ಉಕ್ರೇನ್​ಗೆ ಔಷಧ, ಅಗತ್ಯವಸ್ತುಗಳ ನೆರವು ನೀಡಲಿರುವ ಭಾರತ; ಪ್ರಜೆಗಳ ರಕ್ಷಣೆಗೆ ನೆರೆ ರಾಷ್ಟ್ರಗಳಿಗೂ ಸಹಾಯ ಮಾಡುವುದಾಗಿ ತಿಳಿಸಿದ ಪ್ರಧಾನಿ

ಉಕ್ರೇನ್​​ಗೆ ಮಾನವೀಯ ನೆರವು ಕಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಭಾಗ್ಚಿ, ಭಾರತದ ಉಕ್ರೇನ್​​ಗೆ ಔಷಧಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಕಳಿಸಲಿದೆ ಎಂದಿದ್ದಾರೆ.

ಉಕ್ರೇನ್​ಗೆ ಔಷಧ, ಅಗತ್ಯವಸ್ತುಗಳ ನೆರವು ನೀಡಲಿರುವ ಭಾರತ; ಪ್ರಜೆಗಳ ರಕ್ಷಣೆಗೆ ನೆರೆ ರಾಷ್ಟ್ರಗಳಿಗೂ ಸಹಾಯ ಮಾಡುವುದಾಗಿ ತಿಳಿಸಿದ ಪ್ರಧಾನಿ
ಪ್ರಧಾನಿ ಮೋದಿ
Follow us
TV9 Web
| Updated By: Lakshmi Hegde

Updated on:Mar 01, 2022 | 8:42 AM

ಯುದ್ಧಭೂಮಿಯಾಗಿರುವ ಉಕ್ರೇನ್​​ನಲ್ಲಿ (Ukraine Crisis) ಸಿಲುಕಿರುವ ಭಾರತದ ನೆರೆಹೊರೆಯ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳನ್ನು ಸ್ಥಳಾಂತರ ಮಾಡಿ ರಕ್ಷಿಸಲು ಆ ರಾಷ್ಟ್ರಗಳಿಗೆ ನಾವು ಅಗತ್ಯ  ಸಹಾಯ ಮಾಡಲಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಸೋಮವಾರ ಸಂಜೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಹೇಳಿದ್ದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಉಕ್ರೇನ್​​ನಿಂದ ಭಾರತಕ್ಕೆ ಮಾನವೀಯ ನೆರವು ನೀಡಲಾಗುವುದು ಎಂದೂ ಪ್ರಧಾನಿ ಹೇಳಿದ್ದಾರೆ.  ಅಷ್ಟೇ ಅಲ್ಲ, ಅವರು ಈಗಾಗಲೇ ರೊಮೇನಿಯಾದ ಪ್ರಧಾನಮಂತ್ರಿ ಎಚ್​.ಇ.ನಿಕೋಲೇ-ಐಯೋನೆಲ್​ ಸಿಯುಕಾ ಮತ್ತು ಸ್ಲೋವಕ್​ ರಿಪಬ್ಲಿಕ್​​ ಪ್ರಧಾನಿ ಎಡ್ವರ್ಡ್​ ಹೆಗೆರ್​ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡಲು ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಉಕ್ರೇನ್​​ಗೆ ಮಾನವೀಯ ನೆರವು ಕಳಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಭಾಗ್ಚಿ, ಭಾರತದ ಉಕ್ರೇನ್​​ಗೆ ಔಷಧಗಳು ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಕಳಿಸಲಿದೆ. ಈ ಬಗ್ಗೆ ಭಾರತದಲ್ಲಿರುವ ಉಕ್ರೇನ್​ ರಾಯಭಾರಿ ಇಗೋರ್​ ಪೊಲಿಖಾ, ಕೇಂದ್ರ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಹರ್ಷವರ್ಧನ್​ ಶ್ರಿಂಗ್ಲಾ ಅವರ ಬಳಿ ಮನವಿ ಮಾಡಿದ್ದರು. ಮಾನವೀಯ ನೆರವು ನೀಡುವುದಾಗಿ ಭಾರತ ಸರ್ಕಾರ ಹೇಳಿದ್ದರೂ ಕೂಡ ಯಾವ್ಯಾವ ಸಮಯದಲ್ಲಿ ಪೂರೈಕೆಯಾಗಲಿದೆ ಎಂಬ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಉಕ್ರೇನ್​​ನಲ್ಲಿ ಅಗತ್ಯ ಹೆಚ್ಚಿರುವ ಕಾರಣ ತ್ವರಿತವಾಗಿ ಈ ಕಾರ್ಯ ನಡೆಯಲಿದೆ. ಉಕ್ರೇನ್​ ತನ್ನ ಅಗತ್ಯಗಳ ಪಟ್ಟಿಯನ್ನು ಭಾರತಕ್ಕೆ ನೀಡಿದೆ ಎಂದೂ ಹೇಳಲಾಗಿದೆ.

ಈ ಮೊದಲು ಭಾರತದಲ್ಲಿರುವ ಉಕ್ರೇನ್​ ರಾಯಭಾರಿ ಪೊಲಿಖಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಉಕ್ರೇನ್​​ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪಾಲಕರು ಯಾವ ಕಾರಣಕ್ಕೂ ಗಾಭರಿಯಾಗಬಾರದು. ಗಡಿಭಾಗಕ್ಕೆ ಬಂದ ವಿದ್ಯಾರ್ಥಿಗಳ ಮೇಲೆ ಉಕ್ರೇನಿಯನ್​ ಸೈನಿಕರು, ಗಡಿ ರಕ್ಷಕರು ಹಲ್ಲೆ ನಡೆಸುತ್ತಿದ್ದಾರೆ ಎಂಬಂಥ ವಿಡಿಯೋಗಳು ವೈರಲ್ ಆಗುತ್ತಿದೆ. ಆದರೆ ಅದು ಸತ್ಯವಲ್ಲ. ರಷ್ಯಾದಾಳಿಗೆ ತತ್ತರಿಸಿದ ನಾವೆಲ್ಲ ಸಂತ್ರಸ್ತರು. ಅಲ್ಲಿನ ಪರಿಸ್ಥಿತಿ ತುಂಬ ಕಷ್ಟಕರವಾಗಿದೆ. ಪೋಲ್ಯಾಂಡ್ ಮತ್ತು ರೊಮೇನಿಯಾದ ಗಡಿದಾಟಲು ಅನೇಕರು ಕ್ಯೂನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಗರ್ಭಿಣಿಯರು, ವಿದೇಶಗಳ ರಾಯಭಾರಿಗಳೂ ಅಲ್ಲಿದ್ದಾರೆ. ಭಾರತ ತನ್ನ ಪ್ರಜೆಗಳನ್ನು ಸ್ಥಳಾಂತರ ಮಾಡಲು ಉಕ್ರೇನ್​ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: LPG Cylinder Price: 19 ಕೆಜಿ ವಾಣಿಜ್ಯ ಬಳಕೆ ಎಲ್​​ಪಿಜಿ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 105 ರೂ. ಏರಿಕೆ

Published On - 8:34 am, Tue, 1 March 22

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ