‘ವಾರ್ 2’ ಜೂ ಎನ್ಟಿಆರ್ಗೆ ನೋ ಹೇಳಿತಾ ಯಶ್ ರಾಜ್ ಫಿಲಮ್ಸ್
Jr NTR-Hritik Roshan: ಜೂ ಎನ್ಟಿಆರ್ ನಟನೆಯ ಮೊದಲ ಬಾಲಿವುಡ್ ಸಿನಿಮಾ ‘ವಾರ್ 2’ ಆಗಸ್ಟ್ 14 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಗರಿಗೆದರಿವೆ. ಸಿನಿಮಾ ಅನ್ನು ಸ್ವತಃ ಜೂ ಎನ್ಟಿಆರ್ ತೆಲುಗು ರಾಜ್ಯಗಳಲ್ಲಿ ವಿತರಣೆ ಮಾಡಲು ಬಯಸಿದ್ದರು. ಆದರೆ ಸಿನಿಮಾದ ನಿರ್ಮಾಣ ಸಂಸ್ಥೆ ವೈಆರ್ಎಫ್ ಜೂ ಎನ್ಟಿಆರ್ಗೆ ನೋ ಹೇಳಿದೆ.

ಜೂ ಎನ್ಟಿಆರ್ (Jr NTR) ಮೊದಲ ಬಾರಿಗೆ ನಟಿಸಿರುವ ಬಾಲಿವುಡ್ ಸಿನಿಮಾ ‘ವಾರ್ 2’ ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ. ಜೂ ಎನ್ಟಿಆರ್ ಮತ್ತು ಹೃತಿಕ್ ರೋಷನ್ ಒಟ್ಟಿಗೆ ಈ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಅನ್ನು ಬಾಲಿವುಡ್ನ ಟಾಪ್ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲಮ್ಸ್ ನಿರ್ಮಾಣ ಮಾಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಸದ್ಯಕ್ಕೆ ಚಾಲ್ತಿಯಲ್ಲಿದೆ. ಇದೀಗ ಯಶ್ ರಾಜ್ ಫಿಲಮ್ಸ್ ತಮ್ಮದೇ ಸಿನಿಮಾದ ನಾಯಕ ಜೂ ಎನ್ಟಿಆರ್ಗೆ ನೋ ಹೇಳಿದೆ.
‘ವಾರ್ 2’ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಹಿಂದಿಯ ಜೊತೆಗೆ ತೆಲುಗಿನಲ್ಲಿಯೂ ನಟರೇ ಡಬ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಹಿಂದಿ ಮತ್ತು ತೆಲುಗು ಆವೃತ್ತಿಯ ಬಿಡುಗಡೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನಿರ್ಮಾಣ ಸಂಸ್ಥೆ ನೀಡಿದೆ. ಜೂ ಎನ್ಟಿಆರ್ಗೆ ತೆಲುಗು ರಾಜ್ಯದಲ್ಲಿ ಭಾರಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇರುವ ಕಾರಣಕ್ಕೆ ತೆಲುಗು ಆವೃತ್ತಿಯ ಬಗ್ಗೆ ಸಹಜವಾಗಿ ವಿಶೇಷ ಕಾಳಜಿಯನ್ನು ತೋರಿದೆ. ತೆಲುಗು ರಾಜ್ಯಗಳಲ್ಲಿ ಪ್ರಚಾರಕ್ಕೂ ವಿಶೇಷ ಯೋಜನೆಯನ್ನು ನಿರ್ಮಾಣ ಸಂಸ್ಥೆ ಹಾಕಿಕೊಂಡಿದೆ.
ಜೂ ಎನ್ಟಿಆರ್ ಅವರು, ‘ವಾರ್ 2’ ಸಿನಿಮಾದ ತೆಲುಗು ಆವೃತ್ತಿಗಳನ್ನು ತಮ್ಮ ಸಹೋದರನ ನಿರ್ಮಾಣ ಸಂಸ್ಥೆಯ ವತಿಯಿಂದ ವಿತರಣೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ತೆಲುಗು ರಾಜ್ಯಗಳಲ್ಲಿ ಮಾತ್ರ ‘ವಾರ್ 2’ ಸಿನಿಮಾವನ್ನು ತಾವು ವಿತರಣೆ ಮಾಡುವ ಅಥವಾ ತಮ್ಮ ಆಪ್ತರಿಂದ ವಿತರಣೆ ಮಾಡಿಸುವ ಉದ್ದೇಶ ಹೊಂದಿದ್ದರು. ಆದರೆ ಜೂ ಎನ್ಟಿಆರ್ಗೆ ನೋ ಹೇಳಿರುವ ಯಶ್ ರಾಜ್ ಫಿಲಮ್ಸ್. ತೆಲುಗು ರಾಜ್ಯಗಳು ಮಾತ್ರವೇ ಅಲ್ಲದೆ ಇಡೀ ದಕ್ಷಿಣ ಭಾರತದಲ್ಲಿ ಸ್ವತಃ ವಿತರಣೆ ಮಾಡಲು ಮುಂದಾಗಿದೆ.
ಇದನ್ನೂ ಓದಿ:ಜೂ ಎನ್ಟಿಆರ್ ದೇಹತೂಕ ಇಳಿಸಿಕೊಳ್ಳಲು ಕಾರಣ ಯಾರು?
‘ವಾರ್ 2’ ಜೂ ಎನ್ಟಿಆರ್ ನಟಿಸಿರುವ ಮೊದಲ ಬಾಲಿವುಡ್ ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಹಾಡೊಂದರ ಚಿತ್ರೀಕರಣ ಬಾಕಿ ಇದ್ದು, ಹೃತಿಕ್ ರೋಷನ್ ಕಾಲು ಗಾಯ ಮಾಡಿಕೊಂಡಿರುವ ಕಾರಣದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. ಸಿನಿಮಾ ಅನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಜೂ ಎನ್ಟಿಆರ್ ಆಂಟಿಹೀರೋ ಆಗಿ ನಟಿಸಿದ್ದಾರೆ. ಹೃತಿಕ್ ಮತ್ತು ಜೂ ಎನ್ಟಿಆರ್ ನಡುವೆ ಅದ್ಧೂರಿ ಫೈಟ್ ಮತ್ತು ಡ್ಯಾನ್ಸ್ ದೃಶ್ಯಗಳು ಇವೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




