ಓಂ ಪ್ರಕಾಶ್ ಹತ್ಯೆ: ಪತ್ನಿ ಪಲ್ಲವಿಗಿರುವ ಸ್ಕಿಜೋಫ್ರೇನಿಯಾ ರೋಗ ಎಷ್ಟು ಅಪಾಯಕಾರಿ? ಲಕ್ಷಣಗಳೇನು?

ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಕೊಲೆಯಾಗಿದ್ದಾರೆ. ಓಂ ಪ್ರಕಾಶ್​ ಅವರನ್ನು ಅವರ ಪತ್ನಿ ಪಲ್ಲವಿಯವರು ಚಾಕುವಿನಿಂದ 8-10 ಬಾರಿ ಇರಿದು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಪಲ್ಲವಿಯವರು ಸ್ಕಿಜೋಫ್ರೇನಿಯಾ ರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ, ಏನಿದು ಸ್ಕಿಜೋಫ್ರೇನಿಯಾ ರೋಗ, ಹೇಗೆ ಬರುತ್ತದೆ, ಲಕ್ಷಣಗಳೇನು? ಇಲ್ಲಿದೆ ವಿವರ

ಓಂ ಪ್ರಕಾಶ್ ಹತ್ಯೆ: ಪತ್ನಿ ಪಲ್ಲವಿಗಿರುವ ಸ್ಕಿಜೋಫ್ರೇನಿಯಾ ರೋಗ ಎಷ್ಟು ಅಪಾಯಕಾರಿ? ಲಕ್ಷಣಗಳೇನು?
ಪಲ್ಲವಿ ಮತ್ತು ಓಂ ಪ್ರಕಾಶ್ ​ದಂಪತಿ
Edited By:

Updated on: Apr 21, 2025 | 6:04 PM

ಬೆಂಗಳೂರು, ಏಪ್ರಿಲ್​ 21: ನಿವೃತ್ತ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ (68)​ ಕೊಲೆ (Om Prakash Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಪಲ್ಲವಿಯವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಪಲ್ಲವಿಯವರನ್ನು ವಿಚಾರಣೆಗೆ ಒಳಪಡಿಸಿದಾಗ, ಹಲವು ವಿಚಾರಗಳು ಬಹಿರಂಗಗೊಂಡಿವೆ. ಓಂ ಪ್ರಕಾಶ್​ ಅವರ ಪತ್ನಿ, ಆರೋಪಿ ಪಲ್ಲವಿಯವರು ಸ್ಕಿಜೋಫ್ರೇನಿಯಾ (Schizophrenia) ಎಂಬ ರೋಗದಿಂದ ಬಳಲುತ್ತಿದ್ದಾರೆ ಎಂಬ ಅಂಶ ತಿಳಿದುಬಂದಿದೆ.

ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿರುವ ಪಲ್ಲವಿಯವರು ಪತಿ ಓಂ ಪ್ರಕಾಶ್​ ಅವರ ಇಲ್ಲಸಲ್ಲದ ಊಹೆ ಮಾಡಿಕೊಳ್ಳುತ್ತಿದ್ದರು. ಗನ್‌ ಹಿಡಿದುಕೊಂಡು ಭಯ ಪಡಿಸುತ್ತಿದ್ದಾರೆ ಅಂತ ಹೇಳುತ್ತಿದ್ದರು. ಪತಿ ಓಂ ಪ್ರಕಾಶ್​ ಗನ್​ ಹಿಡಿದುಕೊಂಡು ಭಯ ಪಡಿಸುತ್ತಾರೆ ಅಂತ ಪತ್ನಿ ಪಲ್ಲವಿ ತಮ್ಮ ಫ್ಯಾಮಿಲಿ ವಾಟ್ಸಪ್​ ಗ್ರೂಪ್​ ಮತ್ತು ಐಪಿಎಸ್ ಅಧಿಕಾರಿಗಳ ಗ್ರೂಪ್​ನಲ್ಲಿ ಸಂದೇಶ ಕಳುಹಿಸಿದ್ದರು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಸ್ಕಿಜೋಫ್ರೇನಿಯಸಮಸ್ಯೆಯಿಂದ ಬಳಲುತ್ತಿರುವ

ಸ್ಕಿಜೋಫ್ರೇನಿಯ ರೋಗ ಹೇಗೆ ಬರುತ್ತದೆ?

ಸ್ಕಿಜೋಫ್ರೇನಿಯ ರೋಗ ಹೇಗೆ ಬರುತ್ತದೆ ಎಂಬುವುದಕ್ಕೆ ಸ್ಪಷ್ಟವಾದ ಕಾರಣಗಳಿಲ್ಲ. ಆದರೆ, ಅತಿಯಾದ ಒತ್ತಡ, ಡ್ರಗ್ಸ್, ಅತಿಯಾಗಿ ಮದ್ಯಪಾನ ಮಾಡುವುದು, ಅನುವಂಶಿಕ ಅಥವಾ ಮೆದುಳಿಗೆ ಸಂಬಂಧಿಸಿದ ಯಾವುದೇ ದೀರ್ಘಕಾಲದ ಕಾಯಿಲೆಯಿಂದ ಸ್ಕಿಜೋಫ್ರೇನಿಯಾ ಬರಬಹುದು.

ಇದನ್ನೂ ಓದಿ
ತಾಯಿ ಕೊಲೆ ಬೆದರಿಕೆ ಹಾಕಿದ್ರು, ಅವರಿಂದಲೇ ಹತ್ಯೆ ಶಂಕೆ: ಓಂ ಪ್ರಕಾಶ್ ಪುತ್ರ
ಓಂ ಪ್ರಕಾಶ್​ ಕೊಲೆ ಪ್ರಕರಣ: ನಿವೃತ್ತ ಪೊಲೀಸ್‌ ಮಹಾನಿರ್ದೇಶಕರ ಪತ್ನಿ ಬಂಧನ
ಓಂ ಪ್ರಕಾಶ್​ ಕೊಲೆ: ತನಿಖಾಧಿಕಾರಿಗಳ ಎದುರು ಕೊಲೆ ರಹಸ್ಯ ಬಿಚ್ಚಿಟ್ಟ ಪಲ್ಲವಿ
ಉತ್ತರ ಕನ್ನಡದ ಜೋಯಿಡಾದಲ್ಲಿ ಶ್ರೀಗಂಧ ತೋಟ ಹೊಂದಿದ್ದ ಓಂ ಪ್ರಕಾಶ್

ಯಾವ ವಯಸ್ಸಿನವರಿಗೆ ಬರುತ್ತದೆ?

ಸ್ಕಿಜೋಫ್ರೇನಿಯಾದಿಂದ ಬಳಲುವ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನವಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಈ ಸ್ಕಿಜೋಫ್ರೇನಿಯಾ 15-25 ವರ್ಷ ಒಳಗಿನ ಪುರುಷರಲ್ಲಿ ಮತ್ತು 25-35 ವರ್ಷ ಮಹಿಳೆಯರಲ್ಲಿ ಕಂಡುಬರುತ್ತದೆ. ಸ್ಕಿಜೋಫ್ರೇನಿಯಾದ ಹೊಸ ರೂಪಾಂತರ 45 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕಂಡುಬರುತ್ತದೆ. ಮಕ್ಕಳಿಗೆ ಸ್ಕಿಜೋಫ್ರೇನಿಯಾ ರೋಗ ಬರುವುದು ವಿರಳಾತಿ ವಿರಳ.

ಸ್ಕಿಜೋಫ್ರೇನಿಯಾ ರೋಗದ ಲಕ್ಷಣಗಳೇನು?

ಸ್ಕಿಜೋಫ್ರೇನಿಯಾ ಬಾಧಿತರು ಇತರರೊಂದಿಗೆ ಬೆರೆಯಲು, ಮಾತನಾಡುಲು ಹೆದರುತ್ತಾರೆ. ನಡುವಳಿಕೆಯಲ್ಲಿ ಅನೇಕ ಬದಲಾವಣೆಗಳಿರುತ್ತವೆ. ಹದಿಹರೆಯದವರಲ್ಲಿ ರೋಗಲಕ್ಷಣ ಗುರುತಿಸುವುದು ತುಂಬಾ ಕಷ್ಟಕರವಾಗಿದೆ. ಒಂಟಿಯಾಗಿ ಬದುಕುವುದು, ಜನಸಂದಣಿ ಇರುವ ಸ್ಥಳಗಳಿಗೆ ಹೋಗಲು ಭಯಪಡುವುದು, ಗೊಂದಲದ ಸ್ಥಿತಿಯಲ್ಲಿರುವುದು ಮತ್ತು ವಿಚಿತ್ರ ಭಾವನೆಗಳು, ಪರಿಸ್ಥಿತಿಗೆ ಅನುಗುಣವಾಗಿ ಭಾವನೆ ಅರ್ಥಮಾಡಿಕೊಳ್ಳದಿರುವುದು. ಹಸಿವಿನ ಬದಲಾವಣೆ, ಮುಖ ಬಿಳುಪು, ತೂಕ ಇಳಿಕೆ, ನಿತ್ಯದ ಕೆಲಸ ಸರಿಯಾಗಿ ನಿರ್ವಹಿಸಲಾಗುವುದಿಲ್ಲ ಎಂದು ನರ ಮತ್ತು ಮನೋವೈದ್ಯಕೀಯ ತಜ್ಞ ಡಾ. ಅಶೋಕ ಶೆಟ್ಟಿ ಹೇಳಿದ್ದಾರೆ.

ಸ್ಕಿಜೋಫ್ರೇನಿಯಾ ರೋಗಿಗಳಿಗೆ ಖಾಯಿಲೆ ಬಗ್ಗೆ ಅರಿವು ಇರುವುದಿಲ್ಲ. ಸಕಾಲದಲ್ಲಿ ಔಷಧ ಪಡೆದರೆ ಯಾವುದೇ ತೊಂದರೆಯಾಗುವುದಿಲ್ಲ. ಸ್ಕಿಜೋಫ್ರೇನಿಯಾ ಲಕ್ಷಣಗಳು ಪಲ್ಲವಿಯವರಲ್ಲಿ ಇದ್ದ ಹಾಗೆ ಕಾಣಿಸುತ್ತೆ. ಸರಿಯಾದ ಚಿಕಿತ್ಸೆ ಕೊರತೆಯಂದಲೂ ಹೀಗೆ ಆಗಿರಬಹುದು. ಮುಂದಿನ ಸ್ಥಿತಿ ಬಗ್ಗೆ ಅರಿವು ಇರುವುದಲ್ಲ. ಅಪರಾಧ ಮನೋಭಾವ ಕೂಡ ಇರವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಓಂ ಪ್ರಕಾಶ್​ ಕೊಲೆ: ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ

ಸ್ಕಿಜೋಫ್ರೇನಿಯಾಗೆ ಚಿಕಿತ್ಸೆ ಏನು?

ಸ್ಕಿಜೋಫ್ರೇನಿಯಾ ಪತ್ತೆಗೆ ನಿಖರ ಪರೀಕ್ಷೆಗಳಿಲ್ಲ. ರೋಗಿಯ ವೈದ್ಯಕೀಯ ಪ್ರಕರಣದ ಇತಿಹಾಸ, ಮಾನಸಿಕ ಸ್ಥಿತಿ, ಸಾಮಾಜಿಕ ಅಂಶಗಳು ಮತ್ತು ರೋಗಲಕ್ಷಣಗಳನ್ನ ವೈದ್ಯರು ಮೌಲ್ಯಮಾಪನ ಮಾಡುತ್ತಾರೆ. ಧ್ಯಾನ, ಜನರೊಂದಿಗೆ ಬೆರೆಯುವುದು. ವರ್ತನೆಯ ಚಿಕಿತ್ಸೆ, ಔಷಧಿಗಳ ಮೂಲಕ ನಿಯಂತ್ರಣ ಮಾದಕ ವ್ಯಸನ ಮತ್ತು ಧೂಮಪಾನದಿಂದ ರೋಗಿಗಳನ್ನು ದೂರವಿರಿಸಬೇಕು.

ಇಂಥಾ ಸಮಸ್ಯೆಗಳಿಂದಾಗಿಯೇ, ಪತ್ನಿ ಪಲ್ಲವಿ ತನ್ನ ಮಗಳಿಗೆ ಆಸ್ತಿ ಮಾಡಿಸಲು ಕಿರಿಕ್‌ ಮಾಡಿರಲೂಬಹುದು. ಇದನ್ನು ಅಲ್ಲಗಳೆದಿದ್ದ ಓಂ ಪ್ರಕಾಶ್‌ ಅವರನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಪೊಲೀಸರ ತನಿಖೆಯಿಂದ ಕೊಲೆಗೆ ಅಸಲಿ ಕಾರಣ ತಿಳಿದು ಬರಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:01 pm, Mon, 21 April 25