AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಕಮಾಂಡ್‌ ಆಸ್ಪತ್ರೆ ವಿಸ್ತರಣೆಗೆ 530 ಮರ ಕಡಿಯಲು ಹೈಕೋರ್ಟ್​ ತಡೆ!

ಬೆಂಗಳೂರಿನ ಓಲ್ಡ್​ ಏರ್​ಪೋರ್ಟ್​ ರಸ್ತೆಯಲ್ಲಿರುವ ಕಮಾಂಡ್‌ ಆಸ್ಪತ್ರೆ ವಿಸ್ತರಣೆಗಾಗಿ 530 ಮರಗಳನ್ನು ಕಡಿಯಲು ಬಿಬಿಎಂಪಿ ನೀಡಿದ್ದ ಅನುಮತಿಗೆ ಕರ್ನಾಟಕ ಹೈಕೋರ್ಟ್​ ಬ್ರೇಕ್ ಹಾಕಿದೆ. ಮುಂದಿನ ಆದೇಶದವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಸಿಜೆ ಎನ್.‌ವಿ.ಅಂಜಾರಿಯಾ,‌ನ್ಯಾ. ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ಹೊರಡಿಸಿದೆ.

ಬೆಂಗಳೂರಿನ ಕಮಾಂಡ್‌ ಆಸ್ಪತ್ರೆ ವಿಸ್ತರಣೆಗೆ 530 ಮರ ಕಡಿಯಲು ಹೈಕೋರ್ಟ್​ ತಡೆ!
Karnataka High Court
Ramesha M
| Updated By: ರಮೇಶ್ ಬಿ. ಜವಳಗೇರಾ|

Updated on: Jan 22, 2025 | 10:19 PM

Share

ಬೆಂಗಳೂರು, (ಜನವರಿ 22): ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕಮಾಂಡ್‌ ಆಸ್ಪತ್ರೆ ವಿಸ್ತರಣೆ ಮಾಡಲು 530 ಮರಗಳನ್ನು ಕತ್ತರಿಸಲು ಬಿಬಿಎಂಪಿ ನೀಡಿರುವ ಅನುಮತಿ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಬಿಬಿಎಂಪಿಯ ಟ್ರೀ ಆಫೀಸರ್ 530 ಮರ ಕಡಿಯಲು ಅನುಮತಿ ನೀಡಿದ್ದಾರೆ. ಆದ್ರೆ, ಅದಕ್ಕೆ ಪರ್ಯಾಯವಾಗಿ ಮರ ಬೆಳಸುವ ಬಗ್ಗೆ ಸ್ಪಷ್ಟ ಕ್ರಮವಿಲ್ಲ‌. 530 ಮರ ಕಡಿಯಲು ಸೂಕ್ತ ಪ್ರಕ್ರಿಯೆ ಪಾಲಿಸಲಾಗಿಲ್ಲ‌. ಹೀಗಾಗಿ ಮರ ಕಡಿಯಲು ಮಧ್ಯಂತರ ತಡೆ ನೀಡುವಂತೆ ಅರ್ಜಿದಾರ ದತ್ತಾತ್ರೇಯ ದೇವರೆ ಪರ ವಕೀಲರು ಮನವಿ ಮಾಡಿದ್ದರು. ಈ ಮನವಿಯನ್ನು ಸಿಜೆ ಎನ್.‌ವಿ.ಅಂಜಾರಿಯಾ,‌ನ್ಯಾ. ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಪುರಸ್ಕರಿಸಿದ್ದು, ಮುಂದಿನ‌ ಆದೇಶದವರೆಗೆ 530 ಮರಗಳನ್ನು ಕಡಿಯದಂತೆ ಸೂಚಿಸಿದೆ.

ಕೈಗೊಳ್ಳಲು ಉದ್ದೇಶಿಸಲಾಗಿದೆ. ನಗರದ ಹೃದಯ ಭಾಗದಲ್ಲಿಅಷ್ಟೊಂದು ಮರಗಳನ್ನು ಕಡಿದು, ಅವುಗಳಿಗೆ ಬದಲಿಗೆ ನಗರ ಪ್ರದೇಶದಿಂದ ದೂರದಲ್ಲಿ ಗಿಡಗಳನ್ನು ನೆಟ್ಟರೆ ಏನು ಪ್ರಯೋಜನ? ಮರಗಳನ್ನು ಕಡಿಯಲು ಅನುಮತಿ ನೀಡುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ. ಹಾಗಾಗಿ ಸದ್ಯಕ್ಕೆ ಮರಗಳನ್ನು ಕತ್ತರಿಸಲು ಅನುಮತಿ ನೀಡಬಾರದು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮುಂದಿನ ಆದೇಶದವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದೆ.

ಅದೇ ರೀತಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೊ ರೈಲು ಮಾರ್ಗಕ್ಕಾಗಿ 75 ಮರಗಳನ್ನು ಕಡಿಯಲು ಅನುಮತಿ ನೀಡುವ ಬಗ್ಗೆ ಫೆ.4ರಂದು ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಮೆಟ್ರೊ ಯೋಜನೆಗೆ ಮರ ಕಡಿಯುವುದನ್ನು ಆಕ್ಷೇಪಿಸಿ ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಸಿಜೆ ಎನ್‌.ವಿ.ಅಂಜಾರಿಯಾ ಮತ್ತು ನ್ಯಾ. ಎಂ.ಐ.ಅರುಣ್‌ ಅವರಿದ್ದ ವಿಭಾಗೀಯ ಪೀಠ, ಫೆ.4ರಿಂದ ವಿಚಾರಣೆ ಆರಂಭಿಸುವುದಾಗಿ ತಿಳಿಸಿದೆ.