ಬೆಂಗಳೂರು, ಜನವರಿ 18: ಗಣರಾಜ್ಯೋತ್ಸವ (Republic Day) ಪ್ರಯುಕ್ತ ಲಾಲ್ಬಾಗ್ನಲ್ಲಿ ಆಯೋಜಸಿರುವ 215ನೇ ಫ್ಲವರ್ ಶೋ (Lalbagh Flower Show) ವನ್ನು ಬಸವಣ್ಣನವರ ಪ್ರತಿಮೆಗೆ ಹೂ ಅರ್ಪಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಬಳಿಕ ಫ್ಲವರ್ ಶೋವನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ವೀಕ್ಷಣೆ ಮಾಡಿದ್ದು, ಸಚಿವ ರಾಮಲಿಂಗರೆಡ್ಡಿ ಕೂಡ ಸಾಥ್ ನೀಡಿದರು. ಈ ಬಾರಿ ಫ್ಲವರ್ ಶೋನಲ್ಲಿ 68 ಬಗೆಯ 32 ಲಕ್ಷ ಹೂವುಗಳ ಬಳಕೆ ಮಾಡಲಾಗಿದೆ. ಇಂದಿನಿಂದ ಜನವರಿ 28ರವರೆಗೆ ಫಲಪುಷ್ಪ ಪ್ರದರ್ಶನಕ್ಕೆ ಅವಕಾಶವಿದ್ದು, ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ವೀಕ್ಷಿಸಬಹುದಾಗಿದೆ.
215ನೇ ಫಲಪುಷ್ಟ ಪ್ರದರ್ಶನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಪ್ರತಿರೂಪ ಅರಳಿದ್ದು, ಲಾಲ್ಬಾಗ್ನ ಗಾಜಿನಮನೆಯಲ್ಲಿ ಸೇವಂತಿಗೆ, ಗುಲಾಬಿ ಹೂವುಗಳಿಂದ ಅನುಭವ ಮಂಟಪ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಅಧಿಕೃತ ಘೋಷಣೆಯೊಂದೇ ಬಾಕಿ
ವಿದೇಶದ ವಿಶೇಷ ಆರ್ಕೆಸ್ಟ್ರಾಗಳಾದ ವ್ಯಾನ್ಸ್, ಪ್ಯಾಲನೋಪ್ಸ್, ಲ್ಯಾಡ್ಸ್, ಮಕರ, ಕ್ಯಾಟ್ಲಿಯಾ ಹೂಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.
ಫ್ಲವರ್ ಶೋ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಸಾಕಷ್ಟು ಜನ ಸ್ವಾಮೀಜಿಯವರು ನನ್ನ ಭೇಟಿಮಾಡಿದರು. ಸಾಂಸ್ಕೃತಿಕ ನಾಯಕ ಅಂತ ಬಸವಣ್ಣನವರನ್ನ ಕರೆಯಬೇಕು ಅಂತ ಒತ್ತಾಯ ಮಾಡಿದರು. ಹೀಗಾಗಿ ಕ್ಯಾಬಿನೆಟ್ ಮಿಟಿಂಗ್ನಲ್ಲಿ ತೀರ್ಮಾನ ಮಾಡಿದ್ದೇವೆ. ಇನ್ಮುಂದೆ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ. ಶಿಕರಿಪುರದ 46 ಎಕರೆ ಜೈಲಿನ ಜಾಗಕ್ಕೆ ಅಲ್ಲಮ ಪ್ರಭುಜಾಗಕ್ಕೆ ನಾಮಕರಣ ಮಾಡಿದ್ದೇವೆ. ಅನುಭವ ಮಂಟಪದ ಬಳಿ ಫ್ರಿಡಂ ಪಾರ್ಕ್ ಅಂತ ಪಾರ್ಕ್ ಇದೆ. ಆ ಪಾರ್ಕ್ ಗೆ ಅಲ್ಲಮ ಪ್ರಭು ಪಾರ್ಕ್ ಅಂತ ಕರೆಯಲಾಗುತ್ತೆ ಎಂದು ಹೇಳಿದ್ದಾರೆ.
ಲಾಲ್ ಬಾಗ್ ಎಂದಿನಂತೆ ಈ ವರ್ಷವು ಫಲಪುಷ್ಪ ಪ್ರದರ್ಶನವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಅಯೋಜನೆ ಮಾಡಿದ್ದಾರೆ. ಈ ವರ್ಷದ ಫ್ಲವರ್ ಶೋ ನಾ ನಾನು ಮತ್ತೆ ಡಿಸಿಎಂ ಉದ್ಘಾಟನೆ ಮಾಡಿದ್ದೇವೆ. 12 ಶತಮಾನದಲ್ಲಿದಲ್ಲಿ ಸಮಾನತೆಯನ್ನ ನಿರ್ಮಾಣ ಮಾಡುವ ಸಲುವಾಗಿ ಜಾತಿ ಹೋಗಲಾಡಿಸುವ ಸಲುವಾಗಿ ಬಸವಣ್ಣನವರು ಹೋರಾಡಿದ್ದರು. ಇವುಗಳನ್ನ ಪರಿಚಯಿಸುವ ದೃಷ್ಟಿಯಿಂದ ತೋಟಗಾರಿಕೆ ಇಲಾಖೆ ಪ್ರದರ್ಶನ ಏರ್ಪಡಿಸಿದೆ ಎಂದರು.
ಇದನ್ನೂ ಓದಿ: ಜನವರಿ 18 ರಿಂದ ಲಾಲ್ಬಾಗ್ ಫ್ಲವರ್ ಶೋ ಆರಂಭ: ಟಿಕೆಟ್ ದರ, ವಿಶೇಷತೆ ಏನು? ಇಲ್ಲಿದೆ ಮಾಹಿತಿ
ಬಸವಣ್ಣನವರ ಸಂದೇಶವನ್ನ ಜನರಿಗೆ ತಲುಪಿಸುವ ಕೆಲಸವನ್ನ ತೋಟಗಾರಿಕೆ ಮಾಡಿದೆ. ಈ ಫ್ಲವರ್ ಶೋಗೆ 35 ಲಕ್ಷ ಹೂಗಳನ್ನ ಬಳಕೆ ಮಾಡಿ ಫ್ಲವರ್ ಶೋ ಆಯೋಜನೆ ಮಾಡಿದ್ದಾರೆ. ಬೆಂಗಳೂರು ಜನರು ಇದರ ಸದುಪಯೋಗ ಪಡೆದುಕೊಳ್ಳಿ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಬೆಳವಣಿಗೆಯ ಪರಿಚಯಿಸುವ ಕೆಲಸ ತೋಟಗಾರಿಕೆ ಇಲಾಖೆ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 pm, Thu, 18 January 24