ಸಂಚಾರಿ ಪೊಲೀಸ್ ಕಾನ್ಸ್ ಟೇಬಲ್ ಜೊತೆ ಯುವಕನ ಗಲಾಟೆ; ವಿಡಿಯೋ ವೈರಲ್
ಕ್ಷುಲಕ ಕಾರಣಕ್ಕೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಜೊತೆ ಗಲಾಟೆ ಮಾಡಿದ್ದ ಯುವಕನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಯುವಕ ರಾಜು ಬಂಧಿತ ಆರೋಪಿ. ಶನಿವಾರ (ಡಿಸೆಂಬರ್ 23)ರ ರಾತ್ರಿ ಬೆಂಗಳೂರಿನ ಉತ್ತರಹಳ್ಳಿ ಬಳಿಯ ಹರೇಹಳ್ಳಿ ಸಮೀಪ ಘಟನೆ ನಡೆದಿದೆ.
ಬೆಂಗಳೂರು, ಡಿಸೆಂಬರ್ 25: ಕ್ಷುಲಕ ಕಾರಣಕ್ಕೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ (Traffic Police Constable) ಜೊತೆ ಗಲಾಟೆ ಮಾಡಿದ್ದ ಯುವಕನನ್ನು ಸುಬ್ರಮಣ್ಯಪುರ ಪೊಲೀಸರು (Police) ಬಂಧಿಸಿದ್ದಾರೆ. ಯುವಕ ರಾಜು ಬಂಧಿತ ಆರೋಪಿ. ಶನಿವಾರ (ಡಿಸೆಂಬರ್ 23) ರಾತ್ರಿ ಉತ್ತರಹಳ್ಳಿ ಬಳಿಯ ಹರೇಹಳ್ಳಿ ಸಮೀಪ ಘಟನೆ ನಡೆದಿದೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆ ಕಾನ್ಸ್ ಟೇಬಲ್ ಕರಿಬಸವಯ್ಯ, ರಾಜುಗೆ ರೋಡ್ನಿಂದ ಪಕ್ಕಕ್ಕೆ ಹೋಗುವಂತೆ ಹೇಳಿದ್ದರು.
ಇದರಿಂದ ಕುಂಪಿತಗೊಂಡ ರಾಜು ಕಾನ್ಸ್ಟೇಬಲ್ ಕರಿಬಸಯ್ಯ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ಇದರಿಂದ ಕೋಪಗೊಂಡ ಕಾನ್ಸ್ ಟೇಬಲ್ ಕರಿಬಸವಯ್ಯ ರಾಜುಗೆ ಹಲ್ಲೆ ಮಾಡಿದರು. ಬಳಿಕ ರಾಜು ಕಾನ್ಸ್ ಟೇಬಲ್ ಕರಿಬಸಯ್ಯ ಅವರಿಗೆ ಹಲ್ಲೆ ಮಾಡಿದ್ದಾರೆ.
ಇಬ್ಬರು ಕೈ ಕೈ ಮೀಲಾಯಿಸಿದ್ದಾರೆ. ಗಲಾಟೆ ವೇಳೆ ಕಾನ್ಸ್ಟೇಬಲ್ ಕೈಯಲ್ಲಿದ್ದ ಟೋಪಿ ಕೆಳಗೆ ಬಿದ್ದಿದೆ. ಕಾನ್ಸ್ಟೇಬಲ್ ಕರಿಬಸಯ್ಯ ಟೋಪಿ ತೆಗೆದುಕೊಳ್ಳಲಿ ಬಗ್ಗಿದಾಗ ರಾಜು ಓಡಿ ಹೋಗಲು ಮುಂದಾಗಿದ್ದಾನೆ. ಕೂಡಲೆ ಪೊಲೀಸರು ಆರೋಪಿಯನ್ನ ಹಿಡಿದು ಕೇಸ್ ಹಾಕಿದ್ದಾರೆ. ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Mon, 25 December 23