ಐಎಎಸ್ ಅಧಿಕಾರಿಗಳ ಬೆನ್ನಲ್ಲೇ 53 ಐಪಿಎಸ್​ ಅಧಿಕಾರಿಗಳಿಗೆ ನ್ಯೂ ಇಯರ್​ ಗಿಫ್ಟ್​​ ನೀಡಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ 53 ಐಪಿಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ನ್ಯೂ ಇಯರ್​ ಗಿಫ್ಟ್​​ ಕೊಟ್ಟಿದೆ.

ಐಎಎಸ್ ಅಧಿಕಾರಿಗಳ ಬೆನ್ನಲ್ಲೇ 53 ಐಪಿಎಸ್​ ಅಧಿಕಾರಿಗಳಿಗೆ ನ್ಯೂ ಇಯರ್​ ಗಿಫ್ಟ್​​ ನೀಡಿದ ರಾಜ್ಯ ಸರ್ಕಾರ
ವಿಧಾನಸೌಧ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 31, 2022 | 6:20 PM

ಬೆಂಗಳೂರು: ರಾಜ್ಯ ಸರ್ಕಾರ ಕೆಲ ಗಂಟೆಗಳ ಹಿಂದೆ 42 ಐಎಎಸ್ (IAS) ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ಆದೇಶ ಹೊರಡಿಸಿತ್ತು. ಈಗ 53 ಐಪಿಎಸ್ (IPS)​ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ನ್ಯೂ ಇಯರ್​ ಗಿಫ್ಟ್​​ ಕೊಟ್ಟಿದೆ. ಈ ಆದೇಶ ಹೊಸವರ್ಷದ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ಪಡೆದ ಅಧಿಕಾರಿಗಳು

  1. ಅಲೋಕ್ ಮೋಹನ್ ಡಿಜಿಪಿ (ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್)
  2.  ಸಿ ಹೆಚ್ ಪ್ರತಾಪ್ ರೆಡ್ಡಿ ಡಿಜಿಪಿ ಬೆಂಗಳೂರು ನಗರ
  3. ಮನೀಶ್ ಖಾರ್ಬಿಕರ್ ಡಿಜಿಪಿ (ಕಾರಾಗೃಹಗಳು) ಕಲಬುರಗಿ
  4. ಎನ್ ಸತೀಶ್ ಕುಮಾರ್ ಕಲಬುರಗಿ ಈಶಾನ್ಯ ರೇಂಜ್‌ ಐಜಿಪಿ
  5. ಸೌಮೇಂದು ಮುಖರ್ಜಿ ಎಡಿಜಿಪಿ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣದ
  6. ಎಂ ಚಂದ್ರಶೇಖರ್ ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್
  7. ರಮಣ್ ಗುಪ್ತಾ ಐಜಿಪಿ ಬೆಂಗಳೂರು ಉತ್ತರ ವಲಯ
  8. ಬಿ ಆರ್ ರವಿಕಾಂತೇಗೌಡ ಐಜಿಪಿ ಬೆಂಗಳೂರು ಕೇಂದ್ರ ವಲಯ
  9. ಬಿ ಎಸ್ ಲೋಕೇಶ್ ಕುಮಾರ್ ಐಜಿಪಿ ಬಳ್ಳಾರಿ ವಲಯ

ಇನ್ನು ಈ ಬಡ್ತಿ ಪಡೆಯುವ ಪಟ್ಟಿಯಲ್ಲಿ ಐಪಿಎಸ್​ ಅಧಿಕಾರಿ ಹೇಮಂತ್​ ನಿಂಬಾಳ್ಕರ್​ ಹೆಸರು ಸಹ ಇತ್ತು. ಆದ್ರೆ, ಅವರ ಮೇಲೆ ಕೆಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಅವರ ಬಡ್ತಿಯನ್ನು ತಡೆ ಹಿಡಿದಿದೆ ಎಂದು ತಿಳಿದುಬಂದಿದೆ. ನಿರ್ಭಯಾ ಸೇಫ್ಟಿ ಟೆಂಡರ್ ವಿಚಾರಕ್ಕೆ ಸಂಬಂಧಿಸಿ 2021ರಲ್ಲಿ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಮತ್ತು ನಿಂಬಾಳ್ಕರ್ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಘಟನೆ ನಂತರ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sat, 31 December 22

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು