ರಾಮ ಭಕ್ತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಅಯೋಧ್ಯೆಯಲ್ಲಿ‌ ಕರ್ನಾಟಕ ಯಾತ್ರಿ ನಿವಾಸ

| Updated By: ಆಯೇಷಾ ಬಾನು

Updated on: Jan 10, 2024 | 10:30 AM

ಕರ್ನಾಟಕದ ಮುಜರಾಯಿ ಇಲಾಖೆ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದು ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕ ಯಾತ್ರಿ ನಿವಾಸ ಕಟ್ಟಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಸಿಎಂ ಸಿದ್ರಾಮಯ್ಯ ಪತ್ರ ಬರೆದಿದ್ದಾರೆ.

ರಾಮ ಭಕ್ತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್; ಅಯೋಧ್ಯೆಯಲ್ಲಿ‌ ಕರ್ನಾಟಕ ಯಾತ್ರಿ ನಿವಾಸ
ಅಯೋಧ್ಯೆ
Follow us on

ಬೆಂಗಳೂರು, ಜ.10: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು ಕೋಟ್ಯಾಂತರ ಭಕ್ತರು ಈ ಶುಭಗಳಿಗೆಗಾಗಿ ಕಾಯುತ್ತಿದ್ದಾರೆ (Ayodhya Ram Mandir). ಇದರ ನಡುವೆ ಈಗ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ರಾಮ ಭಕ್ತರಿಗೆ ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ‌ ಹೊತ್ತಲ್ಲೇ ಅಯೋಧ್ಯೆಯಲ್ಲಿ‌ ಕರ್ನಾಟಕ ಯಾತ್ರಿ ನಿವಾಸ (Karnataka Yatri Nivas) ಕಟ್ಟಲು ಅನುಮತಿ ನೀಡುವಂತೆ ಕರ್ನಾಟಕ ಮುಜರಾಯಿ ಇಲಾಖೆ ಉತ್ತರ ಪ್ರದೇಶಕ್ಕೆ ಪತ್ರ ಬರೆದಿದೆ.

ಕರ್ನಾಟಕದ ಮುಜರಾಯಿ ಇಲಾಖೆ ಉತ್ತರಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದ್ದು ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕ ಯಾತ್ರಿ ನಿವಾಸ ಕಟ್ಟಲು ಅನುಮತಿ ನೀಡುವಂತೆ ಮನವಿ ಮಾಡಿದೆ. ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು, ರಾಮ ಭಕ್ತರು ಅಯೋಧ್ಯೆಗೆ ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಅವರಿಗೆ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದೆ. 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ರಾಜ್ಯದ ಭಕ್ತಾದಿಗಳ ಅನುಕೂಲಕ್ಕೆ ಮುಜರಾಯಿ ಇಲಾಖೆ ಅತಿಥಿ ಗೃಹ ನಿರ್ಮಾಣ ಮಾಡಲು ಸಿದ್ಧವಿದೆ ಅನುಮತಿ ನೀಡಿ ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಇಂದಿನಿಂದ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ: ತುಂಡು ಬಟ್ಟೆ ಧರಿಸಿಕೊಂಡು ಬಂದ್ರೆ ದೇವಾಲಯದೊಳಗೆ ನೋ ಎಂಟ್ರಿ

ಸರಯೂ ನದಿ ಸಮೀಪದಲ್ಲಿ ಅತಿಥಿ ಗೃಹ ನಿರ್ಮಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಸಿಎಂ ಸಿದ್ರಾಮಯ್ಯ ಪತ್ರ ಬರೆದಿದ್ದಾರೆ. ಈ ಹಿಂದೆ 2020ರಲ್ಲೂ ಯುಪಿ ಸಿಎಂಗೆ ಯಡಿಯೂರಪ್ಪ ಕೂಡ ಪತ್ರ ಬರೆದು ಮನವಿ ಮಾಡಿದ್ದರು. ಇನ್ನು ಈಗ ರಾಜ್ಯದ ಮನವಿಗೆ ಯುಪಿ ಸರ್ಕಾರದ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ಪತ್ರ ಕಳುಹಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿಯನ್ನ ಮುಜರಾಯಿ ಇಲಾಖೆ ಮಾಡುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ್ಯ ಹೂಡಲು ತೊಂದರೆ ಆಗದಂತೆ ಕ್ರಮಕ್ಕೆ ಮುಂದಾಗಿದೆ ಅಂತ ತಿಳಿಸಿದೆ. ಇನ್ನೊಂದು ವರುಷದಲ್ಲಿ ರಾಮಮಂದಿರದ ಬಳಿ ರಾಜ್ಯದ ಅತಿಥಿ ಗೃಹ ತಲೆ ಎತ್ತಲಿದೆ.

ರಾಮನ ದರ್ಶನಕ್ಕೆ ಅಯೋಧ್ಯೆಗೆ ಹೋಗುವ ಕನ್ನಡಿಗರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಮುಂದಾಗಿದೆ. ರಾಮಮಂದಿರ ಬಳಿಯ ಸರಯೂ ನದಿಯ ಸಮೀಪದಲ್ಲೇ ಕರ್ನಾಟಕ ಅತಿಥಿ ಗೃಹ ನಿರ್ಮಾಣವಾಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:24 am, Wed, 10 January 24