ತಮಿಳುನಾಡಿಗೆ ನೀರು: ಬೆಂಗಳೂರಿಗೆ ಎದುರಾಗಲಿದೆಯಾ ಜಲಕ್ಷಾಮ? ಸಿಲಿಕಾನ್ ಸಿಟಿಗೆ ಪ್ರತಿ ತಿಂಗಳು ಎಷ್ಟು ನೀರು ಬೇಕು?
ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಹರಿಸಿದರೇ ರಾಜಧಾನಿ ಜನರು ನೀರಿಗಾಗಿ ಪರದಾಡುವಂತಾಗುತ್ತದೆ. ಅಲ್ಲದೇ ಅಕ್ಟೋಬರ್ ತಿಂಗಳಲ್ಲಿ ಒಂದು ವೇಳೆ ಮಳೆ ಕೈ ಕೊಟ್ಟರೇ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉದ್ಭವಿಸುತ್ತದೆ ಎದರುರಾಗಲಿದೆ.
ಬೆಂಗಳೂರು ಸೆ.22: ಕಾವೇರಿ ನದಿ (Cauvery water Dispute) ನೀರು ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಕಾವೇರಿ ಜಲಾಶಯನ ಪ್ರದೇಶ ಹಾಗೂ ಬೆಂಗಳೂರಿಗರನ್ನು (Bengaluru) ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ತಮಿಳುನಾಡಿಗೆ (Tamilnadu) ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್ ನೀರು ಹರಿಸಿದರೇ ರಾಜಧಾನಿ ಜನರು ನೀರಿಗಾಗಿ ಪರದಾಡುವಂತಾಗುತ್ತದೆ. ಅಲ್ಲದೇ ಅಕ್ಟೋಬರ್ ತಿಂಗಳಲ್ಲಿ ಒಂದು ವೇಳೆ ಮಳೆ ಕೈ ಕೊಟ್ಟರೇ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉದ್ಭವಿಸುತ್ತದೆ ಎದರುರಾಗಲಿದೆ.
ಮಂಡ್ಯದ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಪಂಪ್ ಸ್ಟೇಷನ್ ದಿಂದ ಬೆಂಗಳೂರಿಗೆ ದಿನಕ್ಕೆ 1,450 ಮಿಲಿಯನ್ ಲೀಟರ್ (ಎಂಎಲ್‌ಡಿ) ಅಥವಾ 700 ಕ್ಯೂಸೆಕ್ಸ್ ಬರುತ್ತಿದೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಎನ್ ಜಯರಾಮ್ ಮಾತನಾಡಿ ಈಗ ನಮಗೆ ಸಾಕಷ್ಟು ನೀರು ಬರುತ್ತಿದೆ ಮತ್ತು ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ ಎಂದರು.
ಬಿಡ್ಲೂಎಸ್ಎಸ್ಬಿ ಮೂಲಗಳ ಪ್ರಕಾರ ಸದ್ಯಕ್ಕೆ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಲ್ಲಿ 60 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ 20 ಟಿಎಂಸಿ ಡೆಡ್ ಸ್ಟೋರೇಜ್ ಎಂದು ಪರಿಗಣಿಸಬಹುದು. ಅದನ್ನು ಹೊರತೆಗೆಯಲು ಸಾಧ್ಯವಿಲ್ಲ. ಹೀಗಾಗಿ, ಮಂಡ್ಯ, ಮೈಸೂರು ಮತ್ತು ಬೆಂಗಳೂರು ಮತ್ತು ಸುತ್ತಮುತ್ತಲಿನ ಕೆಲವು ಪ್ರದೇಶಗಳ ನಡುವೆ 40 ಟಿಎಂಸಿ ನೀರು ಹಂಚಿಕೆಯಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿಗೆ ಪ್ರತಿ ತಿಂಗಳು 1.6 ಟಿಎಂಸಿ ನೀರು ಬೇಕಾಗುತ್ತದೆ. ಇದು ಕೆಲವು ತಿಂಗಳುಗಳವರೆಗೆ ಸಾಕಾಗುತ್ತದೆ. ಕಾವೇರಿ ಐದನೇ ಹಂತ ಕಾರ್ಯಾರಂಭ ಮಾಡಿದರೇ 8 ಟಿಎಂಸಿ ನೀರು ಅಗತ್ಯವಿರುವ 110 ಹಳ್ಳಿಗಳಿಗೆ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿಗೆ ದಿನಕ್ಕೆ 5,000 ಕ್ಯೂಸೆಕ್‌ಗಳನ್ನು ಪೂರೈಸುವುದರಿಂದ ಹದಿನೈದು ದಿನಗಳಲ್ಲಿ 75,000 ಕ್ಯೂಸೆಕ್ ಅಥವಾ 37 ಟಿಎಂಸಿ ನೀರು ಕಾಲಿ ಆಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ನಿಯಮಿತವಾಗಿ ಮಳೆ ಬಂದರೆ ನೀರಿನ ಅಭಾವ ಉಂಟಾಗುವುದಿಲ್ಲ. ಒಂದು ವೇಳೆ ಮಳೆ ಬಾರದಿದ್ದರೇ, ಮುಂದಿನ ದಿನಗಳಲ್ಲಿ ನೀರಿನ ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
ಮಳೆ ಕೊರತೆಯಿಂದಾಗಿ ಕಾವೇರಿ ಕೊಳ್ಳದ ಜಲಾಶಯಗಳು ಸದ್ಯ ಶೇ.36ರಷ್ಟು ಮಾತ್ರ ಭರ್ತಿಯಾಗಿವೆ. ಅದರಂತೆ ಕೆಆರ್ ಎಸ್, ಗೊರೂರು (ಹೇಮಾವತಿ), ಕಬಿನಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಒಟ್ಟು 47.15 ಟಿಎಂಸಿ ಅಡಿಗಳಷ್ಟು ನೀರು ಶೇಖರಣೆಯಾಗಿದೆ. ಅದರಲ್ಲಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ 37.56 ನೀರನ್ನು ಮಾತ್ರ ಬಳಸಿಕೊಳ್ಳಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ