುಪಡಿಸಲಾಗಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡಲು ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮಕ್ಕೆ ಅಸ್ತು ಎನ್ನಲಾಗಿದೆ. ಗುಜರಾತ್ ಮಾದರಿಯಲ್ಲಿ ಸ್ವಲ್ಪ ಬದಲಾಯಿಸಿಕೊಂಡು ರಾಜ್ಯದಲ್ಲಿ ಜಾರಿ ಮಾಡಲಾಗುವುದು. ತುಮಕೂರು, ಧಾರವಾಡದಲ್ಲಿ ವಿಶೇಷ ಹೂಡಿಕೆ ವಲಯ ಸ್ಥಾಪನೆಯಾಗಲಿದೆ. ಇನ್ನು ಕೆಐಎಡಿಬಿಯಿಂದಲೇ ಮೇಲ್ವಿಚಾರಣೆ ಮಾಡಲು ನಿರ್ಧಾರ ತೆಗೆದುಕೊಲ್ಳಲಾಗಿದೆ.

ಸಾರಿಗೆ ವಾಹನಗಳಿಗೆ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆಯಾಗಲಿದೆ. ಕೇಂದ್ರ ಸಹಭಾಗಿತ್ವದಲ್ಲಿ 20.36 ಕೋಟಿ ವೆಚ್ಚದಲ್ಲಿ ಅಳವಡಿಕೆಗೆ ಅಸ್ತು ಅನ್ನಲಾಗಿದೆ.

ತಗಚಿಗೆರೆಯಲ್ಲಿ ಗೃಹ ಮಂಡಳಿಗೆ ಕೊಟ್ಟಿದ್ದ ಭೂಮಿಯಲ್ಲಿ ರೈತರಿಗೆ ನಿವೇಶನ ಮಾಡಿಕೊಡಲು ಸಂಪುಟ ಒಪ್ಪಿಗೆ ನೀಡಿದೆ. ಗೋಕಾಕ್, ಕೌಜಲಗಿ ಸುತ್ತಮುತ್ತ ಏತ ನೀರಾವರಿ ಯೋಜನೆಗಾಗಿ 32 ಕೋಟಿ ರೂ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ.