ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರೇ ಎಚ್ಚರ.. 5 ವರ್ಷದ ಮಗು ದುರಂತ ಸಾವು

ಇತ್ತೀಚೆಗೆ ಕೆಲ ಅವಘಡಗಳಿಂದ ಮಕ್ಕಳು, ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಲ್ಲೂ ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವ ಪೋಷಕರು ಈ ಸ್ಟೋರಿ ಓದಲೇಬೇಕು. ಸ್ವಲ್ಪ ಯಾಮಾರಿದರೂ ಮಕ್ಕಳನ್ನು ಕಳೆದುಕೊಳ್ಳುವ ಸಂಭವ ಬರುಬಹುದು. ಹೌದು, ಇಂದು ಬೆಂಗಳೂರಿನಲ್ಲಿ 5 ವರ್ಷದ ಮಗುವೊಂದು ದುರಂತ್ಯ ಅಂತ್ಯಗೊಂಡಿದೆ.

ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ  ಹೋಗುವ ಪೋಷಕರೇ ಎಚ್ಚರ.. 5 ವರ್ಷದ ಮಗು ದುರಂತ ಸಾವು
ಬೆಂಗಳೂರಿನಲ್ಲಿ 5 ವರ್ಷದ ಮಗು ದುರಂತ ಸಾವು
Updated By: ಕಿರಣ್ ಹನುಮಂತ್​ ಮಾದಾರ್

Updated on: May 21, 2024 | 4:16 PM

ಬೆಂಗಳೂರು, ಮೇ.21: ಸಂಪ್​ಗೆ ಬಿದ್ದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಬೆಂಗಳೂರಿನ(Bengaluru) ಅಯ್ಯಪ್ಪ ನಗರದ ವಿಶಾಲ್ ಮಾರ್ಟ್​​ ಮುಂಭಾಗದಲ್ಲಿ ನಡೆದಿದೆ. ನೇಪಾಳ ಮೂಲದ ದಂಪತಿಯ ಪುತ್ರ ಸುಬೀನ್​(5) ಮೃತ ಮಗು. ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ನೇಪಾಳ ಮೂಲದ ದಂಪತಿ, ಮಗುವನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಇನ್ನು ಕೆಲಸದಿಂದ‌ ಬಂದು ಮಗು ಕಾಣದೆ ಇದ್ದಾಗ ತಂದೆ-ತಾಯಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗು ಪತ್ತೆಯಾಗಿದೆ. ಕೂಡಲೇ ಕೆಆರ್​ ಪುರಂ ಸರ್ಕಾರಿ‌ ಆಸ್ಪತ್ರೆ ಮಗುವನ್ನ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟರವಳೆಗೆ ಮಗು ಕೊನೆಯುಸಿರೆಳೆದಿತ್ತು. ಈ ಕುರಿತು ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವು

ವಿಜಯಪುರ: ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಅಮಿತ್​ ರಾಠೋಡ್​(12) ಹಾಗೂ ಸುದೀಪ್​ ರಾಠೋಡ್(10) ಮೃತ ಬಾಲಕರು. ಪಟ್ಟಣದ ದೇಶಪಾಂಡೆ ತಾಂಡಾದಲ್ಲಿರುವ ಕೃಷಿಹೊಂಡದಲ್ಲಿ ಇಂದು(ಮೇ.21) ಈಜಲು ತೆರಳಿದ್ದರು. ಈ ವೇಳೆ ಅವಘಡ ಸ.ಭವಿಸಿದೆ. ಈ ಘಟನೆ ಕುರಿತು ಇಂಡಿ ಶಹರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತ ಮಕ್ಕಳನ್ನು ಕಳೆದುಕೊಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಬೆಂಗಳೂರು ಗ್ರಾಮಾಂತರ: ಹಾವು ಕಚ್ಚಿ 7 ವರ್ಷದ ಮಗು ಸಾವು; ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ಲೈನ್​ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಯುವಕ ದುರ್ಮರಣ

ಚಿಕ್ಕಮಗಳೂರು: ತಾಲೂಕಿನ ಗಂಜಲಗೋಡು ಗ್ರಾಮದಲ್ಲಿ ವಿದ್ಯುತ್ ಕೇಬಲ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಗಂಜಲಗೋಡು ಗ್ರಾಮದ ಜೀವಿತ್ (23) ಮೃತ ರ್ದುದೈವಿ. ನಿನ್ನೆ(ಮೇ.20) ಸುರಿದ ಗಾಳಿ ಮಳೆಯಿಂದ ವೈರ್ ನೇತಾಡುತ್ತಿತ್ತು. ಈ ಹಿನ್ನಲೆ ಲೈನ್​ ದುರಸ್ತಿ ಮಾಡುವಾಗ ವಿದ್ಯುತ್​ ಪ್ರವಹಿಸಿ ಈ ಅವಘಡ ನಡೆದಿದೆ. ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ