ಪ್ರಯಾಣಿಕರ ಗಮನಕ್ಕೆ: ಈ ದಿನಗಳಲ್ಲಿ ಕೆಂಪೇಗೌಡ ಏರ್‌ಪೋರ್ಟ್​ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ

2025ನೇ ಸಾಲಿನ ಏರ್ ಶೋಗೆ ಕೌಂಟ್ ಡೌನ್ ಶುರುವಾಗಿದೆ. ಇತ್ತ ಏರ್ ಶೋ ಹಿನ್ನೆಲೆ ನಾಳೆಯಿಂದ ಫೆಬ್ರವರಿ 17ರವರೆಗೆ ಬರೋಬ್ಬರಿ 26 ದಿನಗಳ ಕಾಲ ಬೆಂಗಳೂರಿನ ಯಲಹಂಕ ಸುತ್ತಮುತ್ತ ಮಾಂಸ ಮಾರಾಟ, ನಾನ್ ವೆಜ್ ಹೊಟೇಲ್ ಚಟುವಟಿಕೆಗಳಿಗೆ ಪಾಲಿಕೆ ನಿಷೇಧ ಏರಿದೆ. ಅಲ್ಲದೇ ವಾಯುಯಾನ ಪ್ರದೇಶ ಮುಚ್ಚಲಾಗುತ್ತಿರುವುದರಿಂದ ಕೆಂಪೇಗೌಡ ಏರ್‌ಪೋರ್ಟ್ ವಿಮಾನ ಹಾರಾಟದಲ್ಲಿ ವ್ಯತ್ಯಯ ಆಗಲಿದೆ.

ಪ್ರಯಾಣಿಕರ ಗಮನಕ್ಕೆ: ಈ ದಿನಗಳಲ್ಲಿ ಕೆಂಪೇಗೌಡ ಏರ್‌ಪೋರ್ಟ್​ನಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯಯ
Kempegowda International Airport
Follow us
ರಮೇಶ್ ಬಿ. ಜವಳಗೇರಾ
|

Updated on:Jan 22, 2025 | 8:55 PM

ಬೆಂಗಳೂರು, (ಜನವರಿ 22): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ತಾತ್ಕಾಲಿಕವಾಗಿ ಅಡಚಣೆ ಉಂಟಾಗಲಿದೆ. ಇದೇ ಫೆಬ್ರವರಿ 10ರಿಂದ 14ರವರೆಗೆ ಏರೋ ಇಂಡಿಯಾದ 15ನೇ ಆವೃತ್ತಿ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೆ.5ರಿಂದ14ರ ವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಯಾನ ಮುಚ್ಚಲಾಗುತ್ತದೆ. ಇದರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಲಿದೆ. ಈ ಬಗ್ಗೆ ಕೆಂಪೇಗೌಡ ಏರ್​ಪೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಏರ್​ ಶೋ ಹಿನ್ನೆಯಲ್ಲಿ 10 ದಿನಗಳ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನಯಾನದಲ್ಲಿ ಅಡಚಣೆ ಉಂಟಾಗಲಿದೆ. ನಿಗದಿತ ಅವಧಿಯಲ್ಲಿ ಪ್ರತಿದಿನ ಕೆಲವು ಗಂಟೆಗಳ ಕಾಲ ವಾಯುಪ್ರದೇಶವನ್ನು ಕ್ಲೋಸ್ ಮಾಡಲಾಗುತ್ತದೆ. ಹೀಗಾಗಿ ವಿಮಾನಗಳ ಕಾರ್ಯಾಚರಣೆಗಳು ವ್ಯತ್ಯಯವಾಗಬಹುದು. ಇದರಿಂದ ಪ್ರಯಾಣಿಕರು ತಮ್ಮ ನಿಗದಿತ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಬಹುದು ಎಂದು ಕೆಂಪೇಗೌಡ ಏರ್​ಪೋರ್ಟ್ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರು ಏರೋ ಶೋ 2025: ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ, ಕ್ರೇನ್​ ಸ್ಥಗಿತಕ್ಕೆ ಸೂಚನೆ

ಕೆಂಪೇಗೌಡ ಏರ್​ಪೋರ್ಟ್​ ಪ್ರಕಟಣೆಯಲ್ಲೇನಿದೆ?

ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ ನಿಮಿತ್ತ ಫೆಬ್ರವರಿ 5 ರಿಂದ ಫೆಬ್ರವರಿ 14, 2025 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ ಎಂದು ಕೆಂಪೇಗೌಡ ಏರ್​ಪೋರ್ಟ್​ ಅಧಿಕೃತವಾಗಿ ತಿಳಿಸಿದೆ.

ವಿಮಾನ ಹಾರಾಟ ವ್ಯತ್ಯಯದ ಸಮಯ

  • ಫೆಬ್ರವರಿ 5 ಮತ್ತು 8, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.
  • ಫೆಬ್ರವರಿ 9, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಫೆಬ್ರವರಿ
  • ಫೆಬ್ರವರಿ 10, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ.
  • ಫೆಬ್ರವರಿ 11ಮತ್ತು12, 2025: ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ.
  • ಫೆಬ್ರವರಿ 13 ಮತ್ತು14, 2025: ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

ಏರ್ ಶೋ ಹಿನ್ನೆಲೆ 26 ದಿನ ಮಾಂಸ ಮಾರಾಟ ಬಂದ್

ಯಲಹಂಕ ವಾಯುನೆಲೆಯಲ್ಲಿ ಇದೇ ಫೆಬ್ರವರಿ 10 ರಿಂದ 14 ರವರೆಗೆ 2025ನೇ ಸಾಲಿನ ಏರ್ ಶೋ ನಡೆಸೋಕೆ ಪ್ಲಾನ್ ರೆಡಿಯಾಗಿದೆ. ಇತ್ತ ಏರ್ ಶೋ ವೇಳೆ ಪಕ್ಷಿಗಳ ಕಾಟಕ್ಕೆ ಬ್ರೇಕ್ ಹಾಕಲು ಯಲಹಂಕ ಸುತ್ತಮುತ್ತ 26ದಿನಗಳ ಕಾಲ ಮಾಂಸ ಮಾರಾಟ ಹಾಗೂ ಮಾಂಸಹಾರಿ ಹೊಟೇಲ್ ಗಳಿಗೆ ಪಾಲಿಕೆ ನಿರ್ಬಂಧ ಹೇರಿತ್ತು. ಇದೀಗ ಪಾಲಿಕೆಯ ಈ ನಡೆಗೆ ಮಾಂಸ ವ್ಯಾಪಾರಿಗಳು ಹಾಗೂ ಹೊಟೇಲ್ ಮಾಲೀಕರ ಆಕ್ಷೇಪ ವ್ಯಕ್ತವಾಗ್ತಿದೆ.ವಾರಗಟ್ಟಲೇ ವ್ಯಾಪಾರಕ್ಕೆ ಹೊಡೆತ ಬೀಳುವ ಆತಂಕಕ್ಕೆ ವ್ಯಾಪಾರಿಗಳು ಕಂಗಾಲಾಗಿಹೋಗಿದ್ದಾರೆ.

ಹಾಗೇ ಯಾವುದೇ ಡ್ರೋನ್, ಏರ್ ಬಲೂನ್ ಸೇರಿ ಬೆಂಗಳೂರಿನಲ್ಲಿ ಯಾವುದೇ ರೀತಿಯ ವೈಮಾನಿಕ ಹಾರಾಟದ ಮೇಲೆ ಫೆಬ್ರವರಿ 10 ರಿಂದ ಐದು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:52 pm, Wed, 22 January 25

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ