ಬೆಂಗಳೂರು: ಆಸ್ಪತ್ರೆಗಳಿಗೆ ದಾಖಲಾಗಲು ಕರ್ನಾಟಕ ರಾಜ್ಯ ಸರ್ಕಾರದಿಂದ ಗೈಡ್ಲೈನ್ಸ್ ಬಿಡುಗಡೆಗೊಳಿಸಲಾಗಿದೆ. ಮುಂದಿನ 2 ವಾರದವರೆಗೆ ಅನ್ವಯವಾಗುವಂತೆ ಸರ್ಕಾರ ಆದೇಶ ನೀಡಿದೆ. ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಸೌಮ್ಯ ಲಕ್ಷಣಗಳಿದದ್ದರೆ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಆದೇಶ ನೀಡಲಾಗಿದೆ.
ಹಲ್ಲು ನೋವು, ತಲೆ ನೋವು ಇತ್ಯಾದಿ ಸಮಸ್ಯೆಗಳಿದ್ದರೆ ಬೇಡ. ಜನರು ಆಸ್ಪತ್ರೆಗೆ ಹೋಗದಂತೆ ರಾಜ್ಯ ಸರ್ಕಾರದಿಂದ ಮನವಿ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಷ್ಟೆ ಆಸ್ಪತ್ರೆಗೆ ತೆರಳಲು ಸರ್ಕಾರ ಕೇಳಿದೆ. ಹೊರರೋಗಿ ವಿಭಾಗಕ್ಕೆ ಬರುವವರಲ್ಲಿ ಹೆಚ್ಚೆಚ್ಚು ಸೋಂಕು ಪತ್ತೆ ಆಗುತ್ತಿದೆ. ಹೊರರೋಗಿ ವಿಭಾಗದಲ್ಲಿ ಜನ ಗುಂಪು ಸೇರದಂತೆ ಎಚ್ಚರವಹಿಸಿ ಎಂದು ಖಾಸಗಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರದಿಂದ ತಾಕೀತು ಹಾಕಲಾಗಿದೆ.
ಕೊವಿಡ್ ವರದಿ ಬರುವವರೆಗೂ ಹೊರಗೆ ಓಡಾಡುವಂತಿಲ್ಲ
ಕೊರೊನಾ ಟೆಸ್ಟ್ಗೆ ಕೊಟ್ಟವರು ಹೊರಗೆ ಓಡಾಡುವಂತಿಲ್ಲ. ವರದಿ ಬರುವವರೆಗೂ ಹೋಂ ಐಸೋಲೇಷನ್ನಲ್ಲಿರಬೇಕು. ಕೊವಿಡ್ ವರದಿ ಬರುವರೆಗೂ ಕೆಲಸಕ್ಕೆ ಹಾಜರಾಗುವಂತಿಲ್ಲ ಎಂದು ಆದೇಶ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮಕ್ಕೆ ಸೂಚನೆ ಕೊಡಲಾಗಿದೆ. ಕೊರೊನಾ ಹರಡದಂತೆ ತಡೆಯಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿದೆ.
ಮಡಿಕೇರಿ: ರೆಸಾರ್ಟ್ ಸಿಬ್ಬಂದಿಗೆ ಕೊವಿಡ್ ಬಂದರೂ ಸೀಲ್ಡೌನ್ ಇಲ್ಲ
ರೆಸಾರ್ಟ್ ಸಿಬ್ಬಂದಿಗೆ ಕೊವಿಡ್ ಬಂದರೂ ಸೀಲ್ಡೌನ್ ಇಲ್ಲ. ಸರ್ಕಾರದ ಕೊವಿಡ್ ನಿಯಮವನ್ನು ಕೊಡಗು ಜಿಲ್ಲಾಡಳಿತ ಪಾಲಿಸುತ್ತಿಲ್ಲ ಎಂಬ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗಿದೆ. ರೆಸಾರ್ಟ್ನ 33 ಸಿಬ್ಬಂದಿಗೆ ಕೊರೊನಾ ಬಂದರೂ ಕೇರ್ಲೆಸ್ ಆಗಿದೆ. ಮೇಕೇರಿ ಗ್ರಾಮದ ಬಳಿಯಿರುವ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ನಲ್ಲಿ ಬೇಜವಾಬ್ದಾರಿ ತೋರಲಾಗಿದೆ ಎಂದು ಹೇಳಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಮಾಜಿ ಸಚಿವ ಟಿ.ಜಾನ್ ಪುತ್ರನ ಮಾಲೀಕತ್ವದ ರೆಸಾರ್ಟ್ನಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿರುವುದು ವರದಿ ಆಗಿದೆ.
ಐದಕ್ಕಿಂತ ಹೆಚ್ಚು ಪ್ರಕರಣ ಬಂದರೆ ರೆಸಾರ್ಟ್ ಮುಚ್ಚಬೇಕು. ಕೊಡಗು ಜಿಲ್ಲಾಡಳಿತ ರೆಸಾರ್ಟ್ ಸೀಲ್ಡೌನ್ ಮಾಡಬೇಕು ಎಂದು ಕೊವಿಡ್ ಉಸ್ತುವಾರಿ ಸಭೆಯಲ್ಲಿ ಉಸ್ತುವಾರಿ ಸಚಿವ ಸೂಚಿಸಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದ್ರು. ಆದರೆ, ಎಂದಿನಂತೆ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ಕಾರ್ಯನಿರ್ವಹಣೆ ಮಾಡುತ್ತಿದೆ. ರೆಸಾರ್ಟ್ನಲ್ಲಿ ನೂರಾರು ಪ್ರವಾಸಿಗರು ಉಳಿದುಕೊಂಡಿದ್ದಾರೆ. ಡಿಹೆಚ್ಒ, ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ಕೊಡಗು ಜಿಲ್ಲಾಡಳಿತ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.
ಕರ್ನಾಟಕ ಕೊರೊನಾ ವರದಿ
ಕರ್ನಾಟಕ ರಾಜ್ಯದಲ್ಲಿ 24 ಗಂಟೆಯಲ್ಲಿ 32,793 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ 7 ಜನರು ಬಲಿ ಆಗಿದ್ದಾರೆ. ಬೆಂಗಳೂರಿನಲ್ಲಿ 24 ಗಂಟೆಯಲ್ಲಿ 22,284 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾದಿಂದ ಐವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,69,850 ಆಗಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 15 ಆಗಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೆ ಕೊರೊನಾ ದೃಢ, ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕೆಲವೆಡೆ ಸಂಕ್ರಾಂತಿ ಆಚರಣೆ
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ
ಜ್ಞ
Published On - 7:14 pm, Sat, 15 January 22