ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಸಹಾಯ ಮಾಡುತ್ತಿರುವ ರುಮೇನಿಯಾ ಪ್ರಧಾನಿಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದರು

ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ತಮ್ಮ ವಿಶೇಷ ಪ್ರತಿನಿಧಿಯಾಗಿ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ನಿಯೋಜಿಸುವ ಬಗ್ಗೆಯೂ ಪ್ರಧಾನ ಮಂತ್ರಿ ಚುಕಾ ಅವರಿಗೆ ಪ್ರಧಾನಿ ಮೋದಿ ತಿಳಿಸಿದರು.

ಭಾರತೀಯ ನಾಗರಿಕರ ಸ್ಥಳಾಂತರಕ್ಕೆ ಸಹಾಯ ಮಾಡುತ್ತಿರುವ ರುಮೇನಿಯಾ ಪ್ರಧಾನಿಗೆ ಪ್ರಧಾನಿ ಮೋದಿ ಧನ್ಯವಾದ ಸಲ್ಲಿಸಿದರು
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 01, 2022 | 1:27 AM

ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ (Prime Minister’s Office) ಸೋಮವಾರ ಸಾಯಂಕಾಲ ಬಿಡಿಗಡೆಯಾಗಿರುವ ಪ್ರಕಟಣೆಯೊಂದರ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರುಮೇನಿಯಾದ ಪ್ರಧಾನ ಮಂತ್ರಿ ಹೆಚ್ ಈ ನಿಕೊಲಾಯ್-ಅಯೋನೆಲ್ ಚುಕಾ (Nicolae-Ionel Ciuca) ಆವರೊಂದಿಗೆ ಮಾತುಕತೆ ನಡೆಸಿದರು. ಯುದ್ಧಗ್ರಸ್ಥ ಉಕ್ರೇನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಅಲ್ಲಿಂದ ಹೊರತರಲು ಕಳೆದ ಕೆಲವು ದಿನಗಳಲ್ಲಿ ನೆರವು ಒದಗಿಸುತ್ತಿರುವುದಕ್ಕೆ ಪ್ರಧಾನ ಮಂತ್ರಿ ಮೋದಿಯವರು ನಿಕೊಲಾಯ್ ಚುಕಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಭಾರತದ ನಾರಗರಿಕರು ರುಮೇನಿಯಾ ಪ್ರವೇಶಿಸಲು ವಿಸಾ ಹೊಂದಿರದಿದ್ದರೂ ತಮ್ಮ ದೇಶ ಪ್ರವೇಶಿಸಲು ಅನುಮತಿ ನೀಡಿದಲ್ಲದೆ, ಭಾರತೀಯರನ್ನು ಕರೆತರಲೆಂದು ಕಳಿಸಲಾಗಿದ್ದ ವಿಶೇಷ ವಿಮಾನಗಳಿಗೆ ತನ್ನ ದೇಶದಲ್ಲಿ ಹಾರುವುದಕ್ಕೆ ಅವಕಾಶ ಕಲ್ಪಿಸಿದ ಚುಕಾ ಅವರ ಔದಾರ್ಯತೆಯನ್ನು ಪ್ರಧಾನಿ ಮೋದಿಯವರು ವಿಶೇಷವಾಗಿ ಕೊಂಡಾಡಿದರು.

ಸ್ಥಳೀಯ ಅಧಿಕಾರಿಗಳ ಸಮನ್ವಯದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ತಮ್ಮ ವಿಶೇಷ ಪ್ರತಿನಿಧಿಯಾಗಿ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರನ್ನು ನಿಯೋಜಿಸುವ ಬಗ್ಗೆಯೂ ಪ್ರಧಾನ ಮಂತ್ರಿ ಚುಕಾ ಅವರಿಗೆ ಪ್ರಧಾನಿ ಮೋದಿ ತಿಳಿಸಿದರು.

ಉಕ್ರೇನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವೀಯ ಬಿಕ್ಕಟ್ಟಿನ ಬಗ್ಗೆ ಪ್ರಧಾನಮಂತ್ರಿ ತಮ್ಮ ವಿಷಾದ ವ್ಯಕ್ತಪಡಿಸಿದರು ಮತ್ತು ಯುದ್ಧವನ್ನು ನಿಲ್ಲಿಸಿ ಮತ್ತು ಮಾತುಕತೆಗೆ ಮರಳಲು ಭಾರತ ಎಡೆಬಿಡದೆ ಮಾಡುತ್ತಿರುವ ಮನವಿಯನ್ನು ಪುನರುಚ್ಚರಿಸಿದರು. ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ಮಹತ್ವವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.

ಇದನ್ನೂಓದಿ:  ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ H.D.ದೇವೇಗೌಡ