ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ನೀಡಲು ಕೆಎಸ್ಆರ್​ಟಿಸಿ ನಿರ್ಧಾರ

| Updated By: sandhya thejappa

Updated on: Mar 01, 2022 | 11:03 AM

ವಿಮಾನ ಮೂಲಕ ಕರ್ನಾಟಕಕ್ಕೆ ಬಂದಿಳಿದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಪರಿಗಣಿಸಿ ವಿಮಾನ ನಿಲ್ದಾಣದಿಂದ ಅವರ ಊರುಗಳಿಗೆ ತಲುಪಿಸುವ ಮೂಲಕ ಉಚಿತ ಪ್ರಯಾಣವನ್ನು ನೀಡಲು ಕೆಎಸ್ಆರ್​ಟಿಸಿ ಬಸ್​ನಲ್ಲಿ ನಿರ್ಧರಿಸಿದೆ.

ಉಕ್ರೇನ್​ನಿಂದ ಬಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ನೀಡಲು ಕೆಎಸ್ಆರ್​ಟಿಸಿ ನಿರ್ಧಾರ
ಕೆಎಸ್​ಆರ್​ಟಿಸಿ ಬಸ್
Follow us on

ಬೆಂಗಳೂರು: ಉಕ್ರೇನ್ (Ukrain) ಮತ್ತು ರಷ್ಯಾ (Russia) ನಡುವೆ ಯುದ್ಧ ಮುಂದುವರಿದಿದೆ. ರಷ್ಯಾ ದಾಳಿಗೆ ಉಕ್ರೇನ್ ಅಕ್ಷರಶಃ ಭಯಭೀತಗೊಂಡಿದೆ. ಊಟ, ವಸತಿ ಇಲ್ಲದೆ ಜನ ಕಂಗಾಲಾಗಿದ್ದಾರೆ. ಈ ನಡುವೆ ವಿದ್ಯಾಭ್ಯಾಸಕ್ಕೆಂದು ಉಕ್ರೇನ್ಗೆ ತೆರಳಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳು ವಾಪಸ್ ಬರಲು ಪರದಾಡುತ್ತಿದ್ದಾರೆ. ಈಗಾಗಲೇ ಹಲವು ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯಕ್ಕೆ ವಾಪಾಸ್ ಆಗಿದ್ದಾರೆ. ಉಳಿದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಸರ್ಕಾರ ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಕರ್ನಾಟಕಕ್ಕೆ ಬಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ ನೀಡಲು ಕೆಎಸ್ಆರ್​ಟಿಸಿ ಮುಂದಾಗಿದೆ.

ರಾಜ್ಯದ ಹಲವು ವಿದ್ಯಾರ್ಥಿಗಳು ತಾಯ್ನಾಡಿಗೆ ಬಂದಿದ್ದಾರೆ. ವಿಮಾನ ಮೂಲಕ ಕರ್ನಾಟಕಕ್ಕೆ ಬಂದಿಳಿದ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಪರಿಗಣಿಸಿ ವಿಮಾನ ನಿಲ್ದಾಣದಿಂದ ಅವರ ಊರುಗಳಿಗೆ ತಲುಪಿಸುವ ಮೂಲಕ ಉಚಿತ ಪ್ರಯಾಣವನ್ನು ನೀಡಲು ಕೆಎಸ್ಆರ್​ಟಿಸಿ ಬಸ್​ನಲ್ಲಿ ನಿರ್ಧರಿಸಿದೆ. ಕರ್ನಾಟಕ ರಾಜ್ಯ ವಿಮಾನ ನಿಲ್ದಾಣದೊಳಗಿನ ಎಲ್ಲಾ ನೋಡಲ್ ಅಧಿಕಾರಿಗಳು ಮತ್ತು ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸಿ ಉಚಿತ ಪ್ರಯಾಣವನ್ನು ಅನುವು ಮಾಡಿಕೊಡಬೇಕು ಅಂತ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಶಿವಯೋಗಿ ಸಿ.ಕಳಸದ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಉಕ್ರೇನ್​ನಲ್ಲಿ ಕನ್ನಡಿಗರ ಪರದಾಟ:
ಬಾಗಲಕೋಟೆ ಎಂಬಿಬಿಎಸ್ ವಿದ್ಯಾರ್ಥಿ ಮನೋಜ್ ಕುಮಾರ ಚಿತ್ರಗಾರ ಮನೆಯಲ್ಲಿ ನೀರವಮೌನ ಆವರಿಸಿದೆ. ಮಗ ಇನ್ನು ಮನೆಗೆ ವಾಪಸ್ ಆಗದ ಹಿನ್ನೆಲೆ ಕುಟುಂಬಸ್ಥರು ಶಿವರಾತ್ರಿ ಆಚರಿಸಿಲ್ಲ. ಶಿವ ನನ್ನ ಮಗ ಹಾಗೂ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಲಿ. ನಮ್ಮ ಮಗ ಖಾರ್ಕಿವ್​ನಲ್ಲಿ ಇದ್ದಾನೆ. ಆ ಜಾಗದಲ್ಲಿ ಈಗ ಪರಿಸ್ಥಿತಿ ಬಹಳ ಬಿಗಡಾಯಿಸಿದೆ. ಬಾಂಬ್ ಬ್ಲಾಸ್ಟ್ ಆಗುತ್ತಿದೆ. ಮಕ್ಕಳು ನಲ್ಲಿ ನೀರು ಕುಡಿಯುತ್ತಿವೆ. ಸರಿಯಾಗಿ ಊಟ ಸಿಗುತ್ತಿಲ್ಲ. ಅಂಡರ್ ಗ್ರೌಂಡ್​ನಲ್ಲಿ ಉಸಿರಾಟ ತೊಂದರೆ ಚಳಿ ವಿಪರೀತ ಇದೆಯಂತೆ. ಅಲ್ಲಿನ ಪರಿಸ್ಥಿತಿ ಮಗ ಹೇಳಿದಾಗ ದುಃಖ ಆಗುತ್ತಿದೆ. ಟಿವಿ9 ಮೂಲಕ ನಾನು ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಖಾರ್ಕಿವ್​ನಲ್ಲಿ ನಮ್ಮ ಮಗ ಸೇರಿದಂತೆ ಅನೇಕ ಮಕ್ಕಳಿದ್ದಾರೆ. ಪಶ್ಚಿಮ ಭಾಗದಲ್ಲಿದ್ದವರನ್ನು ಮಾತ್ರ ಕರೆತರಲಾಗುತ್ತಿದೆ. ಮೊದಲು ಪೂರ್ವ ಭಾಗದಲ್ಲಿರುವವರನ್ನು ಕರೆ ತನ್ನಿ ಅಂತ ಮನೋಜ್ ತಾಯಿ ಸುಮಿತ್ರಾ ಮನವಿ ಮಾಡಿದರು.

ಇದನ್ನೂ ಓದಿ

ಚಿಕ್ಕಬಳ್ಳಾಪುರದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಇಂದು ಸಿಎಂ ಭೇಟಿ; ಶಿವೋತ್ಸವ ಕಾರ್ಯಕ್ರಮದಲ್ಲಿ ಭಾಗಿ

ಉಕ್ರೇನ್​ಗೆ ಔಷಧ, ಅಗತ್ಯವಸ್ತುಗಳ ನೆರವು ನೀಡಲಿರುವ ಭಾರತ; ಪ್ರಜೆಗಳ ರಕ್ಷಣೆಗೆ ನೆರೆ ರಾಷ್ಟ್ರಗಳಿಗೂ ಸಹಾಯ ಮಾಡುವುದಾಗಿ ತಿಳಿಸಿದ ಪ್ರಧಾನಿ

Published On - 10:54 am, Tue, 1 March 22