ಅಂಗವಿಕಲರಿಗೆ ಕರಕುಶಲ ತರಬೇತಿ, ಉದ್ಯೋಗ: ಚಿರಂತನ ಟ್ರಸ್ಟ್ನಿಂದ ಅರ್ಜಿ ಆಹ್ವಾನ
ತರಬೇತಿಯ ನಂತರ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದಲೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ.
ಬೆಂಗಳೂರು: ಅಂಗವಿಕಲರಿಗೆ ಕರಕುಶಲ ತರಬೇತಿ ಹಾಗೂ ಉದ್ಯೋಗ ಸೌಲಭ್ಯ ಕಲ್ಪಿಸಲು ಚಿರಂತನ ಟ್ರಸ್ಟ್ ಮುಂದಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿದೆ. ಭಾರತ ಸರ್ಕಾರದ ಅಧೀನದಲ್ಲಿರುವ ಒಎನ್‍ಜಿಸಿ ಸಹಯೋಗದಲ್ಲಿ ಚಿರಂತನ ಟ್ರಸ್ಟ್ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಡೌನ್ ಸಿಂಡ್ರೋಮ್, ಆಟಿಸಂ, ಡಿಸ್ಲೆಕ್ಸಿಯಾ, ಕಲಿಕೆಯಲ್ಲಿ ತೊಂದರೆಯಿರುವವರು, ಶ್ರವಣ ದೋಷವುಳ್ಳವರು, ಸೆರೆಬ್ರಲ್ ಪಾಲ್ಸಿ ಮುಂತಾದ ವಿಶೇಷ ಸಮಸ್ಯೆಗಳುಳ್ಳವರಿಗೆ ಚಿರಂತನ ಟ್ರಸ್ಟ್ ತರಬೇತಿ ನೀಡಲಿದೆ. ತರಬೇತಿಯ ನಂತರ ವಿದ್ಯಾರ್ಥಿಗಳನ್ನು ಟ್ರಸ್ಟ್ ವತಿಯಿಂದಲೇ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಅವಧಿಯಲ್ಲಿ ಅವರು ಪ್ರತಿದಿನ 3 ಗಂಟೆ ಕೆಲಸ ಮಾಡಬೇಕು. ಅದಕ್ಕೆ ಟ್ರಸ್ಟ್ ವತಿಯಿಂದ ಸ್ಟೇಫಂಡ್ ನೀಡಲಾಗುತ್ತದೆ.
ಬಸವನಗುಡಿಯ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಈಚೆಗೆ ತರಬೇತಿಗೆ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಚಾಲನೆ ನೀಡಿದರು. ಒಎನ್‍ಜಿಸಿ ಫೌಂಡೇಶನ್ನ ಸಿಇಒ ಡಿ.ಎಂ.ಕಿರಣ್ ಹಾಗೂ ಚಿರಂತನದ ಸಂಸ್ಥಾಪಕಿ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ರಚನಾ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದದರು.
ತರಬೇತಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. 17 ವರ್ಷ 6 ತಿಂಗಳು ಮೇಲ್ಪಟ್ಟವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವವರು ಬೌದ್ಧಿಕ ಅಂಗವೈಕಲ್ಯ (ಅಲ್ಪ ಪ್ರಮಾಣದಿಂದ ಮಧ್ಯಮ), ಆಟಿಸಂ (ಅಲ್ಪ ಪ್ರಮಾಣದಿಂದ ಮಧ್ಯಮ), ಸೆರೆಬ್ರಲ್ ಪಾಲ್ಸಿ (ಅಲ್ಪ), ಡೌನ್ ಸಿಂಡ್ರೋಮ್ ಹಾಗೂ ಇನ್ನಿತರ ಜೆನೆಟಿಕ್ ಸಮಸ್ಯೆಗಳು (ಅಲ್ಪ ಪ್ರಮಾಣದಿಂದ ಮಧ್ಯಮ). ದೈನಂದಿನ ಬದುಕು ನಡೆಸಲು ಅಗತ್ಯವಿರುವ ಸಾಮಾಜಿಕ ಹಾಗೂ ಪ್ರಾಯೋಗಿಕ ಕೌಶಲಗಳು ಮತ್ತು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಬೇಕು. ಬಣ್ಣಗಳನ್ನು ಸಮರ್ಥವಾಗಿ ಬಳಸಲು ಹಾಗೂ ಇಕ್ಕಳವನ್ನು ಚೆನ್ನಾಗಿ ಹಿಡಿದುಕೊಳ್ಳಲು ಬರಬೇಕು. ಕಣ್ಣು ಮತ್ತು ಕೈ ನಡುವೆ ಸಮನ್ವಯ ಇರಬೇಕು. ಆಕಾರ, ಬಣ್ಣ, ಗಾತ್ರದ ಮೂಲಭೂತ ತಿಳಿವಳಿಕೆ ಇರಬೇಕು. ಸಂಖ್ಯೆಗಳು ಮತ್ತು ಸಾಮಾನ್ಯ ಗಣಿತದ ಜ್ಞಾನ ಇರಬೇಕು.
ಹೇಳಿದ್ದನ್ನು ಅರ್ಥ ಮಾಡಿಕೊಂಡು, ಅನುಸರಿಸುವ ಶಕ್ತಿ ಅಭ್ಯರ್ಥಿಗೆ ಇರಬೇಕು. ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ನ ಪ್ರಾಥಮಿಕ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಇದ್ದರೆ ಉತ್ತಮ. ಓದಲು, ಬರೆಯಲು ಹಾಗೂ ಅಂಕಿಗಳನ್ನು ತಿಳಿದುಕೊಳ್ಳುವ ಜ್ಞಾನವಿದ್ದರೆ ಒಳ್ಳೆಯದು. ನಿಯೋಸ್ (10 ಮತ್ತು 12ನೇ ತರಗತಿ ಪಾಸಾದ) ಅಭ್ಯರ್ಥಿಗಳಿಗೆ ಆದ್ಯತೆ. ಮೋಟರ್ ಕುರಿತ ತಿಳಿವಳಿಕೆ, ಕುಳಿತುಕೊಳ್ಳುವ ತಾಳ್ಮೆ, ಸೃಜನಶೀಲ ಹಾಗೂ ಸಾಮಾಜಿಕವಾಗಿ ಬೆರೆಯುವ ಗುಣ ಇರಬೇಕು. ಆರೋಗ್ಯ ಉತ್ತಮವಾಗಿರಬೇಕು ಮತ್ತು ತಂಡದ ಜೊತೆ ಬೆರೆತು ಕೆಲಸ ಮಾಡುವ ಸಾಮರ್ಥ್ಯ ಹಾಗೂ ಮನಸ್ಥಿತಿ ಇರುವುದು ಬಹಳ ಮುಖ್ಯ.
ತರಬೇತಿಯ ವಿವರ – ಭಾರತ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯೊಂದಿಗೆ ಸೇರಿ ಚಿರಂತನ ಟ್ರಸ್ಟ್ ರೂಪಿಸಿರುವ ಕಾರ್ಯಕ್ರಮ – 20 ಮಂದಿ ಅಂಗವಿಕಲ ವ್ಯಕ್ತಿಗಳಿಗೆ ತರಬೇತಿ ಮತ್ತು ಕೆಲಸ ನೀಡಲಾಗುತ್ತದೆ – ವಿದ್ಯಾರ್ಥಿಗಳಿಗೆ 3 ತಿಂಗಳು ತರಬೇತಿ. ನಂತರ ಅವರಿಗೆ ನಮ್ಮಲ್ಲೇ ಸ್ಟೈಪೆಂಡ್ ಜೊತೆ ಉದ್ಯೋಗ. – ಸಮಯ: ತರಬೇತಿಯ ನಂತರ ಅಭ್ಯರ್ಥಿಗಳು ನಿತ್ಯ 3 ಗಂಟೆ ಕಾಲ ಶಿಫ್ಟ್ಗಳಲ್ಲಿ ಕೆಲಸ ಮಾಡಬೇಕು. ಶಿಫ್ಟ್ ಬದಲಾಗುತ್ತದೆ. – ಶುಲ್ಕ: ಇದು ಉಚಿತ ತರಬೇತಿ – ಸಾರಿಗೆ: ಸದ್ಯಕ್ಕೆ ಸಂಸ್ಥೆಯಿಂದ ಸಾರಿಗೆ-ಪ್ರಯಾಣ ವ್ಯವಸ್ಥೆ ಇರುವುದಿಲ್ಲ. -ಸ್ಟೇಫಂಡ್: ಅಭ್ಯರ್ಥಿಯ ಸಾಮರ್ಥ್ಯ ಹಾಗೂ ಕೆಲಸ ಮಾಡುವ ಗಂಟೆಗಳ ಆಧಾರದ ಮೇಲೆ ತರಬೇತಿಯ ನಂತರ ನಿರ್ಧರಿಸಲಾಗುವುದು. -ತರಬೇತಿ ವಿಷಯ: ಬ್ಲಾಕ್ ಪ್ರಿಂಟಿಂಗ್ ಹಾಗೂ ಕೈಮಗ್ಗದ ಬಟ್ಟೆ, ಪೇಪರ್ ಮ್ಯಾಶ್ ಉತ್ಪನ್ನಗಳು, ಟೆರೇರಿಯಮ್ ತಯಾರಿಕೆ ಹಾಗೂ ಜೋಡಿಸುವುದು, ಬಾಳೆ ಎಲೆಯ ಎನ್ವೆಲಪ್ ಮತ್ತು ಕೋಸ್ಟರ್ಗಳ ತಯಾರಿಕೆ. – ಸ್ಥಳ: ಚಿರಂತನ, ಸುಂದರನಗರ, ಬೆಂಗಳೂರು, ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಮೊಬೈಲ್ 81055 64884, ಇಮೇಲ್- info@chiranthana.in
ಇದನ್ನೂ ಓದಿ: 5ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಆರೋಗ್ಯ ವಿಜ್ಞಾನ ಸಂಶೋಧನಾ ಸ್ಪರ್ಧೆ: ಭವಿಷ್ಯದ ವಿಜ್ಞಾನಿಗಳಿಗೆ ಇಲ್ಲಿದೆ ಅವಕಾಶ ಇದನ್ನೂ ಓದಿ: ಉದ್ಯೋಗ ಬದಲಾವಣೆ ನಂತರ ಇಪಿಎಫ್ ಖಾತೆದಾರರು ಖಾತೆ ವರ್ಗಾವಣೆ ಬಗ್ಗೆ ಚಿಂತಿಸಬೇಕಿಲ್ಲ ಏಕೆ, ಇಲ್ಲಿದೆ ಮಾಹಿತಿ