AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Water Supply: ಕೆಪಿಟಿಸಿಎಲ್​ ಕಾಮಗಾರಿ: ಇಡೀ ಬೆಂಗಳೂರಿನಲ್ಲಿ ನಾಳೆ ನೀರು ವ್ಯತ್ಯಯ

ಕೆಪಿಟಿಸಿಎಲ್ ಕೆಲಸ ನಡೆಯುತ್ತಿದೆ. ಹೀಗಾಗಿ ಇಡೀ ಬೆಂಗಳೂರಿನಲ್ಲಿ ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್​​ ಸುರೇಶ್​ ಹೇಳಿದ್ದಾರೆ. ಟಿವಿ9 ಜೊತೆ ಮಾತನಾಡಿದ ಅವರು, ಬೆಂಗಳೂರಿಗೆ ನೀರು ಸರಬರಾಜು ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲ ಸಮಸ್ಯೆಗಳಿಂದ ಕೆಲವೊಂದು ಏರಿಯಾಗಳಿಗೆ ನೀರಿನ ಆಭಾವ ಎದುರಾಗಿರಬಹುದು ಎಂದಿದ್ದಾರೆ.

Bengaluru Water Supply: ಕೆಪಿಟಿಸಿಎಲ್​ ಕಾಮಗಾರಿ: ಇಡೀ ಬೆಂಗಳೂರಿನಲ್ಲಿ ನಾಳೆ ನೀರು ವ್ಯತ್ಯಯ
ಪ್ರಾತಿನಿಧಿಕ ಚಿತ್ರ
Poornima Agali Nagaraj
| Edited By: |

Updated on:Sep 22, 2023 | 6:59 PM

Share

ಬೆಂಗಳೂರು, ಸೆ್ಪ್ಟೆಂಬರ್​ 22: ಕಾಮಗಾರಿ ಹಿನ್ನೆಲೆ ಇಡೀ ಬೆಂಗಳೂರಿನಲ್ಲಿ ಸೆ. 23 ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರವರೆಗೂ ಕಾವೇರಿ ನೀರು (Water) ಸರಬರಾಜು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಇತ್ತೀಚೆಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಸದ್ಯ ಈ ಕುರಿತಾಗಿ ಟಿವಿ9 ಜೊತೆ ಜಲಮಂಡಳಿ ಮುಖ್ಯ ಎಂಜಿನಿಯರ್​​ ಸುರೇಶ್​ ಮಾತನಾಡಿದ್ದು, ಕೆಪಿಟಿಸಿಎಲ್ ಕೆಲಸ ನಡೆಯುತ್ತಿದೆ. ಹೀಗಾಗಿ ಇಡೀ ಬೆಂಗಳೂರಿನಲ್ಲಿ ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.

ಡಿಕೆಹಳ್ಳಿಯಿಂದ ಹಾರೋಹಳ್ಳಿಗೆ ಸರಬರಾಜಾಗುವ ದಾರಿಯಲ್ಲಿ ಕೆಪಿಟಿಸಿಎಲ್ ಮೇಜರ್ ವರ್ಕ್ ತೆಗೆದುಕೊಂಡಿದೆ. ಹೀಗಾಗಿ ಎರಡು ಗಂಟೆಗಳ ಕಾಲ ನೀರನ್ನ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿಗೆ ನೀರು ಸರಬರಾಜು ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಕೆಲ ಸಮಸ್ಯೆಗಳಿಂದ ಕೆಲವೊಂದು ಏರಿಯಾಗಳಿಗೆ ನೀರಿನ ಆಭಾವ ಎದುರಾಗಿರಬಹುದು ಎಂದಿದ್ದಾರೆ.

ಇದನ್ನೂ ಓದಿ: Bengaluru Water Supply: ಸೆ. 23 ರಂದು ಬೆಂಗಳೂರಿನ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯ: ಬೆಂಗಳೂರು ಜಲಮಂಡಳಿ

ಸದ್ಯ 34 ಟಿಎಂಸಿಯಷ್ಟು ನೀರು ಸಂಗ್ರಹ ಇರಿಸುವಂತೆ ಕೇಳಿದ್ದೇವೆ. ಕಾವೇರಿ ನೀರು ಗಲಾಟೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕೆಪಿಟಿಸಿಎಲ್ ನಮಗೆ ಕೆಲಸದ ಸಲುವಾಗಿ ಮನವಿ ಮಾಡಿದ್ದರಿಂದ ಇಡೀ ಬೆಂಗಳೂರಿಗೆ ಎರಡು ಗಂಟೆಗಳ ಕಾಲ ನೀರು ನಿಲ್ಲಿಸಲಾಗುತ್ತದೆ. ತದನಂತರ ಮತ್ತೆ ಎಂದಿನಂತೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿದ ಕಾವೇರಿ ಕಿಚ್ಚು: ನಾಳೆ ಮಂಡ್ಯ ನಗರ ಬಂದ್, ಏನಿರುತ್ತೆ? ಏನಿರಲ್ಲ?

ತಾತಗುಣಿ ವಿದ್ಯುತ್​ ಸ್ವೀಕರಣಾ ಕೇಂದ್ರದಲ್ಲಿ ಕೆಲ ಕಾಮಗಾರಿ ಸರ್ಕ್ಯೂಟ್​ ಬ್ರೇಕರ್​​ ಮತ್ತು ಕರೆಂಟ್​​ ಟ್ರಾನ್ಸ್​ಫಾರ್​ಮರ್​ ಸ್ಥಾಪನೆ ಮತ್ತು ಅವುಗಳ ಪರಿಶೀಲನೆ ಹಾಗೂ ಕಾರ್ಯಗತಗೊಳಿಸುವ ಕೆಲಸ ನಿಗದಿ ಹಿನ್ನೆಲೆ ಶನಿವಾರ ಕಾವೇರಿ ನೀರು ಸರಬರಾಜು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿತ್ತು.

ಜೊತೆಗೆ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಮತ್ತು ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:59 pm, Fri, 22 September 23

2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ