ವಿಧಾನ ಪರಿಷತ್ ಚುನಾವಣೆ: ಕರ್ನಾಟಕದಲ್ಲಿ ಶಾಂತಿಯುತ ಮತದಾನ

ಕೆಲವೆಡೆ ಮತದಾನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾದ ಘಟನೆಗಳು ನಡೆದಿದ್ದರೂ ಶಾಂತಿಯುತ ಮತದಾನಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಕ್ಷೇತ್ರವಾರು ಶೇಕಡಾ ಮತದಾನದ ವಿವರ ಇಲ್ಲಿದೆ.

ವಿಧಾನ ಪರಿಷತ್ ಚುನಾವಣೆ: ಕರ್ನಾಟಕದಲ್ಲಿ ಶಾಂತಿಯುತ ಮತದಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Dec 10, 2021 | 9:47 PM

ಬೆಂಗಳೂರು: ಕರ್ನಾಟಕದಲ್ಲಿನ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಇತರೆ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಹುತೇಕ ಕಡೆಗಳಲ್ಲಿ ಶೇಕಡಾ 90ಕ್ಕೂ ಅಧಿಕ ಪ್ರಮಾಣದಲ್ಲಿ ಮತದಾನ ನಡೆದಿದೆ. ಕೆಲವೆಡೆ ಮತದಾನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾದ ಘಟನೆಗಳು ನಡೆದಿದ್ದರೂ ಶಾಂತಿಯುತ ಮತದಾನಕ್ಕೆ ಕರ್ನಾಟಕ ಸಾಕ್ಷಿಯಾಗಿದೆ. ಕ್ಷೇತ್ರವಾರು ಶೇಕಡಾ ಮತದಾನದ ವಿವರ ಇಲ್ಲಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಶೇ.99.91ರಷ್ಟು ಮತದಾನ ನಡೆದಿದೆ. ಒಟ್ಟು 3923 ಮತದಾರರಲ್ಲಿ 1868 ಪುರುಷ ಮತ್ತು 2055 ಮಹಿಳಾ ಮತದಾರರ ಪೈಕಿ, 1865 ಪುರುಷ ಮತ್ತು 2044 ಮಹಿಳಾ ಮತದಾರರು ಸೇರಿದಂತೆ ಒಟ್ಟು 3918 ಮಂದಿ ಮತಚಲಾಯಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನಲ್ಲಿ 582 ಮತದಾರರ ಪೈಕಿ 579 ಮತದಾರರು, ದೇವನಹಳ್ಳಿ ತಾಲ್ಲೂಕಿನಲ್ಲಿ 396 ಮತದಾರರ ಪೈಕಿ 396, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 515 ಮತದಾರರ ಪೈಕಿ 515, ನೆಲಮಂಗಲ ತಾಲ್ಲೂಕಿನಲ್ಲಿ 371ಮತದಾರರ ಪೈಕಿ 371, ಮಾಗಡಿ ತಾಲ್ಲೂಕಿನಲ್ಲಿ 479 ಮತದಾರರ ಪೈಕಿ 479, ರಾಮನಗರ ತಾಲ್ಲೂಕಿನಲ್ಲಿ 390 ಮತದಾರರ ಪೈಕಿ 390, ಕನಕಪುರ ತಾಲ್ಲೂಕಿನಲ್ಲಿ 677 ಮತದಾರರ ಪೈಕಿ 675 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 513 ಮತದಾರರ ಪೈಕಿ 513 ಮತದಾರರು ಮತಚಲಾಯಿಸಿದ್ದಾರೆ.

ಹೊಸಕೋಟೆ ತಾಲ್ಲೂಕಿನಲ್ಲಿ ಶೇಕಡಾ 99.48, ದೇವನಹಳ್ಳಿ ತಾಲ್ಲೂಕಿನಲ್ಲಿ ಶೇಕಡಾ 100, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಶೇಕಡಾ 100, ನೆಲಮಂಗಲ ತಾಲ್ಲೂಕಿನಲ್ಲಿ ಶೇಕಡಾ 100, ಮಾಗಡಿ ತಾಲ್ಲೂಕಿನಲ್ಲಿ ಶೇಕಡಾ 100, ರಾಮನಗರ ತಾಲ್ಲೂಕಿನಲ್ಲಿ ಶೇಕಡಾ 100, ಕನಕಪುರ ತಾಲ್ಲೂಕಿನಲ್ಲಿ ಶೇಕಡಾ 99.85 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಶೇಕಡಾ 100 ರಷ್ಟು ಮತದಾನ ನಡೆದಿದೆ.

ವಿಧಾನಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 99.96ರಷ್ಟು ಮತದಾನ ನಡೆದಿದೆ. ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಆಗಿದೆ. ಹಾಸನ ಜಿಲ್ಲೆಯಲ್ಲಿ ಒಟ್ಟು ಶೇಕಡಾ 99.77 ರಷ್ಟು ಮತದಾನ ನಡೆದಿದೆ. ಇಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದಿದ್ದ ಚುನಾವಣೆ ಮುಕ್ತಾಯವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಂಜೆ 4ಗಂಟೆ ವರೆಗೂ ಶೇಕಡಾ 99.97 ರಷ್ಟು ಮತದಾನ ಆಗಿದೆ. ವಿಧಾನ ಪರಿಷತ್ ಧಾರವಾಡ ಕ್ಷೇತ್ರಕ್ಕೆ ಚುನಾವಣೆ ನಡೆದಿದೆ. ಅಂತಿಮ ಮತದಾನ ವಿವರದಂತೆ, ಧಾರವಾಡ ಜಿಲ್ಲೆ ಶೇಕಡಾ 99.31, ಹಾವೇರಿ‌ ಜಿಲ್ಲೆ ಶೇಕಡಾ 99.85, ಗದಗ ಜಿಲ್ಲೆ ಶೇಕಡಾ 99.59, ಒಟ್ಟು ಶೇಕಡಾ 99.63 ರಷ್ಟು ಮತದಾನ ಆಗಿದೆ. ಎರಡು ಸ್ಥಾನಗಳಿಗೆ ಇಲ್ಲಿ ಮತದಾನ ನಡೆದಿತ್ತು.

ಕೊಡಗು ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣಾ ಮತದಾನ ಅಂತ್ಯಗೊಂಡಿದೆ. ಜಿಲ್ಲೆಯಲ್ಲಿ ಶೇಕಡಾ 99.70 ರಷ್ಟು ಮತದಾನ ಆಗಿದೆ. 687 ಮಹಿಳಾ ಮತದಾರರು, 638 ಪುರುಷ ಮತದಾರರಿಂದ ಮತ ಚಲಾವಣೆ ಮಾಡಿದ್ದಾರೆ. ಒಟ್ಟು 1325 ಮತದಾರರಿಂದ ಹಕ್ಕು ಚಲಾವಣೆ ಮಾಡಲಾಗಿದೆ. ಮಂಡ್ಯ ಪರಿಷತ್ ಚುನಾವಣೆ ನಡೆದಿದೆ. ಅದರಂತೆ, ಒಟ್ಟು ಮತದಾರರು 4032 ಆಗಿದ್ದಾರೆ. 4018 ಮತ ಚಲಾವಣೆ ಆಗಿದೆ. ಅದರಂತೆ ಶೇಕಡಾ 99.85 ಮತದಾನ ನಡೆದಿದೆ.

ಕಲಬುರಗಿ ಯಾದಗಿರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಟ್ಟು ಶೇಕಡಾ 99.75 ಮತದಾನ ಆಗಿದೆ. ಒಟ್ಟು ಮತದಾರರು 7088 ಇದ್ದರು. ಈ ಪೈಕಿ, 7070 ಮಂದಿ ಮತ ಚಲಾಯಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 99.71 ರಷ್ಟು ಮತದಾನ ಆಗಿದೆ. ವಿಧಾನ ಪರಿಷತ್ ಚುನಾವಣೆ ಹಿನ್ನಲೆ ಬಳ್ಳಾರಿ ಜಿಲ್ಲೆಯಲ್ಲಿ ಮತದಾನ ಮುಕ್ತಾಯ ಆಗಿದೆ. ಜಿಲ್ಲೆಯಲ್ಲಿ ಶೇಕಡಾ 99.81ರಷ್ಟು ಮತದಾನ ಆಗಿದೆ. 4664 ಮತದಾರರ ಪೈಕಿ 4654 ಮತ ಚಲಾವಣೆ‌ ಮಾಡಲಾಗಿದೆ. 09 ಜನ ಗೈರಾಗಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ ಫೋಟೋ ವೈರಲ್, ಗೌಪ್ಯ ಮತದಾನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರ ಆಕ್ರೋಶ

ಇದನ್ನೂ ಓದಿ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ನಾನೇ ಸಿಎಂ ಆಗುವೆ: ಶಾಮನೂರು ಶಿವಶಂಕರಪ್ಪ

Published On - 6:36 pm, Fri, 10 December 21