ಕನಕಪುರ, ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದ ಕಾಡಾನೆ: ವಿಡಿಯೋ ವೈರಲ್
ಇತ್ತೀಚೆಗೆ ರಾಮನಗರದಲ್ಲಿ ರೈತರ ಜಮೀನುಗಳಿಗೆ ಕಾಡಾನಗೆಳು ಲಗ್ಗೆ ಇಡುತ್ತಿರು ಪ್ರಕರಣಗಳು ಹೆಚ್ಚಾಗಿವೆ. ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ರೈತರು ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ, ಕಾಡಾನೆಯೊಂದು ರಸ್ತೆ ದಾಟುತ್ತಾ ಏಕಾಏಕಿ ಕಾರಿಗೆ ಅಡ್ಡಬಂದು ಎದುರುಬದುರಾದ ಘಟನೆ ನಡೆದಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ.
ರಾಮನಗರ, ಜುಲೈ 22: ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕಾಡಿನಿಂದ ನಾಡಿಗೆ ಬಂದ ಗಜರಾಜ, ರಸ್ತೆಯಲ್ಲಿ ಬರುತ್ತಿದ್ದ ಕಾರಿಗೆ ಏಕಾಏಕಿ ಅಡ್ಡಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೊಳಗೊಂಡನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಭಯಾನಕ ಕ್ಷಣದ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
Published on: Jul 22, 2025 08:54 AM
Latest Videos
