ಬೆಂಗಳೂರು, ಮೇ.25: ಸಿಲಿಕಾನ್ ಸಿಟಿ ಬೆಂಗಳೂರಿ(Bengaluru)ನಲ್ಲಿ 20 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ಗೋಲ್‌ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ನಗರದ 8ನೇ ಮೈಲಿ ಬಳಿಯ ನೆಲಗದರನಹಳ್ಳಿಯಲ್ಲಿ ನಡೆಯುತ್ತಿರುವ
ರಸ್ತೆ ಕಾಮಗಾರಿ ಮತ್ತು ಮಳೆ ನೀರು ಕಾಲುವೆ ಕಾಮಗಾರಿ(Work)ಯಲ್ಲಿ ಅವ್ಯವಹಾರ ನಡೆದಿದೆ. ಕಾಂಕ್ರೀಟ್ ಬದಲು ಇಟ್ಟಿಗೆಯಲ್ಲಿ ಮಳೆ ನೀರು ಕಾಲುವೆ ನಿರ್ಮಾಣ ಮಾಡಲಾಗಿದೆ.
ಟೆಂಡರ್ ಪಡೆದಿರುವವನು ಒಬ್ಬ, ಆದರೆ, ಕಾಮಗಾರಿ ಮಾಡುತ್ತಿರುವವ ಮತ್ತೊಬ್ಬ. ಹೌದು, ಮಂಗಳೂರಿನ ಜೆ.ಎಂ.ಕನ್ಸ್ಟ್ರಕ್ಷನ್ ಕಂಪನಿಯಿಂದ ಕಳಪೆ ಕಾಮಗಾರಿ ನಡೆದಿದೆ. ಆದರೂ ಈ ಬಗ್ಗೆ ಬಿಬಿಎಂಪಿ ಇಂಜಿನಿಯರ್‌ಗಳು ಕ್ರಮ ಕೈಗೊಳ್ಳದೆ, ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನಲೆ ಕಾಮಗಾರಿಗೆ ಬಳಸಿದ್ದ ಸಿಮೆಂಟ್ ಇಟ್ಟಿಗೆಯನ್ನು ಕಿತ್ತೆಸೆದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಟೆಂಡರ್ ಪಡೆದಿದ್ದು ಒಬ್ಬನು, ಕಾಮಗಾರಿ ಮಾಡ್ತಿರುವುದು ಮತ್ತೊಬ್ಬ ಎಂದು ಅವೈಜ್ಞಾನಿಕ ಕಾಮಗಾರಿ ವಿರುದ್ದ ಜನ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ:ಕಲುಷಿತ ನೀರು ಕುಡಿದು ಅಸ್ವಸ್ಥರಾಗ್ತಿರುವ ಕೇಸ್ ಹೆಚ್ಚಳ: ಬಿಬಿಎಂಪಿ, ಜಲಮಂಡಳಿಗೆ ಡಿಕೆಶಿ ಖಡಕ್ ಸೂಚನೆ
ಕೊಡಗು: ಕುಶಾಲನಗರ ತಾಲೂಕಿನ ಹೊಸಕೋಟೆ ಗ್ರಾಮದ ಆನೆಕಾಡು ಮೀಸಲು ಅರಣ್ಯ ಸಮೀಪದಲ್ಲಿರುವ ಕಾಫಿತೋಟದಲ್ಲಿ ಕಾಡಾನೆ ಶವ ಪತ್ತೆಯಾಗಿದೆ. ಅಂದಾಜು 20 ವರ್ಷ ಪ್ರಾಯದ ಕಾಡಾನೆ ಇದಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ