ರಾಜ್ಯದಲ್ಲಿ JN.1 ಹಾವಳಿ; ಜನವರಿ 2ರಿಂದ ಮತ್ತೆ ಲಸಿಕೆ ಅಭಿಯಾನ

| Updated By: ಆಯೇಷಾ ಬಾನು

Updated on: Dec 30, 2023 | 8:51 AM

ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹಿನ್ನಲೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ JN.1 ಹಾವಳಿ; ಜನವರಿ 2ರಿಂದ ಮತ್ತೆ ಲಸಿಕೆ ಅಭಿಯಾನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಡಿ.30: ರಾಜ್ಯದಲ್ಲಿ ಕೊರೊನಾ ಹೊಸ ತಳಿ ಜೆಎನ್. 1 (JN 1) ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶೇ 50% ಕ್ಕೂ ಹೆಚ್ಚು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಜನವರಿ 2ರಿಂದ ರಾಜ್ಯದಲ್ಲಿ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಶುರು ಮಾಡಲು ಸರ್ಕಾರ (Karnataka Government) ಮುಂದಾಗಿದೆ. ರಾಜ್ಯಾದ್ಯಂತ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಕೊರೊನಾ JN.1 ರೂಪಾಂತರಿ ಹಾವಳಿ ಹಿನ್ನಲೆ ಆರೋಗ್ಯ ಇಲಾಖೆ ವ್ಯಾಕ್ಸಿನ್ ಮೊರೆ ಹೋಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮತ್ತೆ ವ್ಯಾಕ್ಸಿನ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ರಾಜ್ಯದಲ್ಲಿ ಕೋವಿಡ್ ಸಾವು ತಡೆಯಲು ವ್ಯಾಕ್ಸಿನ್ ಅಸ್ತ್ರ ಪ್ರಯೋಗ

ಈಗಾಗಲೇ ರಾಜ್ಯದಲ್ಲಿ ಮೊದಲ ಮತ್ತು ಎರಡನೇ ಡೋಸ್ 100% ವ್ಯಾಕ್ಸಿನೇಶನ್ ಮಾಡಲಾಗಿದೆ. ಆದರೆ ಪ್ರಿಕಾಶನರಿ ಮುನ್ನೆಚ್ಚರಿಕಾ ವ್ಯಾಕ್ಸಿನ್ ಮಾತ್ರ ಶೇ 27% ಜನರು ಮಾತ್ರ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಇನ್ನು 1.5 ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಪಡೆದಿದ್ದಾರೆ. 1.5 ಕೋಟಿಗೂ ಹೆಚ್ಚು ಜನರು ಮೂರನೇ ಡೋಸ್ ವ್ಯಾಕ್ಸಿನ್ ತಗೆದುಕೊಂಡಿಲ್ಲ. ಹೀಗಾಗಿ ಈಗ ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ. ಪ್ರಾಥಮಿಕ ಹಂತದಲ್ಲಿ 30 ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ನಿರ್ಧರಿಸಿದೆ.

ಸದ್ಯ 15,800 ಲಸಿಕೆ ಈಗಾಗಲೇ ಖರೀದಿ ಮಾಡಲಾಗಿದೆ. ಇಂದಿನಿಂದಲೇ ಲಸಿಕೆಗಳನ್ನ ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಪ್ಲಾನ್ ಮಾಡಿದೆ. ಹೀಗಾಗಿ ಈಗ ಮತ್ತೆ ಯಾರು ಲಸಿಕೆ ಪಡೆದಿಲ್ಲ ಅವರೆಲ್ಲ ಮುನ್ನೆಚ್ಚರಿಕಾ ದೃಷ್ಠಿಯಿಂದ ವ್ಯಾಕ್ಸಿನ್ ಪಡೆಯುವಂತೆ ಸೂಚಿಸಿದೆ. ಕೋಮಾರ್ಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಇಂದು 173 ಜನರಿಗೆ ಕೊರೊನಾ ಸೋಂಕು ದೃಢ; ಬೆಂಗಳೂರಿನಲ್ಲಿಯೇ ಇಬ್ಬರು ಬಲಿ

ಇನ್ನು ಮತ್ತೊಂದೆಡೆ ಆಗ್ನೆಯ ರಾಷ್ಟ್ರಗಳಾದ ಸಿಂಗಾಪುರ ಮಲೇಶಿಯಾ ಹಾಗೂ ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ JN.1 ಉಪತಳಿಯೇ ಹೆಚ್ಚು ಪತ್ತೆಯಾಗಿದೆ. ಹೀಗಾಗಿ ವಿಶ್ವದಲ್ಲಿ JN.1 ಉಪತಳಿ ಡಾಮಿನೆಂಟ್ ಸ್ಟ್ರೇನ್ ಎನ್ನಲಾಗ್ತೀದೆ. ಈ ನಡುವೆ ರಾಜ್ಯದ ಟೆನ್ಷನ್ ಹೆಚ್ಚಿಸಿರುವ JN.1 ರೂಪಾಂತರಿ ಬಗ್ಗೆ ಆರೋಗ್ಯ ಇಲಾಖೆ ಶಾಕಿಂಗ್ ನ್ಯೂಸ್ ಹೊರ ಹಾಕಿದೆ. ರಾಜ್ಯದಲ್ಲಿ ದಾಖಲಾಗುತ್ತಿರುವ ಹೊಸ ಕೊವಿಡ್ ಕೇಸ್ ಗಳಲ್ಲಿ ಶೇ 90 % ರಷ್ಟು ಒಮಿಕ್ರಾನ್ ರೂಪಾಂತರಿ JN.1 ಕಾಣಿಸಿಕೊಳ್ಳುತ್ತಿರುವ ಬಗ್ಗೆ ಪ್ರಿಡಿಕ್ಟ್ ಮಾಡಿದೆ.

ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ 197 ಸ್ಯಾಂಪಲ್ಸ್ ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಕಳಿಸಲಾಗಿದೆ. ಇದರಲ್ಲಿ ಸದ್ಯ ವರದಿ ಬಂದಿರುವ 60 ಸ್ಯಾಂಪಲ್ಸ್ ಗಳಲ್ಲಿ ಶೇ50 ರಷ್ಟು ಅಂದ್ರೆ 34 ಸ್ಯಾಂಪಲ್ಸ್ ನಲ್ಲಿ ಉಪತಳಿ JN.1 ಕಂಡು ಬಂದಿದೆ. ಹೀಗಾಗಿ ರಾಜ್ಯದಲ್ಲಿ ಸರಾಸರಿ ಶೇ 50 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಲ್ಲಿ JN.1 ಇರುವ ಸಾಧ್ಯತೆ ಇದೆ. ಹೀಗಾಗಿ ನಾವು ಹೆಚ್ಚಾಗಿ ಜೀನೋಮ್ ಸೀಕ್ವೆನ್ಸಿಂಗ್ ಕಳಸಿದ್ರು ಕೂಡಾ ರಾಜ್ಯದಲ್ಲಿ JN.1 ಕೇಸ್ ಹೆಚ್ಚಾಗಿ ಬರುವ ಸಾಧ್ಯತೆ ಇದೆ. ಇದು ಡಾಮಿನೆಂಟ್ ಸ್ಟ್ರೇನ್ ಇರುವುದರಿಂದ ಇದೇ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ವಿಶ್ವದಲ್ಲಿನ ಅನೇಕ ರಾಷ್ಟ್ರಗಳಲ್ಲಿ JN.1 ಉಪತಳಿಯೇ ಪತ್ತೆಯಾಗಿದೆ ಅಂತಾ ಆತಂಕಕಾರಿ ಮಾಹಿತಿಯನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ