ಕರ್ನಾಟಕ ಸ್ಟೇಟ್ ಫೈರ್​ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್: ಸೈಬರ್ ಖದೀಮರಿಗಾಗಿ ಪೊಲೀಸರ ತಲಾಶ್

| Updated By: ಆಯೇಷಾ ಬಾನು

Updated on: Oct 03, 2022 | 3:28 PM

ಕರ್ನಾಟಕ ಸ್ಟೇಟ್ ಫೈರ್​ & ಎಮರ್ಜೆನ್ಸಿ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಕಿಡಿಗೇಡಿಗಳು ಖಾತೆ ಹ್ಯಾಕ್ ಮಾಡಿ ಸಿಕ್ಕ ಸಿಕ್ಕ ಪೋಸ್ಟ್​ ಹಾಕಿ ಕೃತ್ಯ ಎಸಗಿದ್ದಾರೆ.

ಕರ್ನಾಟಕ ಸ್ಟೇಟ್ ಫೈರ್​ & ಎಮರ್ಜೆನ್ಸಿ ಟ್ವಿಟರ್ ಖಾತೆ ಹ್ಯಾಕ್: ಸೈಬರ್ ಖದೀಮರಿಗಾಗಿ ಪೊಲೀಸರ ತಲಾಶ್
ಸೈಬರ್ ಕ್ರೈಂ
Image Credit source: Live Mint
Follow us on

ಬೆಂಗಳೂರು: ನಗರದಲ್ಲಿ ಸೈಬರ್ ಖದೀಮರ ಹಾವಳಿ ಹೆಚ್ಚಾಗಿದ್ದು ಕರ್ನಾಟಕ ಸ್ಟೇಟ್ ಫೈರ್​ & ಎಮರ್ಜೆನ್ಸಿ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ. ಕಿಡಿಗೇಡಿಗಳು ಖಾತೆ ಹ್ಯಾಕ್ ಮಾಡಿ ಸಿಕ್ಕ ಸಿಕ್ಕ ಪೋಸ್ಟ್​ ಹಾಕಿ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಫಾರೆಸ್ಟ್ ಡಿಜಿಟಲ್ ಕಮ್ಯುನಿಕೇಷನ್ ತಂಡ ಸೈಬರ್​ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿದ್ದು ಟ್ವಿಟರ್ ಖಾತೆ ಹ್ಯಾಕ್ ಬಗ್ಗೆ ಸೈಬರ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬುದ್ಧಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿತ

ಹುಬ್ಬಳ್ಳಿ ಸೋನಿಯಾ ಗಾಂಧಿ ನಗರದಲ್ಲಿ ನಿನ್ನೆ ತಡ ರಾತ್ರಿ ಭೀಕರ ಘಟನೆ ನಡೆದಿದೆ. ಬುದ್ಧಿ ಹೇಳಲು ಹೋದ ಕಾಂಗ್ರೆಸ್​​ ಮುಖಂಡ ತೌಸೀಫ್​ ಇಸ್ಮಾಯಿಲ್ & ಟೀಮ್ ಚಾಕು ಇರಿದಿದೆ. ಗಾಯಾಳು ‘ಕೈ’ ಮುಖಂಡ ತೌಸೀಫ್​ಗೆ ಕಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೌಸೀಫ್ ಕಾಲು, ಬೆನ್ನಿಗೆ ಚಾಕು ಹಾಕಿ ಹಲ್ಲೆ ನಡೆಸಲಾಗಿದ್ದು ಬೆಂಡಿಗೇರಿ ಪೊಲೀಸರು ಇಸ್ಮಾಯಿಲ್ & ಟೀಮ್​ ಬಂಧಿಸಿದ್ದಾರೆ.

ವ್ಯಾಪಾರಿಗೆ ಚಾಕು ಇರಿತ, ನಾಲ್ವರು ಅರೆಸ್ಟ್

ವ್ಯಾಪಾರಿಗೆ ಹಾಡುಹಗಲೇ ಚಾಕು ಇರಿಯಲಾಗಿದ್ದು ಕಸಬಾಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಖಾದರ್, ಬಿಲಾಲ್, ಸಾಧಿಕ್ ಹಾಗೂ ಖಾಜಾ ಬಂಧಿತ ಆರೋಪಿಗಳು. ಸೆ.28ರಂದು ಹಣ ವಸೂಲಿಗೆ ಬಂದು ವ್ಯಾಪಾರಿ ಮೊಹ್ಮದ್​ಗೆ ಚಾಕು ಇರಿದಿದ್ದರು. ಸದ್ಯ ಆರೋಪಿಗಳನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಇದು ಇ-ಕಾಲದ ಎಮ್ಮೆ, ಆಕೆ ಕುಣಿದು ತೋರಿಸಿದಳು ಇದೂ ಕುಣಿಯಿತು

ಅತ್ಯಾಚಾರ ಆರೋಪಿಗೆ ಏಳು ವರ್ಷ ಜೈಲು

ತುಮಕೂರು: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ವೃದ್ಧ ಸಿಗ್ಬತ್​​ವುಲ್ಲಾ ಖಾನ್​ಗೆ(70) 7 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ದಂಡ ಹಾಗೂ ಸಂತ್ರಸ್ತೆಗೆ 50 ಸಾವಿರ ಪರಿಹಾರ ನೀಡುವಂತೆ ಪೋಕ್ಸೋ ನ್ಯಾಯಾಲಯ​​ ಆದೇಶ ಹೊರಡಿಸಿದೆ. 2021 ರ ಮಾರ್ಚ್ 11 ರಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖಾಧಿಕಾರಿ ಡಿಎಲ್ ರಾಜು ಪ್ರಕರಣ ಕುರಿತು ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂಧ್ಯಾ ಪಿ,ರಾವ್ ರಿಂದ ಅಪರಾಧಿಗೆ ಶಿಕ್ಷೆ ಪ್ರಕಟಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:28 pm, Mon, 3 October 22