ಬೆಂಗಳೂರಿನಲ್ಲಿ ಕುಖ್ಯಾತ ಮೊಬೈಲ್ ಕಳ್ಳರ ಬಂಧನ; 22 ಲಕ್ಷ ರೂ. ಮೌಲ್ಯದ 176 ಮೊಬೈಲ್ಗಳು ಜಪ್ತಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ಎಚ್ಚೆತ್ತ ಪೊಲೀಸರು ಆಂಧ್ರ ಮೂಲದ ಇಬ್ಬರು ಕುಖ್ಯಾತ ಕಳ್ಳರನ್ನ ಉಪ್ಪಾರಪೇಟೆ ಠಾಣೆ ಪೊಲೀಸರು(Upparapete Police Station) ಬಂಧಿಸಿದ್ದಾರೆ. ಇವರಿಂದ 22 ಲಕ್ಷ ರೂಪಾಯಿ ಮೌಲ್ಯದ 176 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು, ಮೇ.21: ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು(Thieves) ಉಪ್ಪಾರಪೇಟೆ ಠಾಣೆ ಪೊಲೀಸರು(Upparapete Police Station) ಬಂಧಿಸಿದ್ದಾರೆ. ಆಂಧ್ರದ ಕರ್ನೂಲು ಮತ್ತು ಅನಂತಪುರ ಜಿಲ್ಲೆಯ ನಾಗುನಿಕುಮಾರ್ ಹಾಗೂ ಪರಶುರಾಮ್ ಬಂಧಿತ ಆರೋಪಿಗಳು. ಇವರಿಂದ 22 ಲಕ್ಷ ರೂಪಾಯಿ ಮೌಲ್ಯದ 176 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಶಿವಮೊಗ್ಗ ಮೂಲದ ವ್ಯಕ್ತಿಯ ಮೊಬೈಲ್ ಬಿಎಂಟಿಸಿ ಬಸ್ನಲ್ಲಿ ಕಳುವಾಗಿತ್ತು. ಈ ಹಿನ್ನಲೆ ಏಪ್ರಿಲ್ 22 ರಂದು ಓರ್ವನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಆ ಬಳಿಕ ಮೇ 7 ರಂದು ಬಾಗಲೂರಿನ ಗೋಪಾಲಪುರದಲ್ಲಿ ಮತ್ತೋರ್ವನನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.
ಮೊಬೈಲ್ ಸುಲಿಗೆ ಮಾಡ್ತಿದ್ದ ಐವರು ಆರೋಪಿಗಳ ಬಂಧನ
ಬೆಂಗಳೂರು: ಮೊಬೈಲ್ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಫರ್ವೇಜ್, ಫಾರೂಕ್, ರೆಹಮಾನ್, ಜಮೀರ್ ಹಾಗೂ ಆಶೀಂ ಬಂಧಿತರು. ಬಂಧಿತರ ಬಳಿ ಇದ್ದ 6.31 ಲಕ್ಷ ಬೆಲೆ ಬಾಳುವ 32 ಮೊಬೈಲ್ಗಳು ವಶಕ್ಕೆ ಪಡೆಯಲಾಗಿದ್ದು, ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಫೈಂಡ್ ಮೈ ಡಿವೈಸ್ ಅಪ್ಲೀಕೇಷನ್ ಆಧರಿಸಿ ಓರ್ವನನ್ನು ಮೊದಲು ಬಂಧಿಸಲಾಗಿತ್ತು. ಬಳಿಕ ಬಂಧಿತನ ಮಾಹಿತಿ ಆಧರಿಸಿ ಉಳಿದ ನಾಲ್ವರು ಆರೋಪಿಗಳನ್ನ ಹೆಡೆಮುರಿ ಕಟ್ಟಲಾಗಿದೆ.
ಇದನ್ನೂ ಓದಿ:ಅಂಧ ವೈದ್ಯರ ಮನೆಯಲ್ಲಿ ಕಳ್ಳತನ: ಮಹಡಿಯಿಂದ ಬಿದ್ದು ಸಿಕ್ಕಿಹಾಕಿಕೊಂಡ ಹಳೆಯ ಕಳ್ಳ, ಈ ಸಿನಿಮೀಯ ಸ್ಟೋರಿ ಓದಿ
ಲ್ಯಾಪ್ಟಾಪ್ ಕಳವು ಮಾಡ್ತಿದ್ದ ಅಂತರರಾಜ್ಯ ಕಳ್ಳನ ಬಂಧನ
ಬೆಂಗಳೂರು: ಲ್ಯಾಪ್ಟಾಪ್ ಕಳ್ಳತನ ಮಾಡುತ್ತಿದ್ದ ಆಂಧ್ರ ಮೂಲದ ಕುಮಾರ್ನನ್ನು ಪೊಲೀಸರು ಬಂಧಿಸಿದ್ದು, ಬಂಧಿತನ ಬಳಿ ಇದ್ದ 2.30 ಲಕ್ಷ ಮೌಲ್ಯದ 3 ಲ್ಯಾಪ್ಟಾಪ್ ವಶಕ್ಕೆ ಪಡೆದಿದ್ದಾರೆ. ಕಾಟನ್ಪೇಟೆ ಪಿಜಿಯೊಂದರಲ್ಲಿ ವಾಸವಿದ್ದ ಬಂಧಿತ ಕುಮಾರ್, ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ. ಇದೀಗ ಸಿಸಿ ಕ್ಯಾಮೆರಾ ಆಧರಿಸಿ ಆರೋಪಿಯನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ