ಗಣೇಶ ಹಬ್ಬ ಆಚರಣೆಗೆ ಕಠಿಣಾತಿಕಠಿಣ ನಿಮಯ ಜಾರಿ ಸಾಧ್ಯತೆ; ಆ.30ಕ್ಕೆ ನಿರ್ಧಾರ
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ತಾಂತ್ರಿಕ ಸಲಹಾ ಸಮಿತಿ ಕೊವಿಡ್ ಕುರಿತು ಸಭೆ ನಡೆಸುತ್ತದೆ. ಸಭೆಯಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ತಜ್ಞರು ಸಲಹೆ ನೀಡಬಹುದು.
ಬೆಂಗಳೂರು: ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ (Coronavirus) ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿ ಶುರುವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ. ಕೇರಳ ವಿದ್ಯಾರ್ಥಿಗಳು, ಸಾರ್ವಜನಿಕರ ಮೇಲೆ ನಿಗಾ ವಹಿಸಬೇಕು. ಸೆಪ್ಟೆಂಬರ್ ಕೊನೆವರೆಗೂ ಎಚ್ಚರಿಕೆಯಲ್ಲಿ ಇರಬೇಕು ಅಂತ ತಜ್ಞರು ಹೇಳಿದ್ದಾರೆ. ಬಿಬಿಎಂಪಿ ಮಾರ್ಗಸೂಚಿ ಸರಿಯಾಗಿ ಪಾಲನೆ ಆಗುತ್ತಿಲ್ಲ. ಹೀಗಾಗಿ ಸರ್ಕಾರ ಕಠಿಣ ಕ್ರಮ ವಹಿಸುವಂತೆ ತಜ್ಞರು ಸಲಹೆ ಸೂಚಿಸುತ್ತಿದ್ದು, ಗಣೇಶ ಹಬ್ಬ ಆಚರಣೆಗೆ ಕಠಿಣಾತಿಕಠಿಣ ನಿಮಯಗಳು ಜಾರಿಯಾಗುವ ಸಾಧ್ಯತೆಯಿದೆ.
ನಾಳೆ (ಆಗಸ್ಟ್ 30) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ತಾಂತ್ರಿಕ ಸಲಹಾ ಸಮಿತಿ ಕೊವಿಡ್ ಕುರಿತು ಸಭೆ ನಡೆಸುತ್ತದೆ. ಸಭೆಯಲ್ಲಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಲು ತಜ್ಞರು ಸಲಹೆ ನೀಡಬಹುದು. ಸಭೆಯಲ್ಲಿ ಹಬ್ಬಗಳಿಗೆ ಕಠಿಣ ಮಾರ್ಗಸೂಚಿ ಬಗ್ಗೆ ಚರ್ಚೆ ನಡೆಸಲಾಗುವುದು.
ದೇಶದಲ್ಲಿ ಕೊರೊನಾ 3ನೇ ಅಲೆಯ ಭೀತಿ ಆವರಿಸಿದೆ. 3ನೇ ಅಲೆ ತಡೆಯುವುದಕ್ಕೆ ಮುಂಜಾಗ್ರತೆ ವಹಿಸಬೇಕಿದೆ. ಹೀಗಾಗಿ ಕೇಂದ್ರ ಗೃಹ ಇಲಾಖೆ ರಾಜ್ಯಗಳಿಗೆ ಸೂಚನೆ ನೀಡಿದೆ. ಟೆಸ್ಟ್, ಟ್ರೇಸ್, ಟ್ರೀಟ್, ವ್ಯಾಕ್ಸಿನೇಷನ್ಗೆ ಆದ್ಯತೆ ನೀಡಲು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ದೇಶದಲ್ಲಿ ಕಳೆದ 24 ಗಂಟೆಯಲ್ಲಿ 45,083 ಕೊರೊನಾ ಕೇಸ್ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಮಧ್ಯೆ ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುವ ಪ್ರಮಾಣ ಶೇ.97.5ರಷ್ಟಿದೆ. ಹಾಗೇ, 24ಗಂಟೆಯಲ್ಲಿ 460 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 35,840 ಜನರು ಚೇತರಿಸಿಕೊಂಡು, ಡಿಸ್ಚಾರ್ಜ್ ಆಗಿದ್ದಾರೆ.ಇದೀಗ ದೇಶದಲ್ಲಿ 3,68,558 ಕೊರೊನಾ ಸಕ್ರಿಯ ಪ್ರಕರಣಗಳು ಇವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಮನೆ ಬಾಗಿಲಿಗೆ ಬರುತ್ತೆ ಪಶು ಸಂಜೀವಿನಿ ಕೊವಿಡ್ 19 ತಾಂತ್ರಿಕ ಸಲಹಾ ಸಮಿತಿ ನೀಡಿದ ಆತಂಕಕಾರಿ ವರದಿ ಇದು..; ಕಠಿಣ ನಿಯಮ ಜಾರಿಗೊಳಿಸದೆ ಇದ್ರೆ ಅಪಾಯ ತಪ್ಪಿದ್ದಲ್ಲ
(Karnataka Government is likely to enforce strict rules for Ganesh festival)