ಉದ್ಯೋಗ ಬದಲಾವಣೆ ನಂತರ ಇಪಿಎಫ್ ಖಾತೆದಾರರು ಖಾತೆ ವರ್ಗಾವಣೆ ಬಗ್ಗೆ ಚಿಂತಿಸಬೇಕಿಲ್ಲ ಏಕೆ, ಇಲ್ಲಿದೆ ಮಾಹಿತಿ
ಇಪಿಎಫ್‌ಒ ಖಾತೆದಾರರು ತಮ್ಮ ಉದ್ಯೋಗವನ್ನು ಬದಲಾವಣೆ ಮಾಡಿದಾಗ ಇನ್ನು ಖಾತೆ ವರ್ಗಾವಣೆ ಮಾಡುವ ಅಗತ್ಯ ಇರುವುದಿಲ್ಲ ಏಕೆ ಗೊತ್ತೆ?
ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಸಭೆ ನವೆಂಬರ್ 20, 2021ರ ಶನಿವಾರದಂದು ನಡೆದಿತ್ತು. ಕೇಂದ್ರೀಕೃತ ಮಾಹಿತಿ ತಂತ್ರಜ್ಞಾನ ಬೆಂಬಲಿತ ವ್ಯವಸ್ಥೆ ಅಭಿವೃದ್ಧಿಗೊಳಿಸಲು ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC)ಗೆ ಸಿಬಿಟಿಯಿಂದ ವಹಿಸಲಾಗಿದೆ. ಈ ಬೆಳವಣಿಗೆಯ ನಂತರ ಉದ್ಯೋಗಿಗಳು ಉದ್ಯೋಗ ಬದಲಾವಣೆ ಮಾಡಿದ ನಂತರವೂ ಅದೇ ಇಪಿಎಫ್ ಖಾತೆ ಸಂಖ್ಯೆ ಮುಂದುವರಿಯಲಿದೆ. “ಇದರ ನಂತರ, ಕ್ಷೇತ್ರ ಕಾರ್ಯಚಟುವಟಿಕೆಗಳು ಹಂತಹಂತವಾಗಿ ಕೇಂದ್ರ ಡೇಟಾಬೇಸ್ಗೆ ವರ್ಗಾವಣೆ ಆಗುತ್ತವೆ. ಸುಗಮ ಕಾರ್ಯಾಚರಣೆಗಳು ಮತ್ತು ವರ್ಧಿತ ಸೇವಾ ವಿತರಣೆಯನ್ನು ಇದು ಸಕ್ರಿಯಗೊಳಿಸುತ್ತದೆ. ಕೇಂದ್ರೀಕೃತ ವ್ಯವಸ್ಥೆಯು ಯಾವುದೇ ಸದಸ್ಯರ ಎಲ್ಲ ಪಿಎಫ್ ಖಾತೆಗಳ ಡಿ-ನಕಲು ಮತ್ತು ವಿಲೀನವನ್ನು ಸುಲಭಗೊಳಿಸುತ್ತದೆ. ಇದು ಕೆಲಸ ಬದಲಾವಣೆಯ ನಂತರ ವರ್ಗಾವಣೆ ಅಗತ್ಯವನ್ನು ತೆಗೆದುಹಾಕುತ್ತದೆ,” ಎಂದು ನಿವೃತ್ತಿ ನಿಧಿ ಸಂಸ್ಥೆಯ ಬಿಡುಗಡೆಯು ಕೇಂದ್ರೀಯ ಮಂಡಳಿ, ಇಪಿಎಫ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದೆ.
ಸಭೆಯಲ್ಲಿ CBT ಅಧ್ಯಕ್ಷರು ‘ಕೊವಿಡ್‌ಗೆ ಪ್ರತಿಕ್ರಿಯೆ – 2.0’ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಕಿರುಪುಸ್ತಕವು ಕೊವಿಡ್ -19 ಸಾಂಕ್ರಾಮಿಕದ ಕಷ್ಟದ ಸಮಯದಲ್ಲಿ ಅದರ ಮಧ್ಯಸ್ಥಗಾರರಿಗೆ ಅಡೆತಡೆಯಿಲ್ಲದ ಸೇವೆಗಳನ್ನು ಆವಿಷ್ಕರಿಸಲು ಮತ್ತು ನೀಡಲು ಇಪಿಎಫ್‌ಒ ಹೇಗೆ ಸಂಸಿದ್ಧಗೊಂಡಿದೆ ಎಂಬುದನ್ನು ವಿವರಿಸುವ ಪ್ರಯತ್ನವಾಗಿದೆ. ಕಿರುಪುಸ್ತಕವು ಸರಣಿಯಲ್ಲಿ ಎರಡನೆಯದು. ಮೊದಲ ಆವೃತ್ತಿಯನ್ನು 2021ರ ಮಾರ್ಚ್ನಲ್ಲಿ ಶ್ರೀನಗರದಲ್ಲಿ ನಡೆದ 228ನೇ CBT ಸಭೆಯಲ್ಲಿ ಬಿಡುಗಡೆ ಮಾಡಲಾಯಿತು.
‘ನಿರ್ಬದ್: ತಡೆರಹಿತ ಸೇವಾ ವಿತರಣೆ’ ಎಂಬ ಶೀರ್ಷಿಕೆಯ ಮತ್ತೊಂದು ಕಿರುಪುಸ್ತಕ. ಈ ಕಿರುಪುಸ್ತಕವು ಕಳೆದ ಮೂರು ವರ್ಷಗಳಲ್ಲಿ ‘ಇಪಿಎಫ್ಒನಿಂದ e-ಇಪಿಎಫ್‌ಒ’ಗೆ ಯಶಸ್ವಿ ಡಿಜಿಟಲ್ ರೂಪಾಂತರದ ಕಡೆಗೆ ಇಪಿಎಫ್‌ಒ ಅಳವಡಿಸಿಕೊಂಡ ಉಪಕ್ರಮಗಳು ಮತ್ತು ಕಾರ್ಯತಂತ್ರಗಳ ಸಂಕಲನವಾಗಿದೆ. ಈ ಪ್ರಯತ್ನಗಳು ಇಪಿಎಫ್‌ಒಗೆ ಡಿಜಿಟಲ್ ಸಂವಹನ ಮಾಡುವ ಪೇಪರ್‌ಲೆಸ್ ಸಂಸ್ಥೆ ಆಗುತ್ತ ಸಾಗಲು ಅನುವು ಮಾಡಿಕೊಟ್ಟಿದೆ. ಆ ಮೂಲಕ ಅದರ ಎಲ್ಲ ಪಾಲುದಾರರಿಗೆ ಜೀವನವನ್ನು ಸುಲಭಗೊಳಿಸುತ್ತದೆ.
ಇದನ್ನೂ ಓದಿ: EPFO: ಇಪಿಎಫ್ಒದಿಂದ ಎಕ್ಸ್ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ