AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಾರ್ 2’ ಚಿತ್ರದ ಟ್ರೇಲರ್ ಬಗ್ಗೆ ದೊಡ್ಡ ಮಾಹಿತಿ ನೀಡಿದ ತಂಡ; ತಪ್ಪು ಈಗಲಾದರೂ ಸರಿ ಆಗುತ್ತಾ?

Hritik Roshan-Jr NTR: ಹೃತಿಕ್ ರೋಷನ್ ಮತ್ತು ಜೂ ಎನ್​ಟಿಆರ್ ನಟಿಸಿರುವ ಹಿಂದಿ ಸಿನಿಮಾ ‘ವಾರ್ 2’ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದು. ಇದು ಜೂ ಎನ್​ಟಿಆರ್ ಅವರ ಮೊದಲ ಹಿಂದಿ ಸಿನಿಮಾ ಆಗಿರಲಿದೆ. ಸಿನಿಮಾ ಆಗಸ್ಟ್ 15ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಜುಲೈ 25 ರಂದು ತೆರೆಗೆ ಬರಲಿದೆ. ಸಿನಿಮಾದ ಟೀಸರ್​ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟ್ರೈಲರ್ ಹೇಗಿರಲಿದೆ ಕಾದು ನೋಡಬೇಕಿದೆ.

‘ವಾರ್ 2’ ಚಿತ್ರದ ಟ್ರೇಲರ್ ಬಗ್ಗೆ ದೊಡ್ಡ ಮಾಹಿತಿ ನೀಡಿದ ತಂಡ; ತಪ್ಪು ಈಗಲಾದರೂ ಸರಿ ಆಗುತ್ತಾ?
War 2
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 23, 2025 | 7:45 AM

Share

ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್ ಭಾಗವಾದ ‘ವಾರ್ 2’ (War 2) ಸಿನಿಮಾ ಆಗಸ್ಟ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಅವರು ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಈ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಲಾಗುತ್ತಿದೆ. ಟ್ರೇಲರ್ ಲಾಂಚ್ ಸಿನಿಮಾದ ಒಂದು ಭಾಗವಾಗಿದೆ.

ಈ ಸಿನಿಮಾದಲ್ಲಿ ಒಂದು ವಿಶೇಷತೆ ಇದೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಚಿತ್ರರಂಗಕ್ಕೆ ಬಂದು 25 ವರ್ಷಗಳು ಕಳೆದಿದ್ದು, ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಜುಲೈ 25ರಂದು ಟ್ರೇಲರ್ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ತಂಡದವರು ನೀಡಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ಈ ಮೊದಲು ರಿಲೀಸ್ ಆದ ‘ವಾರ್ 2’ ಚಿತ್ರದ ಟೀಸರ್​ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಗೊತ್ತೇ ಇದೆ. ಈ ಟೀಸರ್ ರಿಲೀಸ್ ಆಗಿದ್ದು ಜೂನಿಯರ್ ಎನ್​ಟಿಆರ್ ಬರ್ತ್​ಡೇ ದಿನವಾಗಿತ್ತು. ಆದರೆ, ಚಿತ್ರತಂಡದವರು ಹೈಲೈಟ್ ಮಾಡಿದ್ದು ಹೃತಿಕ್ ರೋಷನ್ ಅವರನ್ನು. ಇದು ಜೂ.ಎನ್​ಟಿಆರ್ ಫ್ಯಾನ್ಸ್ ಬೇಸರಕ್ಕೆ ಕಾರಣ ಆಯಿತು. ಈಗ ಟ್ರೇಲರ್​ನಲ್ಲಿ ಆ ತಪ್ಪು ಸರಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.  ಈ ಚಿತ್ರದಲ್ಲಿ ಹೃತಿಕ್ ಅವರು ಕಬೀರ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರು ಈ ಮೊದಲು ವಾರ್ ಸಿನಿಮಾದಲ್ಲೂ ನಟಿಸಿದ್ದರು.

ಇದನ್ನೂ ಓದಿ:‘ವಾರ್ 2’ ಜೂ ಎನ್​ಟಿಆರ್​ಗೆ ನೋ ಹೇಳಿತಾ ಯಶ್ ರಾಜ್ ಫಿಲಮ್ಸ್

ಯಶ್ ರಾಜ್ ಫಿಲ್ಮ್ಸ್ ತಮ್ಮದೇ ಸ್ಪೈ ಯೂನಿವರ್ಸ್ ಮಾಡಿದ್ದಾರೆ. ಈ ಮೊದಲು ಬೇರೆ ಬೇರೆ ಸಿನಿಮಾಗಳಲ್ಲಿ ಬೇರೆ ಬೇರೆ ಹೀರೋಗಳು ಬಂದು ಅತಿಥಿ ಪಾತ್ರ ಮಾಡಿ ಹೋಗಿದ್ದರು. ‘ವಾರ್ 2’ ಚಿತ್ರದಲ್ಲಿ ಆ ರೀತಿ ಇರೋದಿಲ್ಲ ಎಂದು ತಂಡದವರು ಹೇಳಿದ್ದಾರೆ.

ಈ ಬಾರಿ ‘ವಾರ್ 2’ ಸಿನಿಮಾ ಬಗ್ಗೆ ನಿರ್ಮಾಪಕರಿಗೂ ದಕ್ಷಿಣದವರಿಗೂ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಜೂನಿಯರ್ ಎನ್​ಟಿಆರ್​. ಇದೇ ಮೊದಲ ಬಾರಿಗೆ ಸ್ಪೈ ಯೂನಿವರ್ಸ್​ನಲ್ಲಿ ದಕ್ಷಿಣದ ಹೀರೋ ಒಬ್ಬರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದು ಜೂನಿಯರ್ ಎನ್​ಟಿಆರ್ ಅವರ ಮೊದಲ ಹಿಂದಿ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Tue, 22 July 25

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರೈಬಾಕಿನಾಗೆ ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಕಿರೀಟ
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ