Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 4,452 ಜನರಿಗೆ ಕೊರೊನಾ ದೃಢ; 51 ಮಂದಿ ಸಾವು

| Updated By: ganapathi bhat

Updated on: Feb 08, 2022 | 8:07 PM

ಬೆಂಗಳೂರಿನಲ್ಲಿ ಇಂದು ಒಂದೇ ದಿನ 2,139 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 17,62,315 ಕ್ಕೆ ಏರಿಕೆಯಾಗಿದೆ. 17,62,315 ಸೋಂಕಿತರ ಪೈಕಿ 17,16,457 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 4,452 ಜನರಿಗೆ ಕೊರೊನಾ ದೃಢ; 51 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಫೆಬ್ರವರಿ 8) ಹೊಸದಾಗಿ 4,452 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 39,06,761 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 37,94,866 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 51 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 39,447 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 72,414 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 2,139 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 17,62,315 ಕ್ಕೆ ಏರಿಕೆಯಾಗಿದೆ. 17,62,315 ಸೋಂಕಿತರ ಪೈಕಿ 17,16,457 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 17 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,708 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 29,149 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ

ಬಾಗಲಕೋಟೆ 28, ಬಳ್ಳಾರಿ 64, ಬೆಳಗಾವಿ 352, ಬೆಂಗಳೂರು ಗ್ರಾಮಾಂತರ 20, ಬೆಂಗಳೂರು ನಗರ 2,139, ಬೀದರ್ 25, ಚಾಮರಾಜನಗರ 75, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 50, ಚಿತ್ರದುರ್ಗ 89, ದಕ್ಷಿಣ ಕನ್ನಡ 146, ದಾವಣಗೆರೆ 20, ಧಾರವಾಡ 102, ಗದಗ 22, ಹಾಸನ 103, ಹಾವೇರಿ 36, ಕಲಬುರಗಿ 73, ಕೊಡಗು 81, ಕೋಲಾರ 33, ಕೊಪ್ಪಳ 99, ಮಂಡ್ಯ 45, ಮೈಸೂರು 222, ರಾಯಚೂರು 28, ರಾಮನಗರ 30, ಶಿವಮೊಗ್ಗ 122, ತುಮಕೂರು 221, ಉಡುಪಿ 64, ಉತ್ತರ ಕನ್ನಡ 49, ವಿಜಯಪುರ 53, ಯಾದಗಿರಿ ಜಿಲ್ಲೆಯಲ್ಲಿ 17 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 17 ಮಂದಿ ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7, ಕೋಲಾರ, ತುಮಕೂರು ಜಿಲ್ಲೆಯಲ್ಲಿ 4, ಬಳ್ಳಾರಿ, ಮೈಸೂರು ಜಿಲ್ಲೆಯಲ್ಲಿ 3, ಚಿತ್ರದುರ್ಗ, ಧಾರವಾಡ, ಉಡುಪಿ ಜಿಲ್ಲೆಯಲ್ಲಿ 2, ಬಾಗಲಕೋಟೆ, ಚಿಕ್ಕಮಗಳೂರು, ಗದಗ, ಹಾಸನ, ಕೊಪ್ಪಳ, ಮಂಡ್ಯ ಹಾಗೂ ರಾಮನಗರ ಜಿಲ್ಲೆಯಲ್ಲಿ 1 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಭಾರತೀಯ ವಿಜ್ಞಾನಿಗಳಿಂದ ಕೊರೊನಾ ತಡೆಗೆ ತಾಮ್ರ ಆಧಾರಿತ ಆ್ಯಂಟಿವೈರಲ್​ ಫೇಸ್​ ಮಾಸ್ಕ್ ಅಭಿವೃದ್ಧಿ

ಇದನ್ನೂ ಓದಿ: ಕೊವಿಡ್  ಎರಡನೇ ಅಲೆ ಸಮಯದಲ್ಲಿ ಗಂಗಾ ನದಿಯಲ್ಲಿ  ಎಸೆಯಲಾದ ಮೃತದೇಹಗಳ ಕುರಿತು ಮಾಹಿತಿ ಲಭ್ಯವಿಲ್ಲ: ಕೇಂದ್ರ