ಬೆಂಗಳೂರು, ಮೇ.21: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳತನ(Theft) ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಓನರ್ ಮನೆಯ ನಕಲಿ ಕೀ ಮಾಡಿಕೊಂಡು ಬಾಡಿಗೆದಾರನೇ ಕಳ್ಳತನ ಮಾಡಿದ ಘಟನೆ ಬೆಂಗಳೂರಿನ ಮಹಾದೇವಪುರ ಠಾಣಾ ವ್ಯಾಪ್ತಿಯ ನಾರಾಯಣಪುರ(Narayanapura)ದಲ್ಲಿ ನಡೆದಿದೆ. ಹೌದು, ಮನೆಯ ಮಾಲಕಿ ಮೇ.07 ರಂದು ತಮಿಳುನಾಡಿನ ಮಳೈನೂರ್ನ ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಮನೆಯ ನಕಲಿ ಕೀಯನ್ನ ಮಾಡಿಕೊಂಡಿದ್ದ ಬಾಡಿಗೆದಾರ ಸೆಲ್ವರಾಜ್ ಎಂಬಾತ ತನ್ನ ಕೈಚಳಕ ತೋರಿಸಿದ್ದಾನೆ.
ಇನ್ನು ವೃದ್ಧೆ ದೇವಸ್ಥಾನಕ್ಕೆ ಹೋಗಿ ಮೇ.09 ನೇ ತಾರೀಖು ಮನೆಗೆ ಬಂದಿದ್ದರು. ಇದಾದ ಅಂದರೆ ಮೇ.15 ರಂದು ಅಲ್ಮೇರಾ (ಬೀರು) ನೋಡಿದಾಗ ಆಭರಣ ಹಣ ಕಳವಾಗಿತ್ತು. ಗಾಬರಿಗೊಂಡ ಮನೆ ಮಾಲಕಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ತನಿಖೆ ಕೈಗೊಂಡಾಗ ಬಾಡಿಗೆದಾರನೇ ಕೃತ್ಯ ಮಾಡಿರೋದು ಬೆಳಕಿಗೆ ಬಂದಿದೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಡಿಗೆದಾರನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತನಿಂದ 72 ಸಾವಿರ ನಗದು 78 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಕಳ್ಳತನ ಮಾಡೋಕೆ ಖದೀಮನಿಗೂ ತಿಂಗಳ ಸಂಬಳ; ಚೋರ ಗುರು ಸೇರಿ ಮೂವರು ಅರೆಸ್ಟ್
ಬಾಗಲಕೋಟೆ: ಹಾಡಹಗಲೇ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಘಟನೆ ಇಂದು(ಮೇ.21) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇಳಕಲ್ ಪಟ್ಟಣದಲ್ಲಿ ನಡೆದಿದೆ. ವೀರಣ್ಣ ಆರಿ ಎಂಬುವವರು ತಮ್ಮ ಅಂಗಡಿ ಮುಂದೆ ಬೈಕ್ ನಿಲ್ಲಿಸಿದ್ದರು. ಈ ವೇಳೆ ಸೈಲೆಂಟ್ ಆಗಿ ಬಂದ ಬೈಕ್ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆನೇಕಲ್: ತಾಲ್ಲೂಕಿನ ಜಿಗಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿಯಾದ್ರೆ ಎಂಟ್ರಿ ಕೊಡುವ ಬೈಕ್ ಕಳ್ಳರು, ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನ ಕಳ್ಳತನ ಮಾಡುತ್ತಿದ್ದಾರೆ. ಮಾಸ್ತೇನಹಳ್ಳಿ, ಶ್ರೀರಾಮಪುರ ಭಾಗದಲ್ಲಿ ಕಳೆದ ಹದಿನೈದು ದಿನಗಳಲ್ಲಿ ಸರಣಿ ಬೈಕ್ಗಳ ಕಳ್ಳತನ ನಡೆದಿದೆ. ಇನ್ನು ಈ ಕಳ್ಳರು ಬೆಲೆಬಾಳುವ ರಾಯಲ್ ಎನ್ಫೀಲ್ಡ್, ಡ್ಯೂಕ್, ಆರ್.ಎಕ್ಸ್ ಬೈಕ್ಗಳನ್ನೇ ಟಾರ್ಗೆಟ್ ಮಾಡಿ ಕೈಚಳಕ ತೋರಿಸುತ್ತಿದ್ದಾರೆ. ಮೂವರು ಕದೀಮರು ಸೇರಿ ಬೈಕ್ಗಳನ್ನ ಕದಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಿಗಣಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:45 pm, Tue, 21 May 24