BBMP Elections: ಬಿಬಿಎಂಪಿ ಚುನಾವಣೆಗೆ ಸರ್ಕಾರದ ಸಿದ್ಧತೆ; ವಾರ್ಡ್ ವಿಂಗಡಣೆ ಬಗ್ಗೆ ಹೆಚ್ಚಿದ ಭಿನ್ನಾಭಿಪ್ರಾಯ
ಮುಂದಿನ ಚುನಾವಣೆಗೆ ಪರಿಣಾಮ ಬೀರಬಹುದು ಎಂದು ವಾರ್ಡ್ಗಳ ಹೆಚ್ಚಳ ಹಾಗೂ ವಿಂಗಡಣೆ ಕುರಿತು ಆಕ್ಷೇಪ ಕೇಳಿಬಂದಿದೆ. ಅಥವಾ ಈ ಸಂಬಂಧ ಕೋರ್ಟ್ಗೆ ಹೋಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿದೆ.
ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ 243 ವಾರ್ಡ್ಗಳನ್ನು ಸರ್ಕಾರ ಸೃಷ್ಟಿಮಾಡಿಕೊಂಡಿದೆ. ಈ ಬೆನ್ನಲ್ಲೇ ವಾರ್ಡ್ ವಿಂಗಡಣೆ ಬಗ್ಗೆ ಅಸಮಾಧಾನವೂ ಕೇಳಿಬಂದಿದೆ. ಕೆಲವೊಂದು ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿರುವ ಬಗ್ಗೆ ಭಿನ್ನಾಭಿಪ್ರಾಯ ಕೇಳಿಬಂದಿದೆ. ಒಂದಿಂಚು ಜಾಗವನ್ನೂ ಹಳ್ಳಿಗಳನ್ನೂ ಬಿಬಿಎಂಪಿಗೆ ಸೇರಿಸದಂತೆ ಅಭಿಪ್ರಾಯ ಸರ್ಕಾರದಲ್ಲೇ, ಬಿಜೆಪಿ ಶಾಸಕರಿಂದಲೇ ಕೇಳಿಬಂದಿದೆ. ಇದೇ ನೆಪ ಇಟ್ಟುಕೊಂಡು ಚುನಾವಣೆ ಮುಂದೂಡಲು ಪ್ರಯತ್ನ ನಡೆದಿದೆ ಎಂದು ಹೇಳಲಾಗಿದೆ.
ಈ ಮೊದಲು 198 ಇದ್ದ ವಾರ್ಡ್ ಸಂಖ್ಯೆಯನ್ನು 243ಕ್ಕೆ ಏರಿಕೆ, ವಾರ್ಡ್ಗಳ ವಿಂಗಡಣೆ ಮಾಡಲಾಗಿದೆ. ಬೆಂಗಳೂರಿನ ಹೊರಗಿರುವ ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಹೀಗೆ ಮಾಡಲಾಗಿದೆ. ಪ್ರಭಾವಿ ಸಚಿವರು, ಶಾಸಕರ ಕ್ಷೇತ್ರ ಕೂಡ ಇಲ್ಲಿಗೆ ಸೇರುತ್ತದೆ. ಈ ಕಾರಣದಿಂದ ದೊಡ್ಡ ಮಟ್ಟದ ವಿರೋಧ ಕೇಳಿಬಂದಿದೆ. ಪರಿಣಾಮ ಚೆನ್ನಾಗಿರಲ್ಲ ಎಂದು
ಸ್ವಪಕ್ಷೀಯರಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ಹಳ್ಳಿಗಳನ್ನು ಸೇರಿಸಿಕೊಂಡಷ್ಟು ಮತ್ತೆ ನೆರೆಯ ಹಳ್ಳಿಗಳಿಂದ ಆಕ್ಷೇಪ, ಸಮಸ್ಯೆ ಬರಬಹುದು. ಮುಂದಿನ ಚುನಾವಣೆಗೆ ಪರಿಣಾಮ ಬೀರಬಹುದು ಎಂದು ವಾರ್ಡ್ಗಳ ಹೆಚ್ಚಳ ಹಾಗೂ ವಿಂಗಡಣೆ ಕುರಿತು ಆಕ್ಷೇಪ ಕೇಳಿಬಂದಿದೆ. ಅಥವಾ ಈ ಸಂಬಂಧ ಕೋರ್ಟ್ಗೆ ಹೋಗುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿದೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅನುದಾನ ಬಿಡುಗಡೆ: ಬೆಂಗಳೂರು ನಗರಕ್ಕೆ 25 ಲಕ್ಷ, ಇತರ ಜಿಲ್ಲೆಗಳಿಗೆ ತಲಾ 1 ಲಕ್ಷ
ಇದನ್ನೂ ಓದಿ: ಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಹೊಸ ಕೊವಿಡ್ ಮಾರ್ಗಸೂಚಿಯ ತೀರ್ಮಾನ: ಆರ್ ಅಶೋಕ್