ಬೆಂಗಳೂರು: ಉಕ್ರೇನ್ ಹಾಗೂ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್ನ ಖಾರ್ಕಿವ್ ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ಕೊಡಲಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಉಕ್ರೇನ್ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. 694 ಜನ ವಿದ್ಯಾರ್ಥಿಗಳ ಕುಟುಂಬಸ್ಥರಿಂದ ಸರ್ಕಾರ ಮಾಹಿತಿ ಪಡೆಯುತ್ತಿದೆ.
ಇತ್ತ ಭಾರತ ಸರ್ಕಾರ ಮತ್ತು ಎಂಬಸಿ ವಿರುದ್ದ ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾರ್ಡರ್ನಿಂದ ನಾವೇ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ. ಒಳಗಡೆ ನಮಗೆ ಭಾರತ ಸರ್ಕಾರ ಹೆಲ್ಪ್ ಮಾಡುತ್ತಿಲ್ಲ. ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.
ನಮ್ಮ ಎದುರಿಗೆ ಮಿಸೈಲ್ಗಳು ಸ್ಪೋಟವಾಗುತ್ತಿವೆ. ಬಾರ್ಡರ್ ಕ್ರಾಸ್ ಅದ ಮೇಲೆ ಸರ್ಕಾರ ಫ್ಲೈಟ್ ಬುಕ್ ಮಾಡಿದೆ ಅಷ್ಟೇ. ವಿದ್ಯಾರ್ಥಿಗಳಿಗೆ ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ. ಈ ಕೆಲಸ ಭಾರತ ಸರ್ಕಾರ ಮಾಡಬೇಕಿದೆ. ಕಿವ್ ಮತ್ತು ಖಾರ್ಕಿವ್ ನಗರಗಳಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಘೋರವಾಗಿದೆ. ತುರ್ತಾಗಿ ವಿದ್ಯಾರ್ಥಿಗಳನ್ನ ಉಕ್ರೇನ್ ಪೂರ್ವಭಾಗದಿಂದ ಕರೆತರಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವೀನ್ ಮೃತಪಟ್ಟು ಮೂರು ದಿನಗಳು ಆಗಿದ್ದರಿಂದ ವೀರಶೈವ ಸಂಪ್ರದಾಯದಂತೆ ಮೂರು ದಿನದ ಕಾರ್ಯ
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ ನವೀನ್ ಪಾರ್ಥೀವ ಶರೀರ ಬರೋದನ್ನು ಕುಟುಂಬಸ್ಥರು ಎದುರು ನೋಡುತ್ತಿದ್ದಾರೆ. ಪಾರ್ಥೀವ ಶರೀರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಇವತ್ತು ಪಾರ್ಥೀವ ಶರೀರ ಬರೋದರ ಬಗ್ಗೆ ಮಾಹಿತಿ ಸಿಗಲಿದೆ. ರಾಯಭಾರಿ ಕಚೇರಿಯಿಂದ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಮೃತ ನವೀನ್ ತಂದೆ ಹೇಳಿದ್ದಾರೆ.
ನವೀನ್ ಮೃತಪಟ್ಟು ಮೂರು ದಿನಗಳು ಆಗಿದ್ದರಿಂದ ವೀರಶೈವ ಸಂಪ್ರದಾಯದಂತೆ ಮೂರು ದಿನದ ಕಾರ್ಯ ನಡೆಸುತ್ತೇವೆ. ಸ್ವಾಮಿಗಳನ್ನ ಕೇಳಿಕೊಂಡು ಮೂರು ದಿನದ ಕಾರ್ಯದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಟಿವಿ9ಗೆ ಮೃತ ನವೀನ ತಂದೆ ಶೇಖರಗೌಡ ಗ್ಯಾನಗೌಡರ ಮಾಹಿತಿ ನೀಡಿದ್ದಾರೆ. ನವೀನ್ ನಿವಾಸದ ಮುಂದೆ ಮೂರು ದಿನದ ಕಾರ್ಯದ ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ: Russia Ukraine War Live: ಉಕ್ರೇನ್ನ ದಕ್ಷಿಣದಲ್ಲಿರುವ ಖೇರ್ಸನ್ ಈಗ ರಷ್ಯಾ ವಶ: ಉಕ್ರೇನಿಯನ್ ಅಧಿಕಾರಿಗಳ ಮಾಹಿತಿ
Published On - 8:39 am, Thu, 3 March 22