ಬೀದಿ ವಿದ್ಯುತ್ ಕಂಬದಿಂದ ಎಚ್ಚರ…ಎಚ್ಚರ: ವ್ಯಕ್ತಿಯೋರ್ವನ ಜೀವ ಕಾಪಾಡಲು ಹೋಗಿ ಪ್ರಾಣ ತೆತ್ತ ಮೊಬೈಲ್‌ ವ್ಯಾಪಾರಿ

|

Updated on: Apr 13, 2023 | 9:34 AM

ವ್ಯಕ್ತಿಯೋರ್ವನ ಜೀವ ಕಾಪಾಡಲು ಹೋಗಿ ಕೇರಳ ಮೂಲದ ಮೊಬೈಲ್‌ ವ್ಯಾಪಾರಿಯೊಬ್ಬರು ಕಂಬದಿಂದ ವಿದ್ಯುತ್‌ ಪ್ರವಹಿಸಿ ಸಾವು ಪ್ರಾಣ ತೆತ್ತಿದ್ದಾನೆ.

ಬೀದಿ ವಿದ್ಯುತ್ ಕಂಬದಿಂದ ಎಚ್ಚರ...ಎಚ್ಚರ: ವ್ಯಕ್ತಿಯೋರ್ವನ ಜೀವ ಕಾಪಾಡಲು ಹೋಗಿ ಪ್ರಾಣ ತೆತ್ತ ಮೊಬೈಲ್‌ ವ್ಯಾಪಾರಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬೀದಿ ದೀಪದ ವಿದ್ಯುತ್‌ ಕಂಬದಿಂದ ವಿದ್ಯುತ್‌ ಪ್ರವಹಿಸಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ಕಾಪಾಡಲು ಹೋಗಿ ಕೇರಳ ಮೂಲದ ವ್ಯಕ್ತಿಯೊಬ್ಬ ಪ್ರಾಣ ತೆತ್ತಿರುವ ಘಟನೆ ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳದ  ತ್ರಿಶೂರ್‌ ಜಿಲ್ಲೆಯ ಮೊಬೈಲ್‌ ವ್ಯಾಪಾರಿಯಾಗಿದ್ದ ಅಕ್ಬರ್‌ ಅಲಿ (36) ಮೃತ ದುರ್ದೈವಿ.  ಮಡಿವಾಳದ ಹೊಸೂರು ರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಸಮೀಪದ ಅಲಿ ನಡೆದುಕೊಂಡು ಹೋಗುವಾಗ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Karaga: ಬೆಂಗಳೂರು ಕರಗ ಹೊತ್ತಿದ್ದ ಜ್ಞಾನೇಂದ್ರ ಕೊಲೆ ಯತ್ನ, ಓರ್ವ ಆರೋಪಿ ಬಂಧನ

ತನ್ನೂರಿನಲ್ಲಿ ಮೊಬೈಲ್‌ ಮಾರಾಟ ಅಂಗಡಿ ನಡೆಸುತ್ತಿದ್ದ ಅಕ್ಬರ್‌ ಅಲಿ, ಮೂರು ದಿನಗಳ ಹಿಂದೆ ಮೊಬೈಲ್‌ ಬಿಡಿಭಾಗಗಳ ಖರೀದಿಗೆ ನಗರಕ್ಕೆ ಬಂದಿದ್ದ. ಈ ಹಿನ್ನೆಲೆಯಲ್ಲಿ ಮಡಿವಾಳ ಸಮೀಪದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಅದರಂತೆ ಮಂಗಳವಾರ ನಗರದ ಎಸ್‌ಪಿ ರಸ್ತೆಯಲ್ಲಿ ಮೊಬೈಲ್​ ಫೋನ್ ಬಿಡಿ ಭಾಗಗಳನ್ನು ಖರೀದಿಸಿ ರಾತ್ರಿ ಮದ್ಯ ಸೇವಿಸಿ ಲಾಡ್ಜ್‌ಗೆ ಹೋಗುತ್ತಿದ್ದ. ಆದ್ರೆ, ಅದೇ ಮಾರ್ಗ ಮಧ್ಯೆ ಹೊಸೂರು ರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಮುಂದಿನ ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಪ್ರವಹಿಸಿ ವ್ಯಕ್ತಿಯೊಬ್ಬ ಬಿದ್ದಿದ್ದ. ಇದನ್ನು ಗಮನಿಸಿದ ಅಲಿ, ಕೂಡಲೇ ಅಪರಿಚಿತ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ. ಅಲ್ಲೇ ಇದ್ದ ದೊಣ್ಣೆಯಿಂದ ಆ ವ್ಯಕ್ತಿಯನ್ನು ನೂಕಿ ಆತನನ್ನು ರಕ್ಷಿಸಿದ್ದಾರೆ. ಆದ್ರೆ, ದುರ್ವೈವ ಕೊನೆಗೆ ಅಲಿ ಪ್ರಾಣ ತೆತ್ತಿದ್ದಾರೆ ಎಂದು ತಿಳಿದುಬಂದಿದೆ,

ಅಪರಿಚಿತ ವ್ಯಕ್ತಿ ರಕ್ಷಣೆಗೆ ಉಪಯೋಗಿಸಿದ್ದ ಮರದ ಬಡಿಗೆ ಬೀದಿ ದೀಪದ ಕಂಬಕ್ಕೆ ತಾಕಿ ವಿದ್ಯುತ್‌ ಪ್ರವಹಿಸಿದೆ. ಪರಿಣಾಮ ಅಲಿ ಮೃತಪಟ್ಟಿದ್ದಾರೆ. ಕೂಡಲೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ನು ಇದನ್ನು ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.