ಬೆಂಗಳೂರು: ಗ್ರಾ.ಪಂಚಾಯತಿ ವಾಟರ್​ಮ್ಯಾನ್​ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 30, 2024 | 4:15 PM

ವಾಟರ್​ಮ್ಯಾನ್(Water Man)​ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಲ್ಲುಬಾಳು(kallubalu) ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಸಂದ್ರ ಗ್ರಾಮದಲ್ಲಿ ನಡೆದಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವಾಟರ್ ಮ್ಯಾನ್ ಮಹದೇವಯ್ಯ ಎಂಬುವವರು ಪ್ರಾಣ ಬೆದರಿಕೆ ಇರುವುದಾಗಿ ರಕ್ಷಣೆ ಕೋರಿ ದೂರು ದಾಖಲು ಮಾಡಿದ್ದಾರೆ.

ಬೆಂಗಳೂರು: ಗ್ರಾ.ಪಂಚಾಯತಿ ವಾಟರ್​ಮ್ಯಾನ್​ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ವಾಟರ್​ಮ್ಯಾನ್​ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
Follow us on

ಬೆಂಗಳೂರು, ಏ.30: ಆನೇಕಲ್ ತಾಲೂಕಿನ ಕಲ್ಲುಬಾಳು(kallubalu) ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋನಸಂದ್ರ ಗ್ರಾಮದಲ್ಲಿ ವಾಟರ್​ಮ್ಯಾನ್(Water Man)​ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಹದೇವಯ್ಯ (55) ಹಲ್ಲೆಗೊಳಗಾದ ವ್ಯಕ್ತಿ. ಗ್ರಾಮ ಪಂಚಾಯತಿ ಅನುಮತಿ ಪಡೆಯದೆ ನೀರಿನ ಪೈಪ್ ತೋಡಿದ್ದ ನವೀನ್ ಎಂಬಾತ, ಪೈಪ್ ಲೈನ್ ಒಡೆದು ಹಾಕಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಾಟರ್ ಮ್ಯಾನ್ ಮಹದೇವಯ್ಯ ಈ ಕುರಿತು ಪ್ರಶ್ನಿಸಿದ್ದಾನೆ. ಈ ವೇಳೆ ನವೀನ್, ಚೇತನ್​ ಎಂಬುವವರು ಹಲ್ಲೆ ನಡೆಸಿದ್ದಾರೆ.

ಪ್ರಾಣ ಬೆದರಿಕೆ ಇರುವುದಾಗಿ ರಕ್ಷಣೆ ಕೋರಿ ದೂರು

ಹೌದು, ನವೀನ್ ಮತ್ತು ಆತನ ಸಹೋದರ ಚೇತನ್ ಏಕಾಏಕಿ ಪ್ರಾಣ ಬೆದರಿಕೆ ಹಾಕಿ ವಾಟರ್ ಮ್ಯಾನ್ ಮಹದೇವಯ್ಯನ ಹೊಟ್ಟೆ ಹಾಗೂ ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದಾರೆ. ಇನ್ನು ನವೀನ್ ಮತ್ತು ಚೇತನ್​​ ಮಾಜಿ ಗ್ರಾಮ ಪಂಚಾಯತಿ ಸದಸ್ಯೆಯ ಮಕ್ಕಳಾಗಿದ್ದು, ನವೀನ್ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ವಾಟರ್ ಮ್ಯಾನ್, ಪ್ರಾಣ ಬೆದರಿಕೆ ಇರುವುದಾಗಿ ರಕ್ಷಣೆ ಕೋರಿ ದೂರು ದಾಖಲು ಮಾಡಿದ್ದಾರೆ.

ಇದನ್ನೂ ಓದಿ:ಪ್ರತ್ಯೇಕ ಘಟನೆ: ಮಂಗಳೂರಿನಲ್ಲಿ ರೌಡಿಶೀಟರ್​ಗೆ ಚಾಕು ಇರಿತ, ಬಿಜೆಪಿ ಕಾರ್ಯಕರ್ತನ ಮೇಲೆ ರೌಡಿಶೀಟರ್​ನಿಂದ ಹಲ್ಲೆ

ಬಿಜೆಪಿ ಮುಖಂಡ ನವೀನ್ ಮತ್ತು ಸಹೋದರನ ವಿರುದ್ಧ FIR

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ನವೀನ್ ಮತ್ತು ಸಹೋದರನ ವಿರುದ್ಧ ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರು ಬಳಕೆ ಹಿನ್ನೆಲೆ ಎಫ್​ಐಆರ್​ ದಾಖಲು ಮಾಡಲಾಗಿದೆ. ಸರ್ಕಾರದ ಆದೇಶ ಧಿಕ್ಕರಿಸಿ ಕಟ್ಟಡ ನಿರ್ಮಾಣಕ್ಕೆ ಕುಡಿಯುವ ನೀರಿನ ಪೈಪ್ ಕನೆಕ್ಷನ್ ಪಡೆದಿದ್ದರು. ಕುಡಿಯುವ ನೀರಿನ ಪೈಪ್ ಒಡೆದಿದ್ದನ್ನ ಪ್ರಶ್ನಿಸಿದಕ್ಕೆ ಇಬ್ಬರು ಸೇರಿ ವಾಟರ್​ ಮ್ಯಾನ್​ ಹಲ್ಲೆ ಮಾಡಿದ್ದ ಹಿನ್ನಲೆ ಜಿಗಣಿ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ಮನೆ ಕಳ್ಳತನ ಮಾಡ್ತಿದ್ದ ಆರೋಪಿ ಬಂಧನ

ಬೆಂಗಳೂರು: ರಾತ್ರಿ ವೇಳೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಗಣೇಶ್ ಅಲಿಯಾಸ್​ ಟಚ್ಚು, ಬಂಧಿತ ಆರೋಪಿ. ಬಂಧಿತನಿಂದ 13,35,000 ರೂ. ಮೌಲ್ಯದ 210 ಗ್ರಾಂ. ಚಿನ್ನದ ಆಭರಣಗಳು ಮತ್ತು 1 ಕೆಜಿ 30 ಗ್ರಾಂ ಬೆಳ್ಳಿ ಆಭರಣಗಳು ವಶಕ್ಕೆ ಪಡೆಯಲಾಗಿದೆ. ಇನ್ನು RR ನಗರ ಠಾಣೆ ವ್ಯಾಪ್ತಿಯ ಮನೆಯೊಂದರ ಬೀಗ ಮುರಿದು 400 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಿದ್ದ ಹಿನ್ನಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಮಾಡಿ ಆರೋಪಿ ಗಣೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿರೋದು ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:04 pm, Tue, 30 April 24