AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia Ukraine War: ಉಕ್ರೇನ್​ನಿಂದ ಮನೆಗೆ ಮರಳಿದ ಗುಜರಾತ್​ನ 27 ವಿದ್ಯಾರ್ಥಿಗಳು; ಪುಷ್ಪಗುಚ್ಛ ನೀಡಿ ಸ್ವಾಗತಿಸಿದ ಸಿಎಂ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರದ ಗಂಗಾ ಪರ್ಜೋಶ್ ಕಾರ್ಯಾಚರಣೆ ನಡೆಯುತ್ತಿದೆ.ಇಂದು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತ ಐದನೇ ವಿಮಾನ ದೆಹಲಿಗೆ ಆಗಮಿಸಿದೆ.ಐದನೇ ವಿಮಾನದಲ್ಲಿ 249 ಭಾರತೀಯರು ತವರಿಗೆ ಮರಳಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on:Feb 28, 2022 | 4:55 PM

Share
ಗುಜರಾತ್‌ನ 27 ವಿದ್ಯಾರ್ಥಿಗಳು ಆಪರೇಷನ್ ಗಂಗಾ ಅಡಿಯಲ್ಲಿ ಮನೆಗೆ ಮರಳಿದ್ದಾರೆ. ವಿದ್ಯಾರ್ಥಿಗಳು ಉಕ್ರೇನ್‌ನಿಂದ ರೊಮೇನಿಯಾಗೆ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ರಸ್ತೆ ಮಾರ್ಗವಾಗಿ ಗಾಂಧಿನಗರಕ್ಕೆ ಕರೆದೊಯ್ಯಲಾಯಿತು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಶಿಕ್ಷಣ ಸಚಿವ ಜಿತು ವಾಘನ್ ಅವರು ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

1 / 5
ಶಿಕ್ಷಣ ಸಚಿವ ಜಿತು ವಾಘನ್ ಅವರು ಗುಜರಾತ್ ಸರ್ಕಾರ ಮತ್ತು ಭಾರತ ಸರ್ಕಾರವು ಯುದ್ಧದ ನಡುವೆ ವಿದ್ಯಾರ್ಥಿಗಳನ್ನು ಮರಳಿ ಕರೆತಂದಿದ್ದಾರೆ ಎಂದು ಶ್ಲಾಘಿಸಿದರು. ಇತರ ವಿದ್ಯಾರ್ಥಿಗಳನ್ನು ಕೂಡ ಸುರಕ್ಷಿತವಾಗಿ ಗುಜರಾತ್‌ಗೆ ಕರೆತರಲಾಗುವುದು ಎಂದು ಭರವಸೆ ನೀಡಿದರು.

2 / 5
ಪ್ರಸ್ತುತ, ಉಕ್ರೇನ್‌ನಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಉಕ್ರೇನ್‌ನಿಂದ ಹಿಂದಿರುಗಿದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಅಲ್ಲಿ ಗುಂಡಿನ ದಾಳಿ ಮತ್ತು ಕ್ಷಿಪಣಿ ದಾಳಿಗಳು ನಡೆಯುತ್ತಿವೆ. ಗುಜರಾತಿನ ಕೆಲವು ವಿದ್ಯಾರ್ಥಿಗಳು ಈಗಲೂ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.

3 / 5
ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರೊಂದಿಗೆ, ಪ್ರಧಾನ ಕಾರ್ಯದರ್ಶಿ ಹೈದರ್, ಗಾಂಧಿನಗರ ಕಲೆಕ್ಟರ್ ಕುಲದೀಪ್ ಆರ್ಯ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

4 / 5
27 ವಿದ್ಯಾರ್ಥಿಗಳ ಪೈಕಿ ಗಾಂಧಿನಗರ, ಅಹಮದಾಬಾದ್, ಭರೂಚ್, ವಲ್ಸಾದ್, ವಡೋದರಾ, ಸೂರತ್, ಗಿರ್ ಸೋಮನಾಥ್, ಅಮ್ರೇಲಿ, ಸುರೇಂದ್ರನಗರದ ವಿದ್ಯಾರ್ಥಿಗಳು ವಾಪಸಾಗಿದ್ದಾರೆ.

5 / 5

Published On - 4:39 pm, Mon, 28 February 22