‘ಶಿಲ್ಪಾ ಶಿರೋಡ್ಕರ್ನ ಶೂಟೌಟ್ ಮಾಡಲಾಗಿದೆ’; ಪೇಪರ್ನಲ್ಲಿ ಹೀಗೆ ವರದಿ ಆದಾಗ
ಶಿಲ್ಪಾ ಶಿರೋಡ್ಕರ್, 90ರ ದಶಕದ ಜನಪ್ರಿಯ ಬಾಲಿವುಡ್ ನಟಿ. ಅವರು ಮದುವೆಯಾದ ನಂತರ ಚಿತ್ರರಂಗವನ್ನು ತೊರೆದು ವಿದೇಶಕ್ಕೆ ತೆರಳಿದರು. ಅಲ್ಲಿ ಅವರು ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಾವಿನ ಬಗ್ಗೆ ಈ ಮೊದಲು ಚರ್ಚೆ ಆಗಿತ್ತು. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಅನೇಕ ಬಾಲಿವುಡ್ ನಟಿಯರು ಮದುವೆಯಾದ ನಂತರ ಚಿತ್ರರಂಗವನ್ನು ತೊರೆದು ವಿದೇಶದಲ್ಲಿ ನೆಲೆಸುವುದನ್ನು ನೋಡಿರುತ್ತೀರಿ. ಅಂತಹ ಪ್ರಸಿದ್ಧ ಬಾಲಿವುಡ್ (Bollywood) ನಟಿಯೊಬ್ಬರು ಮದುವೆಯ ನಂತರ ಚಿತ್ರರಂಗವನ್ನು ತೊರೆದು ತಮ್ಮ ಪತಿಯೊಂದಿಗೆ ವಿದೇಶದಲ್ಲಿ ನೆಲೆಸಿದ್ದರು. ಇದು ಮಾತ್ರವಲ್ಲದೆ, ಅವರು ವಿದೇಶದಲ್ಲಿ ಸಲೂನ್‌ನಲ್ಲಿಯೂ ಕೆಲಸ ಮಾಡುತ್ತಿದ್ದರು. ಅವರ ಸಾವಿನ ಬಗ್ಗೆ ಈ ಮೊದಲು ಚರ್ಚೆ ಆಗಿತ್ತು. ಅವರು ಬೇರಾರೂ ಅಲ್ಲ ಶಿಲ್ಪಾ ಶಿರೋಡ್ಕರ್.
ಶಿಲ್ಪಾ ಶಿರೋಡ್ಕರ್ 90ರ ದಶಕದಲ್ಲಿ ಬಹಳ ಜನಪ್ರಿಯರಾಗಿದ್ದರು. ಅವರ ಸಹೋದರಿ ನಮ್ರತಾ ಶಿರೋಡ್ಕರ್ (ಮಹೇಶ್ ಬಾಬು ಪತ್ನಿ) ಅವರಂತೆಯೇ, ಶಿಲ್ಪಾ ಕೂಡ ಚಲನಚಿತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಬಗ್ಗೆ ಯೋಚಿಸಿ ಬಾಲಿವುಡ್‌ಗೆ ಪ್ರವೇಶಿಸಿದರು. ಅವರು 1989ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಆದರೆ 2000 ರಲ್ಲಿ, ಅವರು ವಿವಾಹವಾದರು ಮತ್ತು ತಮ್ಮ ಪತಿಯೊಂದಿಗೆ ವಿದೇಶಕ್ಕೆ ತೆರಳಿದರು. ಚಲನಚಿತ್ರಗಳಿಂದ ದೂರ ಸರಿದರು. ಶಿಲ್ಪಾ ಶಿರೋಡ್ಕರ್ ಬ್ಯಾಂಕರ್ ಆಪರೇಶ್ ರಂಜಿತ್ ಅವರನ್ನು ವಿವಾಹವಾದರು.
ಸಾವಿನ ಸುದ್ದಿ ಹರಡಿತ್ತು.
ಸಿನಿಮಾ ಪ್ರಚಾರಕ್ಕೆ ಜಾಹೀರಾತು ನೀಡಲಾಗಿತ್ತು. ಅದರಲ್ಲಿ ಶಿಲ್ಪಾ ಶೂಟೌಟ್ ಎಂದು ಬರೆಯಲಾಗಿತ್ತು. ‘ನಾನು ಕುಲು ಮನಾಲಿಯಲ್ಲಿ ಶೂಟಿಂಗ್ನಲ್ಲಿ ಇದ್ದೆ. ಆ ಸಮಯದಲ್ಲಿ ನಮ್ಮ ಬಳಿ ಮೊಬೈಲ್ ಫೋನ್ ಇರಲಿಲ್ಲವಾದ್ದರಿಂದ ನನ್ನ ತಂದೆ ಹೋಟೆಲ್‌ಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದರು. ನಾನು ಅಲ್ಲಿ ಸುನೀಲ್ ಶೆಟ್ಟಿ ಜೊತೆ ಶೂಟಿಂಗ್ ಮಾಡುತ್ತಿದ್ದೆ. ಅಲ್ಲಿ ಶೂಟಿಂಗ್ ನೋಡುತ್ತಿದ್ದ ಎಲ್ಲರಿಗೂ ಸುದ್ದಿ ತಿಳಿದಿದ್ದರಿಂದ ಇದು ಶಿಲ್ಪಾ ಅಥವಾ ಬೇರೆ ಯಾರಾದರೂ ಎಂದು ಯೋಚಿಸುತ್ತಿದ್ದರು’ ಎಂದಿದ್ದಾರೆ ಶಿಲ್ಪಾ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿಗೆ ಮಲಯಾಳಂ ಸಿನಿಮಾನಲ್ಲಿ ನಟಿಸಲು ಭಯವಂತೆ, ಏಕೆ?
‘ನಾನು ರೂಂಗೆ ಹಿಂತಿರುಗಿದಾಗ, ಸುಮಾರು 20-25 ಮಿಸ್ಡ್ ಕಾಲ್‌ಗಳು ಬಂದವು. ನನ್ನ ಪೋಷಕರು ಚಿಂತಿತರಾಗಿದ್ದರು, ಶಿಲ್ಪಾ ಶಿರೋಡ್ಕರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪತ್ರಿಕೆಯಲ್ಲಿ ಒಂದು ಶೀರ್ಷಿಕೆ ಇತ್ತು’ ಎಂದಿದ್ದಾರೆ ಅವರು. ಆ ಬಳಿಕ ಅದು ಸಿನಿಮಾ ಪ್ರಚಾರ ಎಂದು ತಿಳಿದು ಎಲ್ಲರೂ ನಿಟ್ಟುಸಿರು ಬಿಟ್ಟರು. ಶಿಲ್ಪಾ ಅವರು ಇತ್ತೀಚೆಗೆ ಹಿಂದಿ ಬಿಗ್ ಬಾಸ್ನಲ್ಲೂ ಕಾಣಿಸಿಕೊಂಡಿದ್ದರು. ಆದರೆ, ಅವರಿಗೆ ಗೆಲುವು ಸಿಗಲೇ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







