AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದೆ, ಆದರೆ ರೈತರಿಗೆ ಪರಿಹಾರ ನೀಡುತ್ತಿಲ್ಲ -ಆರ್.ಅಶೋಕ್

ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗೋದೇ 5000 ಕೋಟಿ. ಅದರಲ್ಲಿ ಅಲ್ಪಸಂಖ್ಯಾತರ ಕಾಲೋನಿಗೆ 1 ಸಾವಿರ ಕೋಟಿ ಅಭಿವೃದ್ಧಿಗೆ ಬಿಟ್ಟಿದ್ದಾರೆ. ಹಿಂದೂಗಳೇನು, ದಲಿತರೇನು ಮಾಡಬೇಕು? ಪಾರ್ಲಿಮೆಂಟ್ ಚುನಾವಣೆಗೆ ಓಲೈಕೆ ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಅಲ್ಪಸಂಖ್ಯಾತರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದೆ, ಆದರೆ ರೈತರಿಗೆ ಪರಿಹಾರ ನೀಡುತ್ತಿಲ್ಲ -ಆರ್.ಅಶೋಕ್
ಆರ್​ ಅಶೋಕ
ಪ್ರಸನ್ನ ಗಾಂವ್ಕರ್​
| Edited By: ಆಯೇಷಾ ಬಾನು|

Updated on:Dec 30, 2023 | 12:48 PM

Share

ಬೆಂಗಳೂರು, ಡಿ.30: ಕರ್ನಾಟಕದಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಅಲ್ಪಸಂಖ್ಯಾತರಿಗೆ ಕಾಣಿಕೆ‌ ಮೇಲೆ ಕಾಣಿಕೆ ನೀಡ್ತಿದೆ. ಆದರೆ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ, ಇನ್ನೂ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೂಡ ಕಣ್ಣುಕಾಣದ ರೀತಿ ಬಂಪರ್ ಮೇಲೆ ಬಂಪರ್ ನೀಡುತ್ತಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಆರ್​. ಅಶೋಕ್ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಪರಿಹಾರ ನೀಡಿಲ್ಲ. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಇದ್ರೂ ಕೂಡ ಸಿದ್ದರಾಮಯ್ಯ ಅವರು ಕಣ್ಣು ಕಾಣದ ರೀತಿ ಬಂಪರ್ ಮೇಲೆ ಬಂಪರ್ ನೀಡ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗೋದೇ 5000 ಕೋಟಿ. ಅದರಲ್ಲಿ ಅಲ್ಪಸಂಖ್ಯಾತರ ಕಾಲೋನಿಗೆ 1 ಸಾವಿರ ಕೋಟಿ ಅಭಿವೃದ್ಧಿಗೆ ಬಿಟ್ಟಿದ್ದಾರೆ. ಹಿಂದೂಗಳೇನು, ದಲಿತರೇನು ಮಾಡಬೇಕು? ಪಾರ್ಲಿಮೆಂಟ್ ಚುನಾವಣೆಗೆ ಓಲೈಕೆ ಮಾಡ್ತಿದ್ದಾರೆ. ಇವರಲ್ಲಿ ಟಿಪ್ಪು ಸಂಸ್ಕೃತಿ ಹೇರುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ ಎಂದರು.

ಕಾಂಗ್ರೆಸ್‌ನ ಬಿ.ಆರ್ ಪಾಟೀಲ್ ಹೇಳುತ್ತಿದ್ದಾರೆ ಒಂದೇ ಒಂದು ಅಭಿವೃದ್ಧಿ ಕಲ್ಲು ಹಾಕಿಲ್ಲ ಅಂತ. ಈ ರೀತಿ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಹಿಂದೂಗಳು ವಾಸ ಮಾಡುವ ಜಾಗದಲ್ಲಿ ಅಭಿವೃದ್ಧಿ ಯಾಕಿಲ್ಲ? PFI ಮೇಲಿನ ಕೇಸ್ ವಾಪಸ್ ಪಡೆದ್ರು. ಕೆ.ಜಿ ಹಳ್ಳಿ, ಡಿಜೆ ಹಳ್ಳಿ ಘಟನೆ ಕೇಸ್ ವಾಪಸ್ ಪಡೆಯುವಂತೆ ಮೈಸೂರು ಶಾಸಕ ಪತ್ರ ಬರೆದು ವಾಪಸ್ ಪಡೆಯಲು ಶಿಫಾರಸ್ಸು ಮಾಡ್ತಾರೆ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನ ನಮ್ಮ ಬ್ರದರ್ಸ್ ಅಂತ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ರು. ಸಿದ್ದರಾಮಯ್ಯ ಪ್ರಮಾಣವಚನ ಪಡೆಯುವಾಗ ಎಲ್ಲಾ ಧರ್ಮ ಸಮಾನ ಕಾಣ್ತೀನಿ ಅಂದ್ರು, ಆದರೆ ಅವರು ಕಾಣಲಿಲ್ಲ ಎಂದು ಆರ್, ಅಶೋಕ್ ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಾಜ್ಯದ ರೈತರ ಕೈಗೆ ಇನ್ನೂ‌ ಸೇರದ ಬೆಳೆ ಪರಿಹಾರ ಹಣ; ಸರ್ಕಾರ ವಿರುದ್ಧ ಅನ್ನದಾತ ಅಸಮಾಧಾನ

ಒಬ್ಬ ರೈತರಿಗೆ 35 ಸಾವಿರ ಕೊಡಬೇಕು. ಬೆಳಗಾವಿ ಅಧಿವೇಶನದಲ್ಲಿ ಎರಡು ಸಾವಿರ ಘೋಷಣೆ ಮಾಡಿದ್ರು. ಒಂದು ವಾರದಲ್ಲಿ ಎರಡು ಸಾವಿರ ಕೊಡ್ತೀನಿ ಅಂದ್ರು. ಅಧಿವೇಶನ ಮುಗಿದು ಇಷ್ಟು ದಿನ ಆಯ್ತು ಇನ್ನೂ ಕೊಟ್ಟಿಲ್ಲ. ಆದರೆ ಅಲ್ಪಸಂಖ್ಯಾತರಿಗೆ 1 ಸಾವಿರ ಕೋಟಿ ಕೊಟ್ಟಿದ್ದಾರೆ. ಇವರು ಓಲೈಕೆ ಮಾಡ್ತಿದ್ದಾರೆ. ಹಿಂದೆ ಟಿಪ್ಪು ಹಿಂದೂ, ಮುಸ್ಲಿಂ ಹೇಗೆ ಪ್ರತ್ಯೇಕ ಮಾಡಿದನೋ, ಅದೇ ರೀತಿ ಮಾಡಲಾಗ್ತಿದೆ. ಹಿಂದೂ ಕಾಲೋನಿ, ಮುಸ್ಲಿಂ ಕಾಲೋನಿ ಅಂತ ಬೇದ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಚೆಕ್​ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ ಅಂತ ಅರ್ಥ

ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಚೆಕ್ ಬೌನ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ R.ಅಶೋಕ್, ಶಿಕ್ಷಣ ಇಲಾಖೆ ಸಚಿವರ ಪಾಡೇ ಹೀಗಾದ್ರೆ ಹೇಗೆ? ಕೋರ್ಟ್ ಆದೇಶ ಆದ್ರೂ ಸಿಎಂ‌ ಇನ್ನೂ ರಾಜೀನಾಮೆ ಪಡೆದಿಲ್ಲ. ಕಾಂಗ್ರೆಸ್ ಸರ್ಕಾರ ಲೂಟಿ ಹೊಡೆಯಲು ಒಂಟಿ ಕಾಲಲ್ಲಿ ನಿಂತಿದೆ. ಚೆಕ್​ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ ಅಂತ ಅರ್ಥ. ಕೂಡಲೇ ಮಧು ಬಂಗಾರಪ್ಪ ರಾಜೀನಾಮೆ ಪಡೆಯುವಂತೆ ಆರ್.ಅಶೋಕ್ ಆಗ್ರಹಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:48 pm, Sat, 30 December 23

Follow Us
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ