ಸಾರಿಗೆ ನಿಗಮಗಳಿಗೆ 5,675 ಹೊಸ ಬಸ್ ಖರೀದಿ, 8 ಸಾವಿರ ಹುದ್ದೆಗಳ ನೇಮಕಾತಿಗೆ ಸರ್ಕಾರ ನಿರ್ಧಾರ
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಸಾರಿಗೆ ಇಲಾಖೆಯಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದು 8 ಸಾವಿರ ಹುದ್ದೆಗಳ ನೇಮಕಾತಿಗೆ ಸಚಿವರು ಸೂಚನೆ ನೀಡಿದ್ದಾರೆ. ಜೊತೆಗೆ 5,675 ಬಸ್ಗಳನ್ನು ಖರೀದಿಸಲು ಸಿಎಂ ಹೇಳಿದ್ದಾರೆ. ಹೊಸ ಬಸ್‌ಗಳ ಖರೀದಿಗೆ ಬಜೆಟ್ ನಲ್ಲಿ 500 ಕೋಟಿ ಒದಗಿಸಲಾಗಿದೆ.
ಬೆಂಗಳೂರು, ಅ.21: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯನವರು (Siddaramaiah) ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು 5,675 ಬಸ್ಗಳನ್ನು ಖರೀದಿಸಲು ಪ್ರಕ್ರಿಯೆ ತ್ವರಿತಗೊಳಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಮತ್ತೊಂದೆಡೆ ಸಭೆ ಬಳಿಕ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು, 2016 ರಿಂದ 13,800 ಜನ ನಿವೃತ್ತರಾಗಿದ್ದಾರೆ. 8 ಸಾವಿರ ಹುದ್ದೆಗಳ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿದ್ದು, ಇವತ್ತು ಸಿಎಂ ಜೊತೆ ಇಲಾಖೆ ಜೊತೆ ಸಭೆ ಮಾಡಿ ಅಂದಿದ್ದೆ. ಸಮಯ ಕೊಟ್ಟಿದ್ರು. ತುಂಬಾ ಪಾಸಿಟಿವ್ ಆಗಿ ಇದ್ರು, ನಮ್ಮ ಸಮಸ್ಯೆ ಗಮನಕ್ಕೆ ತಂದಿದ್ದೇವೆ. ಶಕ್ತಿ ಯೋಜನೆ ನೂರಕ್ಕೆ ನೂರು ಸಕ್ಸಸ್ ಆಗಿದೆ. 80 ಕೋಟಿ ಜನ ಮಹಿಳೆಯರು ಸಂಚಾರ ಮಾಡಿದ್ದಾರೆ. ಹಿಂದಿನ ಸರ್ಕಾರ ಕಳೆದ 4 ವರ್ಷಗಳಿಂದ ಬಸ್ ಖರೀದಿ ಮಾಡಿಲ್ಲ. ಈಗ ಎಲ್ಲಾ ಪ್ರೋಸಸ್ ಆಗಿದೆ, ಐದು ಸಾವಿರ ಹೊಸ ಬಸ್ ಬರಲಿದೆ. 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಎಲ್ಲ ರೀತಿಯ ಬಸ್ ಖರೀದಿ ಮಾಡ್ತೀವಿ. 2016 ರಿಂದ 13,800 ಜನ ನಿವೃತ್ತರಾಗಿದ್ದಾರೆ. 8 ಸಾವಿರ ಹುದ್ದೆಗಳ ನೇಮಕಾತಿಗೆ ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಭಿನ್ನಾಭಿಪ್ರಾಯಗಳಿರಬಹುದು ಆದರೆ ಪಕ್ಷದ ಎಲ್ಲ ನಾಯಕರ ನಡುವೆ ಸಾಮರಸ್ಯವಿದೆ: ಸತೀಶ್ ಜಾರಕಿಹೊಳಿ
ಸಿಎಂ ಬಳಿ ವೆಹಿಕಲ್‌ಗೆ ಟ್ಯಾಕ್ಸ್ ಎಗ್ಸೆಂಪ್ಷನ್ ಕೊಡಲು ಕೋರಿದ್ದೇವೆ. 5 ರಿಂದ 15 ಲಕ್ಷದ ವಾಹನಗಳಿಗೆ ಲೈಫ್ ಟ್ಯಾಕ್ಸ್ ಹಾಕಲಾಗುತ್ತಿತ್ತು. ಈ ಬಗ್ಗೆ ಸಂಘಗಳು ಕೇಳಿದ್ದವು. ಹೀಗಾಗಿ ಸಿಎಂ ಬಳಿ ಮನವಿ ಮಾಡಿದ್ದೇವೆ. ಎಲ್ಲೋ ಬೋರ್ಡ್ ನವರು ಲೋನ್ ತಗೋತಾರೆ. ಹಳೆ ಗಾಡಿ ತಗೋತಾರೆ. ಹಾಗಾಗಿ ಹಿಂದಿನ ರೀತಿಯಲ್ಲೇ ಟ್ಯಾಕ್ಸ್ ಇರಲಿದೆ.
ಜಲಾಶಯಗಳಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಕಡಿಮೆ
ರೇಷನ್ ಬದಲಿಗೆ ಹಣ ಹೋಗ್ತಿದೆ. ಗೃಹಲಕ್ಷ್ಮಿ ಮನೆಗೆ ಹೋಗ್ತಿದೆ. ಗೃಹಜ್ಯೋತಿ ಯೋಜನೆಗೆ ಕರೆಂಟ್ ಸಮಸ್ಯೆ ಇದೆ. ಕರೆಂಟ್ ಎಲ್ಲಾ ಕಡೆ ಇಲ್ಲ, ಎಲ್ಲರಿಗೂ ಗೊತ್ತು. ಜಲಾಶಯಗಳಲ್ಲಿ ನೀರಿಲ್ಲ. ನೀರಿಲ್ಲದಿದ್ದಾಗ ಸಹಜವಾಗಿ ಉತ್ಪಾದನೆ ಕಡಿಮೆಯಾಗಲಿದೆ. ಹಾಗಾಗಿ ಸ್ವಲ್ಪ ಲೋಡ್ ಶೆಡ್ಡಿಂಗ್ ಆಗ್ತಿದೆ. ಮಳೆ ಚೆನ್ನಾಗಿ ಬಂದ್ರೆ, ಅಥವಾ ಬೇರೆ ರಾಜ್ಯಗಳಿಂದ ಕೊಟ್ರೆ ನಮಗೆ ಸಮಸ್ಯೆ ಆಗಲ್ಲ. ಸಚಿವ ಜಾರ್ಜ್ ಈಗಾಗಲೇ ಮಾತಾಡ್ತಿದ್ದಾರೆ ಎಂದರು.
ಇನ್ನು ಇದೇ ವೇಳೆ ಲೋಕಸಭಾ ಚುನಾವಣೆಗೆ ಸೌಮ್ಯ ರೆಡ್ಡಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿಗೆ ನಿಲ್ಲುವ ಆಸಕ್ತಿ ಇದೆಯೋ ಇಲ್ಲವೋ ಕೇಳಿಲ್ಲ. ಸೌಮ್ಯ ರೆಡ್ಡಿ ಹೆಸರು ಬೆಂಗಳೂರು ದಕ್ಷಿಣಕ್ಕೆ ಕೇಳಿ ಬರ್ತಿದೆ ಎಂದರು.
ಬೆಳಗಾವಿ ರಾಜಕಾರಣ ವಿಚಾರವಾಗಿ ಮಾತನಾಡಿದ ರಾಮಲಿಂಗಾರೆಡ್ಡಿ, ಅವರು ಪಕ್ಷದ ಅಧ್ಯಕ್ಷರಲ್ವಾ? ಈಗ ಡಿಸಿಎಂ ಕೂಡ ಆಗಿದ್ದಾರೆ. ಅವರನ್ನ ವಿಪಕ್ಷಗಳು ಅಟಾಕ್ ಮಾಡ್ತಾರೆ. ಅದಕ್ಕಾಗಿ ನಾವು ಕೌಂಟರ್ ಕೊಡಬೇಕು. ಆರೋಗ್ಯ ಇಲಾಖೆ ಕೊರೊನಾ ಸಂದರ್ಭದ ಬಗ್ಗೆ ತನಿಖೆ ನಡೆಯುತ್ತಿದೆ. ಬಿಟ್ ಕಾಯಿನ್, 40% ತನಿಖೆ ನಡೆಯುತ್ತಿದೆ, PSI ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದವರು ವಿಪಕ್ಷದಲ್ಲಿ ಶಾಸಕರಾಗಿದ್ದಾರೆ. ಅವರೂ ರಾಜೀನಾಮೆ ಕೊಡಬೇಕು. ಅವರು ರಾಜೀನಾಮೆ ಕೊಡಲಿ, ಇವರೂ ರಾಜೀನಾಮೆ ಕೊಡ್ತಾರೆ ಎಂದು ಬಿಜೆಪಿ ಆರೋಪಗಳಿಗೆ ಸಚಿವ ರಾಮಲಿಂಗಾರೆಡ್ಡಿಯವರು ವಾಗ್ದಾಳಿ ನಡೆಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ