ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ ದೇವಸ್ಥಾನಕ್ಕೆ ಹರಿದು ಬಂದ ಜನ ಸಾಗರ, ಹೂವು-ತೆಂಗಿನ ಗರಿ ಬಳಸಿ ವಿಶೇಷ ಅಲಂಕಾರ

ಬೆಂಗಳೂರು ಬೆಳೆಯುತ್ತಿರುವುದರಿಂದ ರಾಜಾಜಿನಗರ ಇಸ್ಕಾನ್ ಅಲ್ಲದೇ ಕನಕಪುರ ರಸ್ತೆಯಲ್ಲಿರುವ ವೈಕುಂಟ ಗಿರಿಯಲ್ಲಿ ಹಾಗೂ ಐಟಿಬಿಟಿ ಸಾಫ್ಟವೇರ್ ಹೆಚ್ಚಾಗಿರುವ ವೈಟ್ ಫಿಲ್ಡ್ ನಲ್ಲಿ ಭಾರತೀಯ ಸಂಸ್ಕೃತಿ ಕೃಷ್ಣನ ಜೊತೆ ಜೋಡಿಸಲು ಅಲ್ಲಿರುವ ಕೆಟಿಪಿಓ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಮಾಡಿಕೊಂಡಿದೆ.

ಕೃಷ್ಣ ಜನ್ಮಾಷ್ಟಮಿ: ಇಸ್ಕಾನ್ ದೇವಸ್ಥಾನಕ್ಕೆ ಹರಿದು ಬಂದ ಜನ ಸಾಗರ, ಹೂವು-ತೆಂಗಿನ ಗರಿ ಬಳಸಿ ವಿಶೇಷ ಅಲಂಕಾರ
ಇಸ್ಕಾನ್
Follow us
Vinayak Hanamant Gurav
| Updated By: ಆಯೇಷಾ ಬಾನು

Updated on: Sep 06, 2023 | 7:07 AM

ಬೆಂಗಳೂರು, ಸೆ.06: ಶ್ರೀ ಕೃಷ್ಣ ಜನ್ಮಾಷ್ಟಮಿ(Krishna Janmashtami) ಹಿನ್ನಲೆ ಪ್ರತಿ ವರ್ಷದಂತೆ ಈ‌ ಬಾರಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ(ISKCON Temple) ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಕೃಷ್ಣನ ದರ್ಶನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದು ಕೃಷ್ಣನಿಗೆ(Lord Krishna) ಪ್ರಿಯವಾದ ಲಡ್ಡು ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನ ಪ್ರಸಾದ ರೂಪದಲ್ಲಿ ನೀಡಲಾಗುತ್ತಿದೆ. ಇಂದು ಇಸ್ಕಾನ್ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಭಕ್ತಾದಿಗಳು ಕೃಷ್ಣನನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ. ಇನ್ನೂ ಇಸ್ಕಾನ್ ಅಷ್ಟೇ ಅಲ್ಲದೇ ನಗರದ ಬೇರೆ ಕಡೆಗಳಲ್ಲೂ ಇಸ್ಕಾನ್ ಆಡಳಿತ ಮಂಡಳಿ ಭರ್ಜರಿ ತಯಾರಿ ಮಾಡಿಕೊಂಡಿದ್ದು ಹೇಗೆಲ್ಲ ತಯಾರಿ ಮಾಡಿಕೊಂಡಿದೆ. ಆ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಕೇರಳ ಮಾದರಿಯಲ್ಲಿ ಹೂವು ಹಾಗೂ ತೆಂಗಿನ ಗರಿಗಳನ್ನ ಉಪಯೋಗಿಸಿ ವಿಶೇಷ ಅಲಂಕಾರ

ಹೌದು, ಇಂದು ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆ ಹಿನ್ನಲೆಯಲ್ಲಿ ಇಂದು ಹಾಗೂ ನಾಳೆ ಇಸ್ಕಾನ್ ಬೆಂಗಳೂರು ದೇವಸ್ಥಾನದಲ್ಲಿ ಎರಡು ದಿನ ಶ್ರೀ ಕೃಷ್ಣ ಜನ್ಮಾಷ್ಟಮಿ ಅತೀ ವಿಜೃಂಭಣೆಯಿಂದ ಆಚರಣೆ‌ಮಾಡಲು ಸಕಲ ರೀತಿ ತಯಾರಿ‌ಮಾಡಿಕೊಳ್ಳಲಾಗಿದೆ. ಬೆಂಗಳೂರು ಬೆಳೆಯುತ್ತಿರುವುದರಿಂದ ರಾಜಾಜಿನಗರ ಇಸ್ಕಾನ್ ಅಲ್ಲದೇ ಕನಕಪುರ ರಸ್ತೆಯಲ್ಲಿರುವ ವೈಕುಂಟ ಗಿರಿಯಲ್ಲಿ ಹಾಗೂ ಐಟಿಬಿಟಿ ಸಾಫ್ಟವೇರ್ ಹೆಚ್ಚಾಗಿರುವ ವೈಟ್ ಫಿಲ್ಡ್ ನಲ್ಲಿ ಭಾರತೀಯ ಸಂಸ್ಕೃತಿ ಕೃಷ್ಣನ ಜೊತೆ ಜೋಡಿಸಲು ಅಲ್ಲಿರುವ ಕೆಟಿಪಿಓ ಮೈದಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಯಂದು ಯಾವ ಮಂತ್ರ ಜಪಿಸಬೇಕು?

ಸುಮಾರು 1 ವರೆ ಲಕ್ಷಕ್ಕೂ ಅಧಿಕ ಜನರು ಭಾಗಿಯಾಗುವ ನೀರಿಕ್ಷೆ ಇದ್ದು, ಬೆಂಗಳೂರಿನ ಇಸ್ಕಾನ್ ದೇವಸ್ಥಾನದಲ್ಲಿ ಕೇರಳ ಮಾದರಿಯಲ್ಲಿ ಹೂವು ಹಾಗೂ ತೆಂಗಿನ ಗರಿಗಳನ್ನ ಉಪಯೋಗಿಸಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಅಲ್ಲದೇ ವೈಟ್ ಫಿಲ್ಡ್ ನಲ್ಲಿ ಸಾತ್ವಿಕ ತಿಂಡಿ ತಿನಿಸುಗಳ ಪ್ರಮುಖ ರೆಸ್ಟೋರೆಂಟ್ ಗಳಿಂದ ತಯಾರಿಸಿ ದೇವರಿಗೆ ನೈವೇದ್ಯ ನೀಡಿ ಬರುವಂತಹ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೃಷ್ಣನಿಗೆ ಇಷ್ಟವಾದ  ಸಿಹಿ, ಖಾರ ತಯಾರಿಸಲಾಗಿದೆ. ಬೂಂದಿ ಲಡ್ಡು, ರವೆ ಲಾಡೂ, ಚಂದ್ರಕಲಾ, ಜಹಾಂಗೀರ್, ಕಾಜು, ಬರ್ಫಿ, ಮುರ್ಕು, ಸಮೋಸಾ ವಿವಿಧ ರೀತಿಯ ಲಾಡೂಗಳನ್ನ ತಯಾರಿಸಿ ಪೂರ್ವ ಸಿದ್ಧತೆಗಳನ್ನ ಮಾಡಿಕೊಂಡಿದೆ ಇಸ್ಕಾನ್ ಆಡಳಿತ ಮಂಡಳಿ.

ಇನ್ನೂ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಜನ ಸಾಗರವೇ ಹರಿದು ಬರುತ್ತೆ ಹೀಗಾಗಿ ಸಹಸ್ರಾರು ಭಕ್ತರು ಶ್ರೀ ಕೃಷ್ಣನ ದರ್ಶನವನ್ನ ಪಡೆಯಲು ಮುಂದಾಗ್ತಾ ಇದ್ದಾರೆ. ಇನ್ನೂ ಕೃಷ್ಣನ ಅಲಂಕಾರ ಕಣ್ತುಂಬಿಕೊಳ್ಳುತ್ತಿರುವ ಭಕ್ತರು ಅಲಂಕಾರ ನೋಡ್ತಾ ಇದ್ದರೆ ಮಂತ್ರ ಮುಗ್ಧ ಆಗಿ ಬಿಡುವಂತಿದೆ ಅಲಂಕಾರ ತುಂಬಾ ಚೆನ್ನಾಗಿದೆ. ಇಲ್ಲಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಮನಃ ಶಾಂತಿ ಸಿಗುತ್ತೆ ಎಂದು ಭಕ್ತರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ