ಲಕ್ಕಸಂದ್ರ ಮೆಟ್ರೋ ಕಾಮಗಾರಿ: ಏಪ್ರಿಲ್​ನಿಂದ ಒಂದು ವರ್ಷ ಈ ರಸ್ತೆ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್

| Updated By: Rakesh Nayak Manchi

Updated on: Mar 30, 2024 | 3:07 PM

ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ ಕಾಮಗಾರಿ ಹಿನ್ನೆಲೆ ಬನ್ನೇರುಘಟ್ಟ ಮುಖ್ಯರಸ್ತೆಯ ಉತ್ತರ ದಿಕ್ಕಿನ ಮಾರ್ಗವನ್ನು ಮತ್ತು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ವರೆಗೆ ಸಂಚಾರವನ್ನು ಒಂದು ವರ್ಷ ಬಂದ್ ಮಾಡಲಾಗುತ್ತಿದೆ. ವಾಹನ ಸವರಾರರ ಅನುಕೂಲಕ್ಕಾಗಿ ಬಿಎಂಆರ್​ಸಿಎಲ್ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.

ಲಕ್ಕಸಂದ್ರ ಮೆಟ್ರೋ ಕಾಮಗಾರಿ: ಏಪ್ರಿಲ್​ನಿಂದ ಒಂದು ವರ್ಷ ಈ ರಸ್ತೆ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್
ಲಕ್ಕಸಂದ್ರ ಮೆಟ್ರೋ ನಿಲ್ದಾಣ ಕಾಮಗಾರಿ: ಏಪ್ರಿಲ್​ನಿಂದ ಒಂದು ವರ್ಷ ಮೈಕೋ ಸಿಗ್ನಲ್‌-ಆನೆಪಾಳ್ಯ ಜಂಕ್ಷನ್‌ ನಡುವೆ ಸಂಚಾರ ಬಂದ್
Image Credit source: magicbricks
Follow us on

ಬೆಂಗಳೂರು, ಮಾ.30: ಲಕ್ಕಸಂದ್ರ ಸುರಂಗ ಮೆಟ್ರೋ ನಿಲ್ದಾಣದ (Lakkasandra Metro) ಕಾಮಗಾರಿ ಹಿನ್ನೆಲೆ ಏಪ್ರಿಲ್ 1 ರಿಂದ ಬನ್ನೇರುಘಟ್ಟ (Bannerghatta) ಮುಖ್ಯರಸ್ತೆಯ ಉತ್ತರ ದಿಕ್ಕಿನ ಮಾರ್ಗ ಮತ್ತು ಮೈಕೋ ಸಿಗ್ನಲ್‌ನಿಂದ ಆನೆಪಾಳ್ಯ ಜಂಕ್ಷನ್‌ ನಡುವೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಎಂಆರ್​ಸಿಎಲ್, ಏಪ್ರಿಲ್ 1 ರಿಂದ ಒಂದು ವರ್ಷ ಈ ಮಾರ್ಗಗಳ ನಡುವೆ ಸಂಚಾರ ಬಂದ್ ಮಾಡಲಾಗುತ್ತದೆ ಎಂದಿದೆ.

ಬನ್ನೇರುಘಟ್ಟ ಮುಖ್ಯರಸ್ತೆಯ ಡೈರಿ ಸರ್ಕಲ್ ಕಡೆಯಿಂದ ಚಲಿಸುವ ವಾಹನಗಳು ಮತ್ತು ಆನೆಪಾಳ್ಯ ಜಂಕ್ಷನ್ ಕಡೆಗೆ ಚಲಿಸಬೇಕಾದ ವಾಹನಗಳು ಮೈಕೋ ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ ಬಾಷ್ ಲಿಂಕ್ ರಸ್ತೆಯ ಮೂಲಕ ಆಡುಗೋಡಿ ಸಿಗ್ನಲ್ ತಲುಪಿ ಎಡಕ್ಕೆ ತಿರುಗಿ ಚಲಿಸುವಂತೆ ಬಿಎಂಆರ್​ಸಿಎಲ್ ತಿಳಿಸಿದೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಯುವತಿಯರಿಬ್ಬರ ಹೋಳಿ ಆಚರಣೆ; ಅಸಭ್ಯ ವರ್ತನೆಗೆ ಪ್ರಯಾಣಿಕರು ಕಿಡಿ

ಆನೆಪಾಳ್ಯ ಜಂಕ್ಷನ್‌ನಿಂದ, ಡೈರಿ ಸರ್ಕಲ್ ಕಡೆಗೆ ಚಲಿಸುವ ವಾಹನ ಸಂಚಾರದಲ್ಲಿ ಯಾವುದೆ ವ್ಯತ್ಯಯವಿರುವುದಿಲ್ಲ. ಡೈರಿ ಸರ್ಕಲ್‌ನಿಂದ ಶಾಂತಿನಗರ ಕಡೆಗೆ ಚಲಿಸುವ ವಾಹನಗಳು ವಿಲ್ಸನ್ ಗಾರ್ಡನನ್​ನ 7ನೇ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುವು ತೆಗೆದುಕೊಳ್ಳಲು ಸೂಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:06 pm, Sat, 30 March 24