ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ H.D.ದೇವೇಗೌಡ

ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ ಬರೆದಿದ್ದಾರೆ.

ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದ ಮಾಜಿ ಪ್ರಧಾನಿ H.D.ದೇವೇಗೌಡ
ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ
Follow us
TV9 Web
| Updated By: ಆಯೇಷಾ ಬಾನು

Updated on: Feb 28, 2022 | 11:38 AM

ಬೆಂಗಳೂರು: ಉಕ್ರೇನ್ ಮೇಲೆ ರಷ್ಯಾ ಘನಘೋರ ಯುದ್ಧ(Russia Ukraine War) ಮುಂದುವರಿದಿದೆ. ಇದರಿಂದಾಗಿ ಓದಲು ಉಕ್ರೇನ್ಗೆ ಹೋಗಿದ್ದ ಭಾರತೀಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಡಾಕ್ಟರ್ ಆಗುವ ಕನಸು ಕಂಡಿದ್ದವರು ರಷ್ಯಾ ದಾಳಿಯಿಂದ ಜೀವ ಉಳಿಸಿಕೊಳ್ಳಲು ಪರದಾಡ್ತಿದ್ದಾರೆ. ಸದ್ಯ ಕೇಂದ್ರ ಸರ್ಕಾರ ಆಪರೇಷನ್ ಗಂಗಾ(Operation Ganga) ಹೆಸರಲ್ಲಿನಲ್ಲಿ ಕಾರ್ಯಾಚರಣೆಗಿಳಿದಿದ್ದು ಭಾರತೀಯ ವಿದ್ಯಾರ್ಥಿಗಳನ್ನ ಏರ್ಲಿಫ್ಟ್(Airlift) ಮಾಡಿದೆ. ಈ ನಡುವೆ ಭಾರತೀಯ ವಿದ್ಯಾರ್ಥಿಗಳ ತ್ವರಿತ ಸ್ಥಳಾಂತರಕ್ಕೆ ಮನವಿ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ(Narendra Modi) ಮಾಜಿ ಪ್ರಧಾನಿ H.D.ದೇವೇಗೌಡ(HD Deve Gowda) ಪತ್ರ ಬರೆದಿದ್ದಾರೆ.

ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರವನ್ನು ತ್ವರಿತಗೊಳಿಸಬೇಕು ಎಂದು ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ದೇವೇಗೌಡ ಪತ್ರ ಬರೆದಿದ್ದಾರೆ.

ಉಕ್ರೇನ್ನಲ್ಲಿ ಒಟ್ಟು 406 ಕನ್ನಡಿಗ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬೆಂಗಳೂರು ನಗರ 135, ಮೈಸೂರು 28, ಬಾಗಲಕೋಟೆ 24, ದಕ್ಷಿಣ ಕನ್ನಡ 18, ವಿಜಯಪುರ 18, ತುಮಕೂರಿನವರು 17, ಬೆಂಗಳೂರು ಗ್ರಾಮಾಂತರ 18, ಹಾಸನ ಜಿಲ್ಲೆಯವರು 13, ರಾಯಚೂರು 15, ಕೊಡಗು ಜಿಲ್ಲೆಯ 12 ವಿದ್ಯಾರ್ಥಿಗಳು, ಬೆಳಗಾವಿ 12, ಹಾವೇರಿ 10, ಕೋಲಾರದ 9 ವಿದ್ಯಾರ್ಥಿಗಳು, ದಾವಣಗೆರೆ 9, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 8, ಉಡುಪಿ 7, ಬೀದರ್ 6, ಬಳ್ಳಾರಿ 6, ಚಿತ್ರದುರ್ಗದ ಐವರು ಶಿವಮೊಗ್ಗ 4, ಕಲಬುರಗಿ 4, ಧಾರವಾಡ 4, ಮಂಡ್ಯ 3, ಚಾಮರಾಜನಗರ 4, ಕೊಪ್ಪಳ 3, ರಾಮನಗರ 2, ಗದಗ 2, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯದ 406 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಇನ್ನು ಉಕ್ರೇನ್‌ನಲ್ಲಿ ಸಿಲುಕಿದ್ದ 30 ಕನ್ನಡಿಗರ ಏರ್‌ಲಿಫ್ಟ್ ಮಾಡಲಾಗಿದ್ದು ರಾತ್ರಿ 8 ಗಂಟೆಯವರೆಗೆ 30 ಕನ್ನಡಿಗ ವಿದ್ಯಾರ್ಥಿಗಳು ವಾಪಸ್‌ ಆಗಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳಿಗೆ ನೆರವಾಗಲು ದೆಹಲಿ, ಮುಂಬೈ ಏರ್‌ಪೋರ್ಟ್‌ಗಳಲ್ಲಿ ಫೆಸಿಲಿಟೇಷನ್ ಸೆಂಟರ್ ತೆರೆಯುವಂತೆ ಸಿಎಂರಿಂದ ಸೂಚನೆ ನೀಡಲಾಗಿದೆ. ದೆಹಲಿ, ಮುಂಬೈ ನಿಲ್ದಾಣಗಳಲ್ಲಿ ನೋಡಲ್ ಆಫೀಸರ್ಸ್‌ ನೇಮಕ ಮಾಡಲಾಗಿದೆ. ದೆಹಲಿ ಏರ್‌ಪೋರ್ಟ್‌ನ ನೋಡಲ್ ಅಧಿಕಾರಿಗಳಾಗಿ ದೆಹಲಿಯ ಕರ್ನಾಟಕ ಭವನದ ಸ್ಥಾನೀಯ ಆಯುಕ್ತರ ಕಚೇರಿಯ ಮೂವರು ಮ್ಯಾನೇಜರ್‌ನ್ನು ನೇಮಕ ಮಾಡಲಾಗಿದೆ. ಅನಂತ, ವೆಂಕಟೇಶ್, ಜಗದೀಶ್‌ರನ್ನು ಸರ್ಕಾರ ನೇಮಿಸಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ನೋಡಲ್ ಅಧಿಕಾರಿಗಳಾಗಿ ನಾಲ್ವರನ್ನು ನೇಮಿಸಿದ್ದು ಬೆಳಗಾವಿ ಸ್ಮಾರ್ಟ್ ಸಿಟಿ ಲಿ. ಎಂಡಿ ಪ್ರವೀಣ್ ಬಾಗೇವಾಡಿ, ಕುಮಾರಕೃಪಾ ಅತಿಥಿ ಗೃಹ ಮ್ಯಾನೇಜರ್ ಪ್ರೇಮ್ ಕುಮಾರ್, ಡಿಪಿಎಆರ್ ಅಧೀನ ಕಾರ್ಯದರ್ಶಿ ವಿರೂಪಾಕ್ಷಿ ಹಾಗೂ ಬೆಳಗಾವಿ ಎಸಿ ರವಿ ಕರಿಲಿಂಗಣ್ಣವರ್ ನೇಮಿಸಲಾಗಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್​​ ಯುದ್ಧ; ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಜಾಣನಡೆ, ಮತ್ತೆ ಮತದಾನದಿಂದ ದೂರ !

Russia-Ukraine War: ರಷ್ಯಾದ 3500ಕ್ಕೂ ಹೆಚ್ಚು ಸೈನಿಕರನ್ನು ಕೊಂದಿದ್ದಾಗಿ ಹೇಳಿದ ಉಕ್ರೇನ್​; ಇಲ್ಲಿದೆ ಪ್ರಮುಖ ಬೆಳವಣಿಗೆಗಳ ವಿವರ

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ