ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ನೀಡಿಕೆ ಕಾರಣ ಬಯಲಾಯ್ತು; ಕೋರ್ಟ್‌ಗೆ ಹಾಜರಾಗದಿರಲು ನಿರ್ಧಾರ
ಪ್ರಕರಣ ಹಿಂಪಡೆದಿದ್ದರೂ ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು ಏಕೆ ಎಂಬ ವಿಚಾರ ನಿನ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸಮನ್ಸ್ ನೀಡಿಕೆಗೆ ನೈಜ ಕಾರಣ ಏನು ಎಂಬುದು ಇದೀಗ ಬಯಲಾಗಿದೆ. ಈ ಮಧ್ಯೆ, ಸಮನ್ಸ್ ಅನ್ವಯ ಇಂದು ಹೋರಾಟಗಾರರು ವಿಚಾರಣೆಗೆ ಕೋರ್ಟ್ನಲ್ಲಿ ಹಾಜರಾಗಬೇಕಿತ್ತು. ಆದರೆ ಅವರು ಯಾರೂ ಕೋರ್ಟ್‌ಗೆ ಹಾಜರಾಗದೆ, ದೂರವುಳಿದಿದ್ದಾರೆ
ಧಾರವಾಡ: ಪ್ರಕರಣ ಹಿಂಪಡೆದಿದ್ದರೂ ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್ ಜಾರಿಯಾಗಿದ್ದು ಏಕೆ ಎಂಬ ವಿಚಾರ ನಿನ್ನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಸಮನ್ಸ್ ನೀಡಿಕೆಗೆ ನೈಜ ಕಾರಣ ಏನು ಎಂಬುದು ಇದೀಗ ಬಯಲಾಗಿದೆ. ಈ ಮಧ್ಯೆ, ಸಮನ್ಸ್ ಅನ್ವಯ ಇಂದು ಹೋರಾಟಗಾರರು ವಿಚಾರಣೆಗೆ ಕೋರ್ಟ್ನಲ್ಲಿ ಹಾಜರಾಗಬೇಕಿತ್ತು. ಆದರೆ ಅವರು ಯಾರೂ ಕೋರ್ಟ್‌ಗೆ ಹಾಜರಾಗದೆ, ದೂರವುಳಿದಿದ್ದಾರೆ.
2015ರಲ್ಲಿ ನಡೆದಿದ್ದ ಮಹದಾಯಿ ಹೋರಾಟದ ವಿಷಯದಲ್ಲಿ ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ 13ಕ್ಕೂ ಹೆಚ್ಚು ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿತ್ತು. ಆ ವೇಳೆ 187 ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕೇಸ್ ವಾಪಸ್ ಸಹ ಪಡೆದಿತ್ತು. ಆದರೂ ಕೆಲವು ರೈತರಿಗೆ ನವಲಗುಂದ ಜೆಎಂಎಫ್‌ಸಿ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿತ್ತು. ಆದರೆ ನಾವು ಕೋರ್ಟ್‌ಗೆ ಹಾಜರಾಗದಿರಲು ನಿರ್ಧರಿಸಿದ್ದೇವೆ ಎಂದು ಪ್ರಕರಣದ ಪ್ರಮುಖ ಆರೋಪಿ, ಮಹದಾಯಿ ಹೋರಾಟಗಾರ ಲೋಕನಾಥ ಹೆಬಸೂರ ಪ್ರತಿಕ್ರಿಯೆ ನೀಡಿದ್ದಾರೆ.
ಇಷ್ಟಕ್ಕೂ ಇವರಿಗೆಲ್ಲಾ ಸಮನ್ಸ್ ಜಾರಿಗೆಯಾಗಿದ್ದು ಏಕೆ?
ಸರ್ಕಾರ ಎಲ್ಲ ಕೇಸ್ ವಾಪಸ್ ಪಡೆಯುವುದಾಗಿ ಹೇಳಿತ್ತು. ಆದರೆ 56 ಕೇಸ್‌ಗಳ ಪೈಕಿ 51 ಮಾತ್ರವೇ ವಾಪಸ್ ಪಡೆದಿತ್ತು. ಉಳಿದವು ಪೆಂಡಿಂಗ್ ಇವೆ. ಉಳಿದ ಐದು ಕೇಸುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಅವುಗಳಿಗೆ ಸಂಬಂಧಿಸಿ ಈಗ ಸಮನ್ಸ್ ಬಂದಿವೆ ಎಂದು ಸ್ವತಃ ಹೋರಾಟಗಾರ ಲೋಕನಾಥ ಹೆಬಸೂರ ತಿಳಿಸಿದ್ದಾರೆ. ಇದೇ ಡಿಸೆಂಬರ್ 13ಕ್ಕೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ಇದೆ. ಅಷ್ಟರೊಳಗೆ ಸರ್ಕಾರ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಬೇಕು. ಕ್ಯಾಬಿನೆಟ್‌ನಲ್ಲಿ ಕೇಸ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಕರಣ ಹಿಂಪಡೆದಿದ್ದರೂ ಮಹದಾಯಿ ಹೋರಾಟಗಾರರಿಗೆ ಮತ್ತೆ ಸಮನ್ಸ್, ಸಿಎಂ ಬೊಮ್ಮಾಯಿಗೆ ಕಂಟಕ, ಕೋನರೆಡ್ಡಿ ಹೇಳೋದೇನು?
Published On - 1:07 pm, Tue, 7 December 21