ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್

ಕಾಂಗ್ರೆಸ್ ಆಡಳಿತಕ್ಕೆ ಬರ್ತಿದ್ದಂತೆ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಮಾಡಿದೆ. ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ರಾಜ್ಯದ ಬಸ್ ಪುಲ್ ರಶ್ ಜೊತೆಗೆ ರಾಜ್ಯದ ಪ್ರಮುಖ ದೇವಸ್ಥಾನಗಳು ಹೌಸ್ ಪುಲ್ ಆಗುತ್ತಿವೆ. ಹೀಗಾಗಿ ರಾಜ್ಯದ ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗಿದ್ದು ಜನರ ಪರದಾಟ ತಪ್ಪಿಸಲು ಸರ್ಕಾರ ಹೊಸ ಪ್ಲಾನ್​ಗೆ ಮುಂದಾಗಿದೆ.

ಶಕ್ತಿ ಯೋಜನೆ ಎಫೆಕ್ಟ್; ತುಂಬಿ ತುಳುಕುತ್ತಿವೆ ದೇವಾಲಯಗಳು, ಭಕ್ತರ ಮತ್ತಷ್ಟು ಅನುಕೂಲಕ್ಕೆ ಮುಜರಾಯಿ ಹೊಸ ಪ್ಲಾನ್
ಸಚಿವ ರಾಮಲಿಂಗಾರೆಡ್ಡಿ
Follow us
Vinay Kashappanavar
| Updated By: ಆಯೇಷಾ ಬಾನು

Updated on: Aug 28, 2023 | 7:01 AM

ಬೆಂಗಳೂರು, ಆ.28: ರಾಜ್ಯದಲ್ಲಿ ಶಕ್ತಿ ಯೋಜನೆ(Shakti Scheme) ಜಾರಿಯಾದ ಬಳಿಕ ಯಾವ ದೇವಸ್ಥಾನಕ್ಕೆ ಕಾಲಿಟ್ಟರು ತುಂಬಿ ತುಳುಕುತ್ತಿವೆ. ಅದರಲ್ಲೂ ಮುಜರಾಯಿ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲಿ(Temples) ಜನರು ಹರಕೆ, ಪೂಜೆ ಸಲ್ಲಿಸಲು ಪರದಾಡುವಂತಾಗುತ್ತಿದೆ. ಇನ್ನೊಂದೆಡೆ ವಸತಿ, ಲಾಡ್ಜ್ ಸಿಗದೆ ಭಾರೀ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಪರದಾಟ ತಪ್ಪಿಸಲು ಮುಜರಾಯಿ ಇಲಾಖೆ ಹೊಸ ಪ್ಲಾನ್​ಗೆ ಮುಂದಾಗಿದೆ. ಭಕ್ತರಿಗೆ ಮತಷ್ಟು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಆನ್ಲೈನ್ ಯೋಜನೆ ಜಾರಿಗೆ ಮುಂದಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy)ತಿಳಿಸಿದ್ದಾರೆ .

ಮುಜರಾಯಿ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸಲು ಹಾಗೂ ದರ್ಶನಕ್ಕೆ ಇನ್ನು ಹೆಚ್ಚು ಪ್ರಯಾಸ ಪಡಬೇಕಾಗಿಲ್ಲ. ಹೌದು ಜನರ ಪರದಾಟ ತಪ್ಪಿಸಲು ಕೋಟ್ಯಾಂತರ ಭಕ್ತರ ಅನುಕೂಲದ ದೃಷ್ಟಿಯಿಂದ ಹಿಂದೂ ಧಾರ್ಮಿಕ ಹಾಗೂ ಧರ್ಮದಾಯಿ ದತ್ತಿ ಇಲಾಖೆ ಮಹತ್ವದ ಹೆಜ್ಜೆಗೆ ಮುಂದಾಗಿದೆ. ಮುಜರಾಯಿ ಇಲಾಖೆ ಅಡಿಯಲ್ಲಿ ಹಾಗೂ ಸೇವಾ ಸೌಲಭ್ಯ ಇರುವ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಮುಜರಾಯಿ ಇಲಾಖೆಯ ವಸತಿ ಗೃಹ ಇರುವ ದೇವಸ್ಥಾನಗಳಲ್ಲಿಯೂ ಈ ಅವಕಾಶ ನೀಡಲು ಮುಂದಾಗಿದೆ.

ತಿರುಪತಿ ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಚಾಮುಂಡೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ಸೇರಿದಂತೆ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಎಲ್ಲವನ್ನು ಮುಗಂಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ಮುಂದಾಗಿದೆ. ಯಾವುದೇ ಹರಕೆ ಪೂಜೆ, ವಿಶೇಷ ಸೇವೆ, ವಸತಿ ಗೃಹಗಳ ಬುಕ್ಕಿಂಗ್, ಮದುವೆ ಅಥವಾ ಯಾವುದೇ ಶುಭ ಸಮಾರಂಭಗಳಿಗೆ ಮೊದಲೆ ನೀವು ಆನ್ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ನೀವು ದೇವಸ್ಥಾಗಳಲ್ಲಿ ತುರ್ತು ಸೇವೆ ಹಾಗೂ ವಸತಿ ಸೌಲಭ್ಯ ಪಡೆಯಬಹುದಾಗಿದೆ.

ಇದನ್ನೂ ಓದಿ: ಬೆಂಗಳೂರು ಟು ಕಾಶಿಗೆ ಹೊರಟ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ

ಏನಿದು ಇ ಸೇವೆ?

  • ವಾಸ್ತವ್ಯಕ್ಕೆ ಕೊಠಡಿ, ದೇವರ ದರ್ಶನ ಹಾಗೂ ಸೇವೆಗೆ ಮೊದಲೇ ಕಾಯ್ದಿರಿಸುವುದು
  • ಇ-ಸೇವಾ ಪುಟದಲ್ಲಿ ದೇವಸ್ಥಾನದ ಮಾಹಿತಿ, ಸೇವಾ ವಿವರ, ಸಂಪರ್ಕ ಸಂಖ್ಯೆಗಳು, ಸ್ಥಳ ಪುರಾಣ, ಜಾತ್ರೆ, ಉತ್ಸವದ ವಿವರ ಇರುತ್ತದೆ
  • ದೇವಸ್ಥಾನಕ್ಕೆ ಬರಲು ರೂಟ್ ಮ್ಯಾಪ್, ಸುತ್ತಮುತ್ತಲಿನ ಪ್ರವಾಸಿ ತಾಣಗಳ ಜತೆಗೆ ದೇವಸ್ಥಾನದ ಛಾಯಾಚಿತ್ರ ಹಾಗೂ ವಿಡಿಯೋ ಕ್ಲಿಪಿಂಗ್‌ಗಳನ್ನು ಅಳವಡಿಸಿ ಮಾಹಿತಿ
  • ದೇವಸ್ಥಾನಗಳೊಂದಿಗೆ ಆರ್ಥಿಕ ವಹಿವಾಟು ಇಟ್ಟುಕೊಂಡಿರುವ ಬ್ಯಾಂಕ್‌ಗಳನ್ನು ಇ-ಸೇವೆಗೆ ಜೋಡಿಸಲಾಗುತ್ತಿದೆ.
  • ಇದರಿಂದ ಭಕ್ತರು ನೇರವಾಗಿ ಅಲ್ಲಿಂದ ಸೇವೆಯನ್ನು ಮುಂಗಡ ಬುಕ್ಕಿಂಗ್ ಮಾಡಿಸಬಹುದು

ಗೃಹ ಶಕ್ತಿ ಯೋಜನೆಯ ಎಫೆಕ್ಟ್ ಎಲ್ಲ ದೇವಸ್ಥಾನಗಳು ಪುಲ್ ರಶ್ ಹಿನ್ನಲೆ ಜನರು ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಸತಿ, ಹಾಗೂ ಹರಕೆ ಮತ್ತಿತರ ಸೇವೆಗೆ ಪರದಾಡಬೇಕಿದೆ. ಇದನ್ನ ತಪ್ಪಿಸಲು ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆನ್ಲೈನ್ ಸೇವೆ ನೀಡಲು ಮುಂದಾಗಿದೆ. ಇದಕ್ಕಾಗಿ ಆನ್ಲೈನ್ ಕಂಪ್ಲೀಟ್ ಸೇವೆ ನೀಡಲು ಬೆಂಗಳೂರಿನಲ್ಲಿ ಬುಕ್ಕಿಂಗ್ ಹಾಗೂ ಕಮಾಡಿಂಗ್ ಸೆಂಟರ್ ತೆರದು ನಿರ್ವಹಣೆಗೆ ಮುಂದಾಗಿದೆ. ಈ ಮೂಲಕ ಖಾಸಗಿ ವಸತಿ ಗೃಹಗಳಿಗೆ ಸೋರಿಕೆಯಾಗುತ್ತಿದ್ದ ಹಣ ಮತ್ತು ಹೆಚ್ಚು ತುರ್ತು ಸೇವಯಿಂದ ಭಕ್ತರಿಗೆ ಹೆಚ್ಚಿನ ಅವಕಾಶ ಹಿನ್ನಲೆ ಭಕ್ತರಿಗೆ ವಿಶೇಷ ಅನಕೂಲದ ಜೊತೆ ಹುಂಡಿ ಹಣ ಡಬಲ್ ಮಾಡುವ ಯೋಜನೆಗೆ ಮುಜರಾಯಿ ಇಲಾಖೆ ಕೈಹಾಕಿದೆ.

ಒಟ್ನಲ್ಲಿ ಮುಜರಾಯಿ ಇಲಾಖೆ ಭಕ್ತರಿಗೆ ಇ-ಸೌಲಭ್ಯದ ಜೊತೆ ಜನರ ಪರದಾಟ ದೂರು ಮಾಡುವುದರ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ಸುಲಭ ಸೇವೆ ನೀಡುವುದರ ಮೂಲಕ ದೇವಸ್ಥಾನದ ಹುಂಡಿ ಹಣ ಡಬಲ್ ಮಾಡಿಕೊಳ್ಳುವ ತಂತ್ರಕ್ಕೆ ಸರ್ಕಾರ ಮುಂದಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ