ಬೆಂಗಳೂರಿಗೆ ಆವರಿಸಿದ ಮಳೆ ಮೋಡ, ಮುಂದಿನ 2 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ

| Updated By: ಆಯೇಷಾ ಬಾನು

Updated on: Dec 13, 2021 | 12:23 PM

ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಜೂನ್ ತಿಂಗಳಿನಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮಳೆ ಮುಂದುವರೆದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ 2 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರಿಗೆ ಆವರಿಸಿದ ಮಳೆ ಮೋಡ, ಮುಂದಿನ 2 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮನೆ, ಆಫಿಸ್ಗಳಲ್ಲಿ ಕೂತಿರುವವರು ಆಚೆ ಬಂದು ಆಕಾಶ ನೋಡಿದರೆ ಮಳೆ ಬರುವ ಹಾಗಿದೆ… ಮನವೀಗ ಹಾಡಿದೆ ಎಂದು ಗುನುಗದೆ ಇರಲಾರಿರಿ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೂರ್ಯ ಮರೆಯಾಗಿದ್ದು ಮೋಡ ಕವಿದ ವಾತಾವರಣ ಕಂಡು ಬಂದಿದೆ. ಕಳೆದ 2 ದಿನಗಳಿಂದ ಬೆಂಗಳೂರು ಮಳೆ ಮೋಡಗಳಿಂದ ಆವರಿಸಿದ್ದು ಕೆಲ ಕಡೆ ಜಿಟಿ ಜಿಟಿ ಮಳೆ ಕೂಡ ಸುರಿಯುತ್ತಿದೆ. ಮತ್ತೂ ಕೆಲ ಕಡೆ ತಾನಿರುವ ಸುಳಿವು ನೀಡುವಂತೆ ಕ್ಷಣಕ್ಕೆ ಬಂದು ಮರೆಯಾಗುತ್ತಿದೆ.

ನಗರದ ಎಂಜಿ ರಸ್ತೆ, ಇಂದಿರಾನಗರ, ಬಸವನಗುಡಿ, ಜಯ ನಗರ, ರಿಚ್ಮಂಡ್ ಸರ್ಕಲ್ ಸೇರಿದಂತೆ ಇಡೀ ಬೆಂಗಳೂರಿನ ಮೇಲೆ ಮಳೆ ಮೊಡ ಆವರಿಸಿದೆ. ಬೆಂಗಳೂರಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಜೂನ್ ತಿಂಗಳಿನಿಂದ ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇನ್ನೂ ಮಳೆ ಮುಂದುವರೆದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ 2 ದಿನ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಕರ್ನಾಟಕ, ಕೇರಳ, ಅಂಡಮಾನ್ & ನಿಕೋಬಾರ್ ದ್ವೀಪದಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರದಿಂದ ಬುಧವಾರದವರೆಗೆ ಪಶ್ಚಿಮ ಹಿಮಾಲಯ ಪ್ರದೇಶದ ಮೇಲೆ ತಾಜಾ ಪಾಶ್ಚಿಮಾತ್ಯ ಅಡಚಣೆಯು ಪರಿಣಾಮ ಬೀರುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಿಂಚಿನೊಂದಿಗೆ ಸೇರಿದ ಮಳೆಯಾಗಲಿದೆ. ಈ ಅವಧಿಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ಮತ್ತು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸೋಮವಾರದಿಂದ ಗರಿಷ್ಠ ತಾಪಮಾನವು ಸರಾಸರಿಗಿಂತ ಕಡಿಮೆ ಇರುತ್ತದೆ. ಈ ಅವಧಿಯಲ್ಲಿ ಇತರ ಪ್ರದೇಶಗಳು ಸಾಮಾನ್ಯ ಅಥವಾ ಸ್ವಲ್ಪ ಬೆಚ್ಚಗಿರುತ್ತದೆ.

ಡಿ. 15ರವರೆಗೆ ರಾಜಸ್ಥಾನ, ಗುಜರಾತ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು ಸರಾಸರಿಗಿಂತ ಕಡಿಮೆಯಿರುತ್ತದೆ. ಮುಂದಿನ ಮೂರು ದಿನಗಳವರೆಗೆ ಒಡಿಶಾ, ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬೆಳಗಿನ ಸಮಯದಲ್ಲಿ ಮಂಜು ಇರಲಿದೆ.

ಇದನ್ನೂ ಓದಿ: Karnataka Weather Today: ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇನ್ನೆರಡು ದಿನ ಮಳೆ; ಇಂದಿನ ಹವಾಮಾನ ಹೀಗಿದೆ

Published On - 12:22 pm, Mon, 13 December 21