ಬೀದಿನಾಯಿ ವಿರುದ್ಧ ಪ್ರತಿಭಟನೆ ನಡೆಸಿದ ಅಪಾರ್ಟ್‌ಮೆಂಟ್ ನಿವಾಸಿಗಳ ವಿರುದ್ಧ SPCA ದೂರು
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸೊಸೈಟಿ (ಎಸ್‌ಪಿಸಿಎ) ಮತ್ತು ಇತರ ನಾಲ್ವರು ಸ್ವಯಂಸೇವಕರ ಮೇಲೆ ಗಲಾಟೆ ಸೃಷ್ಟಿಸಿ, ದೌರ್ಜನ್ಯ ಎಸಗಿರುವ ಆರೋಪದ ಮೇಲೆ ನಲ್ಲೂರಹಳ್ಳಿಯ ದಿವ್ಯಶ್ರೀ ರಿಪಬ್ಲಿಕ್ ಆಫ್ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌ನ ನಿವಾಸಿಗಳ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ
ಬೆಂಗಳೂರು: ನಲ್ಲೂರಹಳ್ಳಿಯ ದಿವ್ಯಶ್ರೀ ರಿಪಬ್ಲಿಕ್ ಆಫ್ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್(Divyashree Republic Of Whitefield Apartment At Nallurahalli)ನ ನಿವಾಸಿಗಳ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಮಂಗಳವಾರ ಎಫ್‌ಐಆರ್(FIR) ದಾಖಲಿಸಿದ್ದಾರೆ, ಹೌದು ಬೀದಿನಾಯಿ ಮತ್ತು ಅದರ ಮೂರು ಮರಿಗಳನ್ನು ತಮ್ಮ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಇಡುವುದನ್ನು ವಿರೋಧಿಸಿ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಸೊಸೈಟಿ (ಎಸ್‌ಪಿಸಿಎ) ಮತ್ತು ಇತರ ನಾಲ್ವರು ಸ್ವಯಂಸೇವಕರ ಮೇಲೆ ಗಲಾಟೆ ಸೃಷ್ಟಿಸಿ, ದೌರ್ಜನ್ಯ ಎಸಗಿರುವ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ಮಾರ್ಚ್ 21 ರಂದು ಈ ಘಟನೆ ನಡೆದಿತ್ತು. ಈ ಕುರಿತು SPCA ಸದಸ್ಯರು ಮತ್ತು ಇತರ ಸ್ವಯಂಸೇವಕರು ಬೆದರಿಕೆ ಮತ್ತು ಕಿರುಕುಳದ ಬಗ್ಗೆ ದೂರು ನೀಡಲು ಅಲೆದಾಟ ನಡೆಸಿ ಕೊನೆಗೆ ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ತನ್ನ ಮೂರು ಮರಿಗಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಬೀದಿನಾಯಿಯನ್ನು ಮಾರ್ಚ್ 21 ರಂದು ಕ್ರಿಮಿನಾಶಕ ಹಾಕಲು ಬಿಬಿಎಂಪಿ ಎತ್ತಿಕೊಂಡು ಹೋಗಿ ವಾಪಸ್ ಕರೆತಂದಿದ್ದರು. ಆದರೆ ಅಲ್ಲಿನ ನಿವಾಸಿಗಳು ಮಹಿಳಾ ಬಿಬಿಎಂಪಿ ಅಧಿಕಾರಿ ಮತ್ತು ಎಂಎಸ್ ಜಟಾಲೆ ಸೇರಿದಂತೆ ಇತರರಿಗೆ ವಾಹನವನ್ನು ತಡೆದು ನಾಯಿಯನ್ನು ಹಿಂದಕ್ಕೆ ಇಳಿಸಲು ಬಿಡಲಿಲ್ಲ ಎಂದು ದೂರುದಾರ ಮತ್ತು ಎಸ್‌ಪಿಸಿಎ ಸದಸ್ಯೆ ರಿಚಾ ಜಟಾಲೆ ಹೇಳಿದರು.
ಇದನ್ನೂ ಓದಿ:AI Generated Images: ಮುದ್ದು ಪ್ರಾಣಿಗಳ ಕ್ಯೂಟ್ ಸೆಲ್ಫಿ; ಕೇರಳ ಮೂಲದ ಆರ್ಟಿಸ್ಟ್ ಕೈ ಚಳಕ ನೋಡಿ!
ಇನ್ನು ಪೊಲೀಸರು ಸ್ಥಳಕ್ಕೆ ಬಂದರೂ ಕೂಡ ಅಲ್ಲಿನ ನಿವಾಸಿಗಳು ಬೆದರಿಕೆ, ಘೋಷಣೆಗಳನ್ನು ಕೂಗಿದ್ದು ಮತ್ತು ಕೆಟ್ಟ ಪದಗಳನ್ನು ಬಳಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೆ ಬಿಬಿಎಂಪಿ ಅಧಿಕಾರಿಗಳು ಹಿಂತಿರುಗಿ ನಾಯಿಯನ್ನು ಸ್ಥಳದಿಂದ ಕೆಳಗೆ ಇಳಿಸಿದ್ದಾರೆ. ನಿವಾಸಿಗಳು ಸೊಸೈಟಿಯ ವಾಟ್ಸಾಪ್ ಗ್ರೂಪ್‌ನಿಂದ ನಾಯಿ ಹುಳಗಳನ್ನ ತೆಗೆಯಬೇಲು ಎಂದು ಬೆದರಿಕೆ ಹಾಕಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.
ಅವುಗಳ ಸುರಕ್ಷತೆಯ ಬಗ್ಗೆ ಯೋಚಿಸಿ ಶ್ರೀಮತಿ ಜಟಾಲೆ ನೇತೃತ್ವದ ಸ್ವಯಂಸೇವಕರು ರಕ್ಷಣೆ ಕೋರಿ ಡಿಸಿಪಿ ವೈಟ್‌ಫೀಲ್ಡ್ ಕಚೇರಿಯನ್ನು ಸಂಪರ್ಕಿಸಿದರು. ಬಳಿಕ ನಾಯಿ ಮರಿಗಳಿಗೆ ಆಹಾರ ಮತ್ತು ಆರೈಕೆ ಮಾಡಲು ಅವಕಾಶ ನೀಡಿದರು. ದೂರಿನ ಆಧಾರದ ಮೇಲೆ ವೈಟ್‌ಫೀಲ್ಡ್ ಪೊಲೀಸರು ನಿವಾಸಿಗಳ ವಿರುದ್ಧ ಕಾನೂನುಬಾಹಿರ ಸಭೆ, ಗಲಭೆ, ಉದ್ದೇಶಪೂರ್ವಕ ಅವಮಾನ ಮತ್ತು ಅತಿರೇಕದ ನಡುವಳಿಕೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ