ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ; ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ

ಬೆಂಗಳೂರಿನ ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಕಾಮಗಾರಿ ನಡೆಯುತ್ತಿರು ಹಿನ್ನಲೆ ಮೇ.21 ರ ರಾತ್ರಿ 11 ಗಂಟೆಯಿಂದ ನಾಳೆ(ಮೇ.22) ಮುಂಜಾನೆ 3 ಗಂಟೆಯವರೆಗೆ ಏರ್​​ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್​ನಿಂದ ಪ್ಯಾಲೇಸ್​​ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿ(Vehicular traffic restriction) ಸಿ ಆದೇಶ ಹೊರಡಿಸಲಾಗಿದೆ. ಬದಲಿ ಮಾರ್ಗದ ವಿವರ ಇಲ್ಲಿದೆ.

ಬೆಂಗಳೂರು: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ; ಈ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ
ಬೆಂಗಳೂರು ಟ್ರಾಫಿಕ್​ ರೂಲ್ಸ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: May 21, 2024 | 9:30 PM

ಬೆಂಗಳೂರು, ಮೇ.21: ವಿಂಡ್ಸನ್ ಮ್ಯಾನರ್ ಜಂಕ್ಷನ್‌ ಬಳಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಏರ್​​ರ್ಪೋರ್ಟ್ ರಸ್ತೆಯ ಓಲ್ಡ್ ಹೈಗ್ರೌಂಡ್ಸ್ ಜಂಕ್ಷನ್​ನಿಂದ ಪ್ಯಾಲೇಸ್​​ ಗುಟ್ಟಹಳ್ಳಿವರೆಗೆ ವಾಹನ ಸಂಚಾರ ನಿರ್ಬಂಧಿ(Vehicular traffic restriction) ಸಿ ಆದೇಶ ಹೊರಡಿಸಲಾಗಿದೆ. ಹೌದು, ರೈಲ್ವೆ ಇಲಾಖೆಯಿಂದ ಹೈಟ್ ಗೇಜ್ ಕಂಬಿ ಅಳವಡಿಕೆ ಸಲುವಾಗಿ ಇಂದು(ಮೇ.21) ರಾತ್ರಿ 11ರಿಂದ ನಾಳೆ(ಮೇ.22) ಬೆಳಗಿನ ಜಾವ 3ರವರೆಗೆ ಸಂಚಾರ ನಿರ್ಬಂಧ ಹೊರಡಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರು ಸೂಚಿಸಿದ್ದಾರೆ.

ಪರ್ಯಾಯ ಮಾರ್ಗ ಬಳಸಲು ಸಂಚಾರಿ ಪೊಲೀಸರಿಂದ ಸೂಚನೆ

ಬಸವೇಶ್ವರ ಜಂಕ್ಷನ್​​ನಿಂದ ಬಳ್ಳಾರಿ ರಸ್ತೆ ಕಡೆ ಹೋಗುವವರು ಬಸವೇಶ್ವರ ಜಂಕ್ಷನ್, ಓಲ್ಡ್ ಹೈ ಗ್ರೌಂಡ್ ಜಂಕ್ಷನ್, ಕಲ್ಪನಾ ಜಂಕ್ಷನ್, ಎಮ್ ಸಿಸಿ ಕಾಲೇಜು, ವಸಂತನಗರ ಕೆಳ ಸೇತುವೆ, ಚಕ್ರವರ್ತಿ ಲೇಔಟ್, ಬಿಡಿಎ ಅಂಡರ್ ಪಾಸ್, ಬಿಎಸ್ ರಾಜು ರಸ್ತೆ, ಜಟಕಾ ಸ್ಟ್ಯಾಂಡ್ ಮೂಲಕ ಬಳ್ಳಾರಿ ರಸ್ತೆ ಪ್ರವೇಶ ಮಾಡಬಹುದು.

ಇದನ್ನೂ ಓದಿ:ಸಂಚಾರಿ ಪೊಲೀಸ್​​ ಕಾನ್ಸ್​​ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್​

ಸಂಚಾರಕ್ಕೆ ಅವಕಾಶ

ಇನ್ನು ಬಸವೇಶ್ವರ ಜಂಕ್ಷನ್, ಕಲ್ಪನಾ ಜಂಕ್ಷನ್, ಚಂದ್ರಿಕಾ ಜಂಕ್ಷನ್, ಓಲ್ಡ್ ಉದಯ ಟಿವಿ ಜಂಕ್ಷನ್, ಕಂಟೋನ್ಮೆಂಟ್ ಅಂಡರ್ ಪಾಸ್, ಜಯಮಹಲ್ ರಸ್ತೆ, ಮೇಖ್ರಿ ಸರ್ಕಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ

ಬಸವೇಶ್ವರ ಜಂಕ್ಷನ್ ನಿಂದ ಬಳ್ಳಾರಿ ರಸ್ತೆಗೆ ಸಂಚರಿಸಲು ಮಹರಾಣಿ ಅಂಡರ್ ಪಾಸ್, ಮೈಸೂರ್ ಬ್ಯಾಂಕ್ ಸರ್ಕಲ್, ಉಪ್ಪಾರಪೇಟೆ ಠಾಣೆ ಸಿಗ್ನಲ್, ಶಾಂತಲಾ ಶಿಲ್ಕ್ಸ್ ಜಂಕ್ಷನ್, ರೈಲ್ವೇ ನಿಲ್ದಾಣ ರಸ್ತೆ, ಮಂತ್ರಿ ಮಾಲ್,  ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ, ಯಶವಂತಪುರ ಅಂಡರ್ ಪಾಸ್, ಸದಾಶಿವನಗರ ಪೊಲೀಸ್ ಠಾಣೆ, ಮೇಖ್ರಿ ಸರ್ಕಲ್ ಮೂಲಕ ಹೋಗಬಹುದು.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು