ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ 577 ಮರ ಕಡಿಯಲು ಹೈಕೋರ್ಟ್ ಅನುಮತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2021 | 10:38 PM

Namma Metro: ಈ ಪೈಕಿ 212 ಮರಗಳನ್ನು ಸ್ಥಳಾಂತರಿಸಲು ತಜ್ಞರ ಸಮಿತಿ ವರದಿಯಂತೆ ಹೈಕೋರ್ಟ್ ಸೂಚನೆ ನೀಡಿದೆ.

ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ 577 ಮರ ಕಡಿಯಲು ಹೈಕೋರ್ಟ್ ಅನುಮತಿ
ಬೆಂಗಳೂರು ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ನಗರದ ನಾಗವಾರ-ಗೊಟ್ಟಿಗೆರೆ ಮೆಟ್ರೋ (Namma Metro) ಮಾರ್ಗ ನಿರ್ಮಾಣಕ್ಕೆ 577 ಮರ ಕಡಿಯಲು ಹೈಕೋರ್ಟ್ ಅನುಮತಿ ನೀಡಿದೆ. ಈ ಪೈಕಿ 212 ಮರಗಳನ್ನು ಸ್ಥಳಾಂತರಿಸಲು ತಜ್ಞರ ಸಮಿತಿ ವರದಿಯಂತೆ ಹೈಕೋರ್ಟ್ ಸೂಚನೆ ನೀಡಿದೆ.

ಸಂಚಾರದ ಅವಧಿ ವಿಸ್ತರಣೆ
ನಮ್ಮ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತಾರಗೊಳಿಸಿ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್​ನಿಂದ ಆದೇಶ ನೀಡಲಾಗಿದೆ. ಡಿಸೆಂಬರ್ 20 ರಿಂದ ಬೆಳಗ್ಗೆ 5 ಗಂಟೆಯಿಂದಲೇ ಮೆಟ್ರೋ ರೈಲು ಸಂಚಾರ ಆರಂಭ ಆಗಲಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5 ಗಂಟೆಯಿಂದ ರೈಲು ಸಂಚಾರ ನಡೆಸಲಿದೆ. ಎಲ್ಲಾ ಟರ್ಮಿನಲ್ ನಿಲ್ದಾಣದಿಂದ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿಯಿಂದ ಮೊದಲ ಮೆಟ್ರೋ ಸಂಚಾರ ನಡೆಯಲಿದೆ.

ಭಾನುವಾರ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸಂಚಾರ ಆರಂಭ ಆಗಲಿದೆ. ವಾರದ ಎಲ್ಲಾ ದಿನಗಳಲ್ಲಿ ಉಳಿದ ನಿಲ್ದಾಣಗಳಲ್ಲಿ ಕೊನೆಯ ರೈಲು ಸಂಚಾರ ರಾತ್ರಿ 11 ಗಂಟೆಗೆ ಇರಲಿದೆ. ಮತ್ತು ಮುಖ್ಯ ನಿಲ್ದಾಣ, ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣದಿಂದ ರಾತ್ರಿ 11.30ಕ್ಕೆ ಕೊನೆಯದಾಗಿ ಸಂಚಾರ ಮಾಡಲಿದೆ. ಬಿಎಂಆರ್​​ಸಿಎಲ್​​ನಿಂದ ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ
ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷ ಪೂರ್ಣ! ಪ್ರಯಾಣಿಕರಿಗೆ ಕೃತಜ್ಞತೆ