ಬೆಂಗಳೂರು: ಡಿಸೆಂಬರ್ 18ನೇ ತಾರೀಖಿನಂದು ಬೃಹತ್ ಲೋಕ ಅದಾಲತ್ ಆಯೋಜನೆ ಮಾಡುವ ಬಗ್ಗೆ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವೀರಪ್ಪ ಮಾಹಿತಿ ನೀಡಿದ್ದಾರೆ. 2.15 ಲಕ್ಷ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜಿ ಸಂಧಾನದ ಮೂಲಕ ಕೇಸ್‌ಗಳ ಇತ್ಯರ್ಥಕ್ಕೆ ಯತ್ನ ಮಾಡಲಾಗುವುದು. ಬಿಬಿಎಂಪಿ ಖಾತಾ ಸಮಸ್ಯೆ ನಿವಾರಣೆಗೂ ಕ್ರಮ ಕೈಗೊಳ್ಳುತ್ತೇವೆ. ಕುಂದುಕೊರತೆ ನಿವಾರಣಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ಇದರ ಅವಕಾಶ ಸದುಪಯೋಗಪಡಿಕೊಳ್ಳಲು ಕಕ್ಷಿದಾರರಿಗೆ ಕರೆ ನೀಡಲಾಗಿದೆ. ಹೈಕೋರ್ಟ್‌ನ ನ್ಯಾಯಮೂರ್ತಿ ಬಿ.ವೀರಪ್ಪ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಶಿವರಾಮ ಕಾರಂತ ಬಡಾವಣೆಗಾಗಿ ಭೂಸ್ವಾಧೀನ ವಿಚಾರ; ಬಿಡಿಎ ಭೂಸ್ವಾಧೀನ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾ
ಶಿವರಾಮ ಕಾರಂತ ಬಡಾವಣೆಗಾಗಿ ಭೂಸ್ವಾಧೀನ ವಿಚಾರವಾಗಿ, ಬಿಡಿಎ ಭೂಸ್ವಾಧೀನ ಪ್ರಶ್ನಿಸಿದ್ದ ರಿಟ್ ಅರ್ಜಿ ವಜಾ ಮಾಡಲಾಗಿದೆ. ಅರ್ಜಿ ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. 3,546 ಎಕರೆ ಭೂಸ್ವಾಧೀನ ಅಂತಿಮ ಅಧಿಸೂಚನೆ ಪ್ರಶ್ನಿಸಲಾಗಿತ್ತು. ಸುಪ್ರೀಂಕೋರ್ಟ್ ಭೂಸ್ವಾಧೀನದ ನಿಗಾ ವಹಿಸಿದೆ. ಸುಪ್ರೀಂಕೋರ್ಟ್ ಆದೇಶ ಮರುವ್ಯಾಖ್ಯಾನ ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶ ನೀಡಿದೆ. ಅದರಂತೆ, ಭೂಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿ ವಜಾ ಮಾಡಲಾಗಿದೆ.
ದೇಶ ಬಿಡುವಂತೆ ಚೀನಾ ಪ್ರಜೆಗೆ ನೋಟಿಸ್ ಹಿನ್ನೆಲೆ; ನೋಟಿಸ್ ಪ್ರಶ್ನಿಸಿದ್ದ ಚೀನಾ ಪ್ರಜೆ ಅರ್ಜಿ ವಜಾ
ದೇಶ ಬಿಡುವಂತೆ ಚೀನಾ ಪ್ರಜೆಗೆ ನೋಟಿಸ್ ಹಿನ್ನೆಲೆಯಲ್ಲಿ ನೋಟಿಸ್ ಪ್ರಶ್ನಿಸಿದ್ದ ಚೀನಾ ಪ್ರಜೆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2020ರಿಂದಲೂ ಮಹಿಳೆ ವೀಸಾ ಅವಧಿ ಮೀರಿ ತಂಗಿದ್ದರು. ವೀಸಾ ಅಧಿಕಾರಿಗಳು ದೇಶ ಬಿಡುವಂತೆ ನೋಟಿಸ್ ನೀಡಿದ್ದರು. ವಿಮಾನಯಾನ ಆರಂಭವಾದ ತಕ್ಷಣವೇ ಹೊರಡಬೇಕು, ಮೊದಲ ವಿಮಾನದಲ್ಲೇ ಹೊರಡುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಚೀನಾ ಪ್ರಜೆ ಲೀ ಡಾಂಗ್ ನೋಟಿಸ್ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ ಇದೀಗ ತೀರ್ಪು ನೀಡಲಾಗಿದೆ. ವಿದೇಶಿ ವ್ಯಕ್ತಿಗಳು ದೇಶದ ಕಾನೂನಿಗೆ ಬದ್ಧವಾಗಿರಬೇಕು. ಚೀನಾ ಸೇರಿದಂತೆ ವಿದೇಶಗಳಲ್ಲಿ ಕಠಿಣ ಕಾನೂನಿದೆ. ವೀಸಾ ಅವಧಿ ಮೀರಿದವರಿಗೆ ಭಾರೀ ದಂಡ, ಶಿಕ್ಷೆ ವಿಧಿಸಲಾಗುತ್ತದೆ. ಅವರೂ ಭಾರತದ ಕಾನೂನಿಗೆ ಬದ್ಧರಾಗಿರಬೇಕು. ಉಲ್ಲಂಘಿಸಿದವರಿಗೆ ಹೆಚ್ಚಿನ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: GGVV: ‘ಗರುಡ ಗಮನ..’ ಚಿತ್ರ ಪ್ರದರ್ಶನಕ್ಕೆ ತಡೆ ಕೋರಿ ಕೋರ್ಟ್‌ಗೆ ಅರ್ಜಿ; ಮಾದೇವ ಹಾಡಿನ ಬಗ್ಗೆ ಆಕ್ಷೇಪ
ಇದನ್ನೂ ಓದಿ: ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ನೀಡಿಕೆ ಕಾರಣ ಬಯಲಾಯ್ತು; ಕೋರ್ಟ್‌ಗೆ ಹಾಜರಾಗದಿರಲು ನಿರ್ಧಾರ
Published On - 8:41 pm, Tue, 7 December 21