ಗ್ರಾಮೀಣ ವಿಕಾಸದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ, ಮುಂದೊಂದು ದಿನ ನಂ. ಒನ್ ಆಗಲಿದೆ -ರಾಜ್ಯದ ಗುಣಗಾನ ಮಾಡಿದ ಕೇಂದ್ರ ಸಚಿವ ಕಪಿಲ್ ಪಾಟೀಲ್
ಕಾಶ್ಮೀರದಲ್ಲೂ ಗ್ರಾಮಗಳ ಅಭಿವೃದ್ಧಿಯಾಗ್ತಿದೆ. ಉತ್ತಮವಾಗಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಲಿದೆ. ಆ ವಿಶ್ವಾಸ ನಮಗಿದೆ ಎಂದು ಕೇಂದ್ರ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಕರ್ನಾಟಕದ ಗುಣಗಾನ ಮಾಡಿದ್ದಾರೆ.
ಬೆಂಗಳೂರು: ಗ್ರಾಮಗಳನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ 1ಆಗಲಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಪಂಚಾಯತ್ ರಾಜ್ ಖಾತೆಯ ರಾಜ್ಯ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಕರ್ನಾಟಕವನ್ನು ಕೊಂಡಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಗ್ರಾಮಗಳನ್ನು ಆರ್ಥಿಕವಾಗಿಯೂ ಅಭಿವೃದ್ಧಿ ಮಾಡಬೇಕಿದೆ. ನಿನ್ನೆ ರಾಜನಕುಂಟೆ ಹಾಗೂ ದೊಡ್ಡ ಜಾಲ ಗ್ರಾಮ ಪಂಚಾಯತ್ ವೀಕ್ಷಣೆ ಮಾಡಿದ್ದೇನೆ. ಅಲ್ಲಿ ನಮ್ಮ ಯೋಜನೆಗಳು ಜಾರಿಯಾಗಿವೆ. ಅಮೃತ್ ಯೋಜನೆ ಉತ್ತಮವಾಗಿ ಅನುಷ್ಠಾನಗೊಂಡಿದೆ. ನಮ್ಮ ಯೋಜನೆಗಳು ಗ್ರಾಮಗಳಿಗೆ ತಲುಪಿವೆ. ಕರ್ನಾಟಕ ಉತ್ತಮ ಸಾಧನೆ ಮಾಡಿದೆ. ಗ್ರಾಮೀಣ ವಿಕಾಸದಲ್ಲಿ ಉತ್ತಮ ಕೆಲಸ ಮಾಡ್ತಿದೆ. ಗ್ರಾಮೀಣ ವಿಕಾಸ ಅಭಿವೃದ್ಧಿಗೆ ಪೂರಕವಾದುದು ಪ್ರಧಾನಿಯವರ ಗುರಿಯೂ ಇದೇ ಆಗಿದೆ. ಗ್ರಾಮೀಣ ವಿಕಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತೆ. ಹಾಗಾಗಿ ನಮ್ಮ ಗುರಿ ಗ್ರಾಮಗಳ ವಿಕಾಸ.
ಗ್ರಾಮಗಳ ಸ್ವಚ್ಚತೆ ದೇಶದ ಅಭಿವೃದ್ಧಿಗೆ ಪೂರಕ. ಸಾಲಿಡ್ ವೇಸ್ಟ್ ಮೇನೇಜ್ ಮೆಂಟ್ ಚೆನ್ನಾಗಿದೆ. ಇಲ್ಲಿ ಚೆನ್ನಾಗಿ ಅನುಷ್ಟಾನ ಮಾಡಲಾಗ್ತಿದೆ. ಈಶ್ವರಪ್ಪ ಕೂಡ ಇಲಾಖೆಗೆ ನ್ಯಾಯ ಒದಗಿಸುತ್ತಿದ್ದಾರೆ. ಗ್ರಾಮೀಣ ಇಲಾಖೆ ಯೋಜನೆಗಳು ಜನರಿಗೆ ತಲುಪಿವೆ. ಕಾಶ್ಮೀರದಲ್ಲೂ ಗ್ರಾಮಗಳ ಅಭಿವೃದ್ಧಿಯಾಗ್ತಿದೆ. ಉತ್ತಮವಾಗಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಗ್ರಾಮೀಣಾಭಿವೃದ್ಧಿಯಲ್ಲಿ ಕರ್ನಾಟಕ ನಂಬರ್ ಒನ್ ಆಗಲಿದೆ. ಆ ವಿಶ್ವಾಸ ನಮಗಿದೆ ಎಂದು ಕೇಂದ್ರ ಸಚಿವ ಕಪಿಲ್ ಮೋರೇಶ್ವರ್ ಪಾಟೀಲ್ ಕರ್ನಾಟಕದ ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ: Demonetisation: ನೋಟು ನಿಷೇಧದಿಂದ ಈಗಾಗಲೇ ಸಿಕ್ಕ ಮತ್ತು ಇನ್ನೂ ಸಿಗದೇ ಉಳಿದ ಲಾಭಗಳು!