ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ

ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಇ.ಡಿ ಅಧಿಕಾರಿಗಳು ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ 18 ಕಡೆ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ದಾಳಿ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಗೆ ದಾಳಿ ಮಾಡಿರುವ ಇ.ಡಿ ಅಧಿಕಾರಿಗಳು ಮಹತ್ವದ ಪರಿಶೀಲನೆ ನಡೆಸಿದ್ದಾರೆ.

ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ದಂಧೆ ಕೇಸ್​​​: ಕರ್ನಾಟಕದ 18 ಕಡೆ ಇ.ಡಿ ದಾಳಿ
ಇಡಿ ದಾಳಿ
Updated By: ಗಂಗಾಧರ​ ಬ. ಸಾಬೋಜಿ

Updated on: Jun 25, 2025 | 1:02 PM

ಬೆಂಗಳೂರು, ಜೂನ್​ 25: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್​​ (BMS) ಕಾಲೇಜು ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ (E.D Raid) ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ ದಾಳಿ ಮಾಡಿದ್ದು, ಬೆಳಗ್ಗೆ 6 ಗಂಟೆಯಿಂದ ಅಧಿಕಾರಿಗಳು ಕಡತಗಳ ಪರಿಶೀಲನೆ ಮಾಡಿದರು.

ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಕೇಸ್​

2021-22ರಲ್ಲಿ ನಡೆದಿದ್ದ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆಯಲ್ಲಿ ಬಿಎಂಎಸ್​ ಕಾಲೇಜಿನ ಟ್ರಸ್ಟ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸೀಟ್ ಬ್ಲಾಕಿಂಗ್ ಕುರಿತು ರಮೇಶ್ ನಾಯಕ್ ದೂರು ನೀಡಿದ್ದರು. ಹಾಗಾಗಿ ಟ್ರಸ್ಟ್​ ಅಧ್ಯಕ್ಷೆ ರಾಗಿಣಿ ನಾರಾಯಣ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು.

ಇದನ್ನೂ ಓದಿ: ಹಣ ಕೊಟ್ಟವರಿಗೆ ಬೇಕಾಬಿಟ್ಟಿ ಅಂಕ: ಗುಲಬರ್ಗಾ ವಿವಿಯ ಕರ್ಮಕಾಂಡ ಬಯಲು

ಇದನ್ನೂ ಓದಿ
ಪಿಯುಸಿಯಲ್ಲಿ ಫೇಲ್​​ ಆಗಿದ್ದ ವಿದ್ಯಾರ್ಥಿನಿ ಮೊದಲ ಪ್ರಯತ್ನದಲ್ಲೇ UPSCಪಾಸ್
ಡಿಪ್ಲೊಮಾ ಕೋರ್ಸ್‌ಗೆ ಎಷ್ಟು ಶಿಕ್ಷಣ ಸಾಲ ಪಡೆಯಬಹುದು?
SSLC ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ!
ರಾಮನಗರದಲ್ಲಿ ನಕಲಿ ಖಾಸಗಿ ಶಾಲೆಗಳ ಹಾವಳಿ: ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ

ಎಐಸಿಟಿಇ, ಯುಜಿಸಿ ನಿಯಮ ಉಲ್ಲಂಘಿಸಿ ಮೆರಿಟ್ ಸೀಟ್ ಹಂಚಿಕೆ ಮಾಡದೆ, ಅಕ್ರಮವಾಗಿ ಏಜೆಂಟ್​ ಮೂಲಕ ಸೀಟ್ ಹಂಚಿಕೆ ಮಾಡಲಾಗಿತ್ತು. ಆ ಮೂಲಕ ಖಾಸಗಿ ಕಾಲೇಜುಗಳು ಕೋಟ್ಯಂತರ ರೂ ಹಣ ಸಂಗ್ರಹ ಮಾಡಿರುವ ಆರೋಪ ಕೇಳಿಬಂದಿತ್ತು.

ಎರಡನೆ ಬಾರಿಗೆ‌ ಆಕಾಶ್ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ಇಡಿ ದಾಳಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಆಕಾಶ್​ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಂಜಿನಿಯರಿಂಗ್ ಸೀಟ್​ ಬ್ಲಾಕಿಂಗ್ ಆರೋಪ ಹಿನ್ನೆಲೆ ಎರಡನೆ ಬಾರಿಗೆ‌ ಆಕಾಶ್​ ಇಂಜಿನಿಯರಿಂಗ್ ಕಾಲೇಜ್​​ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡಿದರು.

ಏನಿದು ಸೀಟ್ ಬ್ಲಾಕಿಂಗ್ ದಂಧೆ?

ಸಿಂಪಲ್​ ಆಗಿ ಹೇಳುವುದಾದರೆ ಮೊದಲೇ ಕಾಯ್ದಿರಿಸುವುದು ಅಥವಾ ರಿಸರ್ವೇಶನ್ ಪದ್ಧತಿ ಎನ್ನಬಹುದು. ಕೆಲವು ಪ್ರತಿಷ್ಠಿತ ಕಾಲೇಜುಗಳು ಮುಂಬರುವ ಶೈಕ್ಷಣಿಕ ವರ್ಷಕ್ಕೂ ಮೊದಲೇ ಸೀಟ್ ರಿಸರ್ವ್ ಮಾಡುತ್ತವೆ ಎನ್ನಬಹುದು.

ಇದನ್ನೂ ಓದಿ: ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳು, ಪೋಷಕರು ಇದನ್ನ ತಿಳಿದುಕೊಳ್ಳಲೇಬೇಕು!

ಪ್ರತಿ ವರ್ಷ ಅತ್ಯುತ್ತಮ ಕಾಲೇಜುಗಳಿಗೆ‌ ಸೇರಬೇಕೆಂಬುವುದು ಮಕ್ಕಳು ಮತ್ತ ಪೋಷಕರಲ್ಲಿ ತವಕ ಹೆಚ್ಚಿದೆ. ಇದನ್ನೇ ಭಂಡವಾಳವಾಗಿಸಿಕೊಂಡಿರುವ ಖಾಸಗಿ ಸಂಸ್ಥೆಗಳು ಈ ಸೀಟ್ ಬ್ಲಾಕಿಂಗ್ ದಂಧೆ ನಡೆಸಿವೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:01 pm, Wed, 25 June 25